Tenor ನಲ್ಲಿ, Tenor ಮೊಬೈಲ್ ಆ್ಯಪ್, Tenor ನ ವೆಬ್‌ಸೈಟ್, http://tenor.com ನಲ್ಲಿ ಲಭ್ಯವಿರುವುದು, Tenor ವಿಸ್ತರಣೆಗಳು ಮತ್ತು Tenor API ಒಳಗೊಂಡಿದೆ. Tenor API ಅನ್ನು ಥರ್ಡ್ ಪಾರ್ಟಿಯ ಸಾಧನಗಳು ಅಥವಾ ಸೇವೆಗಳ ಜೊತೆಗೆ ಸಂಯೋಜಿಸಬಹುದು, ಆದರೆ ಯಾವುದೇ Tenor ಸಂಬಂಧಿತ ಸೇವೆಗಳನ್ನು Google ಒದಗಿಸುತ್ತದೆ.
Tenor ಬಳಸಲು, ನೀವು (1) Google ಸೇವಾ ನಿಯಮಗಳು ಮತ್ತು (2) ಈ Tenor ಹೆಚ್ಚುವರಿ ಸೇವಾ ನಿಯಮಗಳನ್ನು ("Tenor ಹೆಚ್ಚುವರಿ ನಿಯಮಗಳು") ಒಪ್ಪಿಕೊಳ್ಳಬೇಕು.
ಈ ಪ್ರತಿಯೊಂದು ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ. ಒಟ್ಟಿಗೆ, ಈ ಡಾಕ್ಯುಮೆಂಟ್‌ಗಳನ್ನು "ನಿಯಮಗಳು" ಎಂದು ಕರೆಯಲಾಗುತ್ತದೆ. ನಮ್ಮ ಸೇವೆಗಳನ್ನು ಬಳಸುವಾಗ ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು ಮತ್ತು ನಿಮ್ಮಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಅವರು ಸ್ಥಾಪಿಸುತ್ತಾರೆ.
ಈ Tenor ಹೆಚ್ಚುವರಿ ನಿಯಮಗಳು Google ಸೇವಾ ನಿಯಮಗಳ ಜೊತೆಗೆ ಸಂಘರ್ಷವಾಗುತ್ತಿದ್ದರೆ, ಈ ಹೆಚ್ಚುವರಿ ನಿಯಮಗಳು Tenor ಅನ್ನು ನಿಯಂತ್ರಿಸುತ್ತವೆ.
ಇದು ಈ ನಿಯಮಗಳ ಭಾಗವಾಗಿರದಿದ್ದರೂ, ನೀವು ನಮ್ಮ ಗೌಪ್ಯತೆ ನೀತಿಯನ್ನು ಓದುವಂತೆ ನಾವು ಶಿಫಾರಸು ಮಾಡುತ್ತೇವೆ, ಇದರಿಂದ ನೀವು ಹೇಗೆ ನಿಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು, ನಿರ್ವಹಿಸಬಹುದು, ರಫ್ತು ಮಾಡಬಹುದು ಮತ್ತು ಅಳಿಸಬಹುದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
1. ನಿಮ್ಮ ಕಂಟೆಂಟ್.
ನಿಮ್ಮ ವಿಷಯವನ್ನು ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು, ಸ್ವೀಕರಿಸಲು ಅಥವಾ ಹಂಚಿಕೊಳ್ಳಲು Tenor ನಿಮಗೆ ಅನುಮತಿಸುತ್ತದೆ. Google ಸೇವಾ ನಿಯಮಗಳಲ್ಲಿ ವಿವರಿಸಿದಂತೆ ನಿಮ್ಮ ವಿಷಯವನ್ನು Google ಗೆ ಪರವಾನಗಿ ನೀಡಲಾಗಿದೆ — ಆದ್ದರಿಂದ ನೀವು Tenor ಗೆ ವಿಷಯವನ್ನು ಅಪ್‌ಲೋಡ್ ಮಾಡಿದರೆ, ನಾವು ಆ ವಿಷಯವನ್ನು ಬಳಕೆದಾರರಿಗೆ ಪ್ರದರ್ಶಿಸಬಹುದು ಮತ್ತು ನಿರ್ದೇಶಿಸಿದಾಗ ಅದನ್ನು ಹಂಚಿಕೊಳ್ಳಬಹುದು ಮತ್ತು ಆ ಬಳಕೆದಾರರು (Tenor API ಮೂಲಕ ವಿಷಯವನ್ನು ಪ್ರವೇಶಿಸುವ ಬಳಕೆದಾರರು ಸೇರಿದಂತೆ) ಆ ವಿಷಯವನ್ನು ವೀಕ್ಷಿಸಬಹುದು, ಹಂಚಿಕೊಳ್ಳಬಹುದು ಮತ್ತು ಮಾರ್ಪಡಿಸಬಹುದು.
2. ನಿಷೇಧಿತ ಕಂಟೆಂಟ್.
2.1 ನೀವು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಯಾವುದೇ ಥರ್ಡ್ ಪಾರ್ಟಿಯ ಲಾಭಕ್ಕಾಗಿ Tenor ಅನ್ನು ಬಳಸಬಾರದು.
2.2 Google ಸೇವಾ ನಿಯಮಗಳಲ್ಲಿ ನಾವು ವಿವರಿಸಿದಂತೆ, ಪ್ರತಿಯೊಬ್ಬರಿಗಾಗಿ ಗೌರವಯುತ ವಾತಾವರಣವನ್ನು ಕಾಪಾಡಿಕೊಳ್ಳಲು ನಾವು ಬಯಸುತ್ತೇವೆ. Tenor ಬಳಸುವಾಗ, ನೀವು ನಮ್ಮ ಪ್ರೋಗ್ರಾಂ ನೀತಿಗಳು ಮತ್ತು Google ಸೇವಾ ನಿಯಮಗಳಲ್ಲಿ ವಿವರಿಸಲಾದ ನಡವಳಿಕೆಯ ಮೂಲ ನಿಯಮಗಳನ್ನು ಅನುಸರಿಸಬೇಕು. ನಿರ್ದಿಷ್ಟವಾಗಿ, Tenor ಅನ್ನು ಬಳಸುವಾಗ ನೀವು ಇವುಗಳನ್ನು ಮಾಡಬಾರದು:
a. ಈ ಕೆಳಗಿನಂತೆ ಮಾಡುವ ಯಾವುದೇ ಕಂಟೆಂಟ್ ಅನ್ನು ಸಲ್ಲಿಸಬಾರದು, ಸಂಗ್ರಹಿಸಬಾರದು, ಕಳುಹಿಸಬಾರದು ಅಥವಾ ಹಂಚಿಕೊಳ್ಳಬಾರದು:
i.ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳು ಅಥವಾ ಪ್ರಚಾರ ಅಥವಾ ಗೌಪ್ಯತೆಯ ಹಕ್ಕುಗಳನ್ನು ಅತಿಕ್ರಮಿಸುವ, ದುರುಪಯೋಗಪಡಿಸಿಕೊಳ್ಳುವ ಅಥವಾ ಉಲ್ಲಂಘಿಸುವ ಯಾವುದೇ ಕಂಟೆಂಟ್ ಸೇರಿದಂತೆ, ಅನ್ವಯವಾಗುವ ಕಾನೂನು ಅಥವಾ ಇತರರ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಅಂತಹ ಯಾವುದೇ ನಡವಳಿಕೆಯನ್ನು ಪ್ರೋತ್ಸಾಹಿಸುವ ಕಂಟೆಂಟ್;
ii.ಯಾವುದೇ ಇತರ ವ್ಯಕ್ತಿಯ ಪೂರ್ವಾನುಮತಿ ಇಲ್ಲದೆಯೇ ಅವರ ವೈಯಕ್ತಿಕ ಅಥವಾ ಸಂಪರ್ಕ ಮಾಹಿತಿಯನ್ನು ಒಳಗೊಂಡಿರುವ ಕಂಟೆಂಟ್;
iii.ಅಕ್ರಮ ಅಥವಾ ಹಾನಿಕಾರಕ ಚಟುವಟಿಕೆಗಳು ಅಥವಾ ಪದಾರ್ಥಗಳನ್ನು ಉತ್ತೇಜಿಸುವ ಕಂಟೆಂಟ್;
iv.ವಂಚಿಸುವ, ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಕಂಟೆಂಟ್;
v.is ಸುಳ್ಳು ಅಥವಾ ಮಾನಹಾನಿಕರ ಕಂಟೆಂಟ್;
vi.is ಅಶ್ಲೀಲ ಅಥವಾ ಪೋರ್ನೋಗ್ರಾಫಿಕ್ ಕಂಟೆಂಟ್;
vii.ಯಾವುದೇ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ತಾರತಮ್ಯ, ಧರ್ಮಾಂಧತೆ, ಜನಾಂಗೀಯತೆ, ದ್ವೇಷ, ಕಿರುಕುಳ ಅಥವಾ ಹಾನಿಯನ್ನು ಉತ್ತೇಜಿಸುವ ಅಥವಾ ರೂಪಿಸುವ ಕಂಟೆಂಟ್;
viii.ಹಿಂಸಾತ್ಮಕ ಅಥವಾ ಬೆದರಿಕೆಯೊಡ್ಡುವ ಅಥವಾ ಯಾವುದೇ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಸಂಬಂಧಿಸಿದಂತೆ ಹಿಂಸಾಚಾರ ಅಥವಾ ಬೆದರಿಕೆಯೊಡ್ಡುವ ಕ್ರಮಗಳನ್ನು ಉತ್ತೇಜಿಸುವ ಕಂಟೆಂಟ್; ಅಥವಾ
b.ಇಮೇಲ್, ಮೇಲ್, ಸ್ಪ್ಯಾಮ್, ಸರಣಿ ಪತ್ರಗಳು ಅಥವಾ ಇತರ ಮನವಿಗಳನ್ನು ಒಳಗೊಂಡಂತೆ ಯಾವುದೇ ಅಪೇಕ್ಷಿಸದ ಅಥವಾ ಅನಧಿಕೃತ ಜಾಹೀರಾತು, ಪ್ರಚಾರ ಸಾಮಗ್ರಿಗಳು ಅಥವಾ ಸಂವಹನಗಳನ್ನು ಕಳುಹಿಸುವುದು.
2.3 ಅನುಚಿತ, ಕಾನೂನುಬಾಹಿರ ಅಥವಾ ಹೊಂದಾಣಿಕೆಯಾಗದಿರುವುದು ಎಂದು ಮೌಲ್ಯಮಾಪನ ಮಾಡಲಾದ ಯಾವುದೇ ಕಂಟೆಂಟ್ ಅನ್ನು ನಿರ್ಬಂಧಿಸಬಹುದು ಅಥವಾ ತೆಗೆದುಹಾಕಬಹುದು. ಈ ನಿಯಮಗಳು, Google ಸೇವಾ ನಿಯಮಗಳಂತಹ ನಮ್ಮ ನೀತಿಗಳನ್ನು ಉಲ್ಲಂಘಿಸುವ ಅಥವಾ ಕಾನೂನನ್ನು ಉಲ್ಲಂಘಿಸುವ, ನಮ್ಮ ಸೇವೆಗಳ ಮೂಲಕ ಜನರೇಟ್ ಮಾಡಲಾದ ಅಥವಾ ಅವುಗಳಿಗೆ ಅಪ್‌ಲೋಡ್ ಮಾಡಲಾದ ಕಂಟೆಂಟ್ ಅನ್ನು ಗುರುತಿಸಲು ಮತ್ತು ಮೌಲ್ಯಮಾಪನ ಮಾಡಲು ನಾವು ಸಿಸ್ಟಂಗಳ ಸಂಯೋಜನೆಯೊಂದನ್ನು ಬಳಸುತ್ತೇವೆ. ಹಾಗಿದ್ದರೂ, ಕೆಲವೊಮ್ಮೆ ನಮ್ಮಿಂದಲೂ ತಪ್ಪಾಗುತ್ತದೆ ಎಂಬುದು ನಮಗೆ ತಿಳಿದಿದೆ. ನಿಮ್ಮ ಕಂಟೆಂಟ್ ಈ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ ಅಥವಾ ತಪ್ಪು ಗ್ರಹಿಕೆಯಿಂದಾಗಿ ಅದನ್ನು ತಗೆದುಹಾಕಲಾಗಿದೆ ಎಂದು ನಿಮಗನಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.
ಈ ಕೆಳಗಿನ ಸಂದರ್ಭಗಳಲ್ಲಿ ನಮ್ಮ ಸೇವೆಯನ್ನು ಬಳಸದಂತೆ ನಿಮ್ಮನ್ನು ನಿರ್ಬಂಧಿಸಬಹುದು ಅಥವಾ ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು ಅಥವಾ ಕೊನೆಗೊಳಿಸಬಹುದು:
ನಾವು ಖಾತೆಗಳನ್ನು ಏಕೆ ನಿಷ್ಕ್ರಿಯಗೊಳಿಸುತ್ತೇವೆ ಮತ್ತು ಹಾಗೆ ಮಾಡಿದಾಗ ಏನಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ. ನಿಮ್ಮ Google ಖಾತೆಯನ್ನು ತಪ್ಪು ಗ್ರಹಿಕೆಯಿಂದಾಗಿ ಅಮಾನತುಗೊಳಿಸಲಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ನಿಮಗನಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.