೨೦೦೬
ಗೋಚರ
೨೦೦೬ - ಇಪ್ಪತ್ತೊಂದನೇ ಶತಮಾನದ ಆರನೇ ವರ್ಷ
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]- ಜನವರಿ ೫ - ವಜ್ರಮುನಿ
- ಫೆಬ್ರುವರಿ ೨ - ಎಸ್.ಕೆ.ರಾಮಚಂದ್ರ ರಾವ್
- ಏಪ್ರಿಲ್ ೧೨ - ಡಾ.ರಾಜ್ಕುಮಾರ್, ಕನ್ನಡ ಚಿತ್ರರಂಗದ ಪ್ರಮುಖ ನಟ
- ಮೇ ೩ - ಪ್ರಮೋದ್ ಮಹಾಜನ್, ಭಾರತದ ಮಾಜಿ ಕೇಂದ್ರ ಸಚಿವ
- ಮೇ ೬ - ಟಿ.ಪಟ್ಟಾಭಿರಾಮ ರೆಡ್ಡಿ, ಕನ್ನಡ ಚಿತ್ರರಂಗದ ನಿರ್ದೇಶಕ ಮತ್ತು ನಿರ್ಮಾಪಕ
- ಜೂನ್ ೨೩ - ಬುಧಿ ಕುಂದೆರನ್, ಕ್ರಿಕೆಟ್ ಆಟಗಾರ
- ಜುಲೈ ೦೮ - ರಾಜಾ ರಾವ್
- ಜುಲೈ ೧೮ - ಶೇಣಿ ಗೋಪಾಲಕೃಷ್ಣ ಭಟ್
- ಜುಲೈ ೨೭ - ಮತಿಘಟ್ಟ ಕೃಷ್ಣಮೂರ್ತಿ
- ಜುಲೈ ೨೯ - ಎಸ್.ಕೆ.ಕರೀಂಖಾನ್
- ಆಗಸ್ಟ್ ೬ - ಮಹಾದೇವಿತಾಯಿ
- ಆಗಸ್ಟ್ ೨೧ - ಉಸ್ತಾದ್ ಬಿಸ್ಮಿಲ್ಲಾ ಖಾನ್, ಜಾನಪದ ತಜ್ಞ ಹಾಗು ಭಾರತದ ಸ್ವಾತಂತ್ರ್ಯ ಹೋರಾಟಗಾರ
- ಆಗಸ್ಟ್ ೨೭ - ಹೃಷಿಕೇಶ ಮುಖರ್ಜಿ
- ಸೆಪ್ಟೆಂಬರ್ ೪- ಸ್ಟೀವ್ ಇರ್ವಿನ್
- ಸೆಪ್ಟೆಂಬರ್ ೨೪- ಪದ್ಮಿನಿ
- ಅಕ್ಟೋಬರ್ ೨೪ - ಆರ್.ಆರ್.ಕೇಶವಮೂರ್ತಿ - ಪಿಟೀಲು ವಾದಕರು.
- ಅಕ್ಟೋಬರ್ ೨೪ - ಸ.ಜ.ನಾಗಲೋಟಿ ಮಠ
- ಅಕ್ಟೋಬರ್ ೨೯ - ಜಯಶ್ರೀ
- ನವೆಂಬರ್ ೯ - ಎಚ್.ಜಿ.ರಾಧಾದೇವಿ - ಕಾದಂಬರಿಗಾರ್ತಿ
- ನವೆಂಬರ್ ೧೪ - ಸೂರ್ಯನಾರಾಯಣ ಚಡಗ - ಕಾದಂಬರಿಕಾರ
- ಡಿಸೆಂಬರ್ ೩೧ - ಕಾಕೋಳು ಸರೋಜಾರಾವ್ - ಕಾದಂಬರಿಗಾರ್ತಿ
ಪ್ರಮುಖ ವಿದ್ಯಮಾನಗಳು
[ಬದಲಾಯಿಸಿ]- ಪ್ಯಾಲೆಸ್ಟೀನ್ನಲ್ಲಿ ನಡೆದ ಚುನಾವಣೆಯಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸುವ ಬಣ ಹಮಾಸ್ ಗೆಲುವು.
- ಕರ್ನಾಟಕ ರಾಜ್ಯದಲ್ಲಿ ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸಮ್ಮಿಶ್ರ ಸರಕಾರ ಪತನ.
- ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾ ಪಕ್ಷದ ಸಮ್ಮಿಶ್ರ ಸರಕಾರ ಅಧಿಕಾರ ಸ್ವೀಕಾರ.
- ಭಾರತ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದಲ್ಲಿ ಆತಿಥೇಯರೆದುರು ಟೆಸ್ಟ್ ಸರಣಿ ಸೋಲು.
- ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಸರಣಿ ಡ್ರಾನಲ್ಲಿ ಅಂತ್ಯ.
- ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಎಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿ ಜಯ
- ಏಪ್ರಿಲ್ ೧೩: ಕಂಠೀರವ ಸ್ಟೂಡಿಯೋದಲ್ಲಿ ಕರ್ನಾಟಕರತ್ನ ಪದ್ಮಭೂಷಣ ಡಾ.ರಾಜ್ ಕುಮಾರ್ರವರ ಅಂತ್ಯಕ್ರಿಯೆ.
- ಜುಲೈ ೧೧: ಭಾರತದ ಪ್ರಧಾನ ನಗರಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ. ಅಪಾರ ಸಾವು ನೋವು. ಜನಜೀವನ ಅಸ್ತವ್ಯಸ್ತ.
- ಸೆಪ್ಟೆಂಬರ್ ೧೫,೨೦೦೬: ಕ್ಯೂಬಾದ ಹವಾನಾದಲ್ಲಿ ಅಲಿಪ್ತ ಚಳುವಳಿಯ ಶೃಂಗಸಭೆ ಆರಂಭ.
- ಅಕ್ಟೋಬರ್ ೧೩ : ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕ್ ಹಾಗು ಅದರ ಸಂಸ್ಥಾಪಕರಾದ ಮೊಹಮ್ಮದ ಯೂನುಸ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ.