ಕಲೋನ್
Köln Cologne | ||
Cologne skyline, with the Groß St. Martin, Cologne Cathedral, and the Hohenzollernbrücke | ||
ನಿರ್ದೇಶಾಂಕಗಳು | 50°57′N 6°58′E / 50.950°N 6.967°E | |
Administration | ||
Country | ಜರ್ಮನಿ | |
ರಾಜ್ಯ | North Rhine-Westphalia | |
Admin. region | Cologne | |
District | Urban district | |
Lord Mayor | Jürgen Roters (SPD) | |
Basic statistics | ||
Area | 405.15 km2 (156.43 sq mi) | |
Elevation | ೩೭ m (121 ft) | |
Population | ೧೦,೨೪,೩೭೩ (೩೧ ಡಿಸೆಂಬರ್ ೨೦೧೨)[೧] | |
- Density | ೨,೫೨೮ /km2 (೬,೫೪೮ /sq mi) | |
Founded | 38 BC | |
Other information | ||
Time zone | CET/CEST (UTC+1/+2) | |
Licence plate | K | |
Postal codes | 50441–51149 | |
Area codes | 0221, 02203 (Porz) | |
Website | www.stadt-koeln.de |
ಕಲೋನ್ (German: [Köln] Error: {{Lang}}: text has italic markup (help), pronounced [ˈkœln] ( ); ಕೋಲ್ಷ್ ಭಾಷೆಯಲ್ಲಿ: ಕೋಲ್ಲೆ ಟೆಂಪ್ಲೇಟು:IPA2) ಜರ್ಮನಿಯ ನಾಲ್ಕನೆಯ ಅತಿ ದೊಡ್ಡ ನಗರ (ಬರ್ಲಿನ್, ಹ್ಯಾಂಬರ್ಗ್ ಮತ್ತು ಮ್ಯುನಿಕ್ ನಂತರ), ಮತ್ತು ಜರ್ಮನಿಯ ಒಕ್ಕೂಟ (ಫೆಡೆರಲ್) ರಾಷ್ಟ್ರಉತ್ತರ ರೈನ್-ಪಶ್ಚಿಮ ಫಾಲಿಯಾ ಮತ್ತು ರೈನ್-ರರ್ ಮೆಟ್ರೋಪಾಲಿಟನ್ ಪ್ರದೇಶಗಳ ಭಾಗಗಳ ಅತಿ ದೊಡ್ಡ ನಗರವಾಗಿದ್ದು, ಯೂರೋಪ್ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಪ್ರಮುಖವಾದ ನಗರಗಳಲ್ಲಿ ಒಂದಾಗಿದ್ದು, ಹತ್ತು ಮಿಲಿಯನ್ ನಿವಾಸಿಗಳಿಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇದು ಜರ್ಮನಿಯ ಪುರಾತನ ನಗರಗಳಲ್ಲಿ ಒಂದಾಗಿದ್ದು, ಕ್ರಿಸ್ತಪೂರ್ವ 38ರಲ್ಲಿ ಯುಬೈರಿಂದ ಸ್ಥಾಪಿಸಲ್ಪಟ್ಟಿತು ಇದರ ಹೆಸರು ರೋಮನ್ ವಸಾಹತಾದ ಕಲೋನಿಯಾ ಕ್ಲಾಡಿಯಾ ಅರಾ ಅಗ್ರಿಪ್ಪಿನೆನ್ಸಿಯಂ ನಿಂದ ವ್ಯುತ್ಪತ್ತಿ ಹೊಂದಿದುದಾಗಿದೆ.
ಕಲೋನ್ ರೈನ್ ನದಿಯ ದಂಡೆಯ ಮೇಲಿದೆ. ನಗರದ ಪ್ರಸಿದ್ಧವಾದ ಕಲೋನ್ ಕ್ಯಾಥೆಡ್ರಲ್ (ಕಾಲ್ನರ್ ಡಾಮ್ ) ಕ್ಯಾಥೋಲಿಕ್ ಕಲೋನ್ ನ ಆರ್ಕ್ ಬಿಷಪ್ ರ ಪೀಠವನ್ನು ಹೊಂದಿದೆ. ಕಲೋನ್ ವಿಶ್ವವಿದ್ಯಾಲಯ (ಯೂನಿವರ್ಸಿಟಾಟ್ ಝು ಕಲೋನ್ ) ಯೂರೋಪ್ ನ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದು.
ಕಲೋನ್ ರೈನ್ ಲ್ಯಾಂಡ್ ನ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ ಹಾಗೂ ಕಲೆಗೆ ಸ್ಪಂದಿಸುವ ವಾತಾವರಣವನ್ನು ಹೊಂದಿದೆ. ಕಲೋನ್ ನಲ್ಲಿ 30ಕ್ಕೂ ಹೆಚ್ಚು ವಸ್ತುಸಂಗ್ರಹಾಲಯಗಳು ಮತ್ತು ನೂರಾರು ಗ್ಯಾಲರಿಗಳಿವೆ. ಪ್ರದರ್ಶನಗಳು ಸ್ಥಳೀಯ ಪ್ರಾಚೀನ ರೋಮನ್ ಪುರಾತತ್ವಸಂಶೋಧನ ತಾಣಗಳಿಂದ ಹಿಡಿದು ಸಮಕಾಲೀನ ಚಿತ್ರಗಳು ಮತ್ತು ಶಿಲ್ಪಕಲೆಗಳನ್ನು ಬಿಂಬಿಸುವವರೆಗಿನದಾಗಿರುತ್ತವೆ. ಕಲೋನ್ ವ್ಯಾಪಾರಿ ಜಾತ್ರೆ ಕಲಾ ಕಲೋನ್,imm ಕಲೀನ್ ಅಂತರರಾಷ್ಟ್ರೀಯ ಮರಮಟ್ಟು (ಫರ್ನೀಚರ್) ಜಾತ್ರೆ ಮತ್ತು ಫೋಟೋಕಿನಾದಂತಹ ಹಲವಾರು ವ್ಯಾಪಾರಿ ಪ್ರದರ್ಶನಗಳೆಗೆ ಅತಿಥೇಯವಾಗಿರುತ್ತದೆ. ಕಲೋನ್ ನಲ್ಲಿ ನಡೆಯುವ ಕಲೋನ್ ಕಾರ್ನಿವಾಲ್ ಬಹಳ ಪ್ರಸಿದ್ಧವಾದುದಾಗಿದೆ; ಪ್ರತಿ ವರ್ಷ ನಡೆಯುವ ರೆಗ್ಗೆ ಸಮ್ಮರ್ ಜ್ಯಾಮ್ಮತ್ತು ಕಲೋನ್ ಗೇ ಪ್ರೈಡ್ ಸಹ ಜನಜನಿತವಾದ ಕಾರ್ಯಕ್ರಮಗಳಾಗಿವೆ.
ಜರ್ಮನಿಯಲ್ಲಿ ಕಲೋನ್ ಒಂದು ಪ್ರಮುಖ ಮಾಧ್ಯಮ ಕೇಂದ್ರವಾಗಿದೆ. ವೆಸ್ಟ್ ಡ್ಯೂಟ್ಷರ್ ರಂಡ್ ಫಂಕ್ (WDR), RTL ಮತ್ತು VOX ಗಳನ್ನು ಸೇರಿದಂತೆ ಹಲವಾರು ರೇಡಿಯೋ ಮತ್ತು ಟೆಲಿವಿಷನ್ ಕೇಂದ್ರಗಳ ಪ್ರಧಾನಕಚೇರಿಗಳು ಈ ನಗರದಲ್ಲಿವೆ. Pro7 ಮತ್ತು Sat.1ಗಳೆರಡೂ ಟಿವಿ ಷೋಗಳನ್ನು ಕಲೋನ್ ನಲ್ಲಿ ನಿರ್ಮಿಸುತ್ತವೆ. ಅಲ್ಲದೆ ಈ ನಗರದಲ್ಲಿ ಕಲೋನ್ ಕಾಮೆಡಿ ಫೆಸ್ಟಿವಲ್ ನಡೆಸಲ್ಪಡುತ್ತದೆ ಹಾಗೂ ಇದು ಮೇಯ್ನ್ ಲ್ಯಾಂಡ್ ಯೂರೋಪ್ ನಲ್ಲೇ ಬೃಹತ್ತಾದ ಹಾಸ್ಯ ಹಬ್ಬವೆಂದು ಪರಿಗಣಿಸಲಾಗಿದೆ.[೨]
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]ನಿವಾಸಿಗಳ ಸಂಖ್ಯೆಯ ಆಧಾರದ ಮೇಲೆ ಬರ್ಲಿನ್, ಹ್ಯಾಂಬರ್ಗ್ ಮತ್ತು ಮ್ಯುನಿಕ್ ಗಳ ನಂತರ ಕಲೋನ್ ಜರ್ಮನಿಯ ನಾಲ್ಕನೆಯ ಬೃಹತ್ ನಗರವಾಗಿದೆ. 31 ಡಿಸೆಂಬರ್ 2009ರ ಪ್ರಕಾರ ಇಲ್ಲಿನ ಅಧಿಕೃತ ನಿವಾಸಿಗಳ ಸಂಖ್ಯೆ 998,105.[೩] ಕಲೋನ್ ಕಲೋನ್/ಬಾನ್ ಪ್ರದೇಶದ ಕೇಂದ್ರಸ್ಥಳವಾಗಿದ್ದು ಸುಮಾರು 3 ಮಿಲಿಯನ್ ನಿವಾಸಿಗಳನ್ನು ಹೊಂದಿದೆ (ಪಕ್ಕದ ನಗರಗಳಾದ ಬಾನ್, ಹರ್ಥ್, ಲಿವರ್ಕ್ಯುಸೆನ್, ಮತ್ತು ಬರ್ಜಿಸ್ಕ್ ಗ್ಲ್ಯಾಡ್ ಬ್ಯಾಚ್ ಗಳನ್ನು ಸೇರಿದಂತೆ).
ಸ್ಥಳೀಯ ಅಂಕಿಅಂಶಗಳ ಪ್ರಕಾರ 2006ರಲ್ಲಿ ಈ ನಗರದಲ್ಲಿನ ಜನಸಂಖ್ಯಾ ಸಾಂದ್ರತೆಯು ಪ್ರತಿ ಚದರ ಕಿಲೋಮೀಟರ್ ಗೆ 2,528 ನಿವಾಸಿಗಳಷ್ಟಿತ್ತು. 31.4 ಪ್ರತಿಶತ ನಿವಾಸಿಗಳು ಅಲ್ಲಿಗೆ ವಲಸೆ ಹೋದರು, ಮತ್ತು 17.2 ಪ್ರತಿಶತ ಕಲೋನ್ ನ ಜನಸಂಖ್ಯೆಯು ಜರ್ಮನೇತರರದ್ದಾಗಿತ್ತು. ಒಟ್ಟು ಜನಸಂಖ್ಯೆಯ 6.3 ಪ್ರತಿಶತ ಇರುವ ಅತಿ ದೊಡ್ಡ ಗುಂಪೆಂದರೆ ಟರ್ಕಿಯವರದು.[೪] ಸೆಪ್ಟೆಂಬರ್ 2007ರ ಪ್ರಕಾರ, ಕಲೋನ್ ನಲ್ಲಿ ಸುಮಾರು 120,000 ಮುಸ್ಲಿಮರಿದ್ದು, ಅವರಲ್ಲಿ ಬಹುತೇಕ ಜನರು ಟರ್ಕಿಯ ಮೂಲದವರಾಗಿದ್ದರು.[೫]
ನಗರದಲ್ಲಿ ಜನಸಂಖ್ಯೆಯು ವಿಸ್ತೃತವಾಗಿದ್ದು 15.5% 18 ವಯಸ್ಸಿನ ಕೆಳಗಿನವರೂ, 67.0% 18ರಿಂದ 64ರ ವಯಸ್ಸಿನವರೂ ಮತ್ತು 17.4% 65 ವರ್ಷಕ್ಕೂ ಮೇಲ್ಪಟ್ಟವರು ಇದ್ದರು.[೬]
ಸರ್ಕಾರ
[ಬದಲಾಯಿಸಿ]ಕಲೋನ್ ಕಲೋನ್/ಬಾನ್ ಪ್ರದೇಶದ ಒಂದು ಭಾಗವಾಗಿದ್ದು, ಜೆರ್ಮೀನ್ಡಿಯೋರ್ಡ್ನಂಗ್ ನಾರ್ಡ್ಹೀನ್-ವೆಸ್ಟ್ ಫೇಲೆನ್(GO NRW) (ಉತ್ತರ ರೈನ್-ಪಶ್ಚಿಮಫಾಲಯಾ ಮುನಿಸಿಪಾಲ್ಟಿ ಕಾಯಿದೆ)ನ ಅಡಿಯಲ್ಲಿ ಸ್ವತಂತ್ರ ನಗರವಾಗಿ (ಕ್ರೀಯ್ಸ್ ಫ್ರೀ ಸ್ಟ್ಯಾಡ್ಟ್) ಸೇರಿಸಿಕೊಳ್ಳಲಾಯಿತು. ನಗರದ ಆಡಳಿತವನ್ನು ಒಬ್ಬ ಮೇಯರ್ (ಒಬರ್ ಬರ್ಗರ್ ಮೀಸ್ಟರ್ ) ಮತ್ತು ಮೂರು ಉಪಮೇಯರ್ ಗಳು ನಡೆಸುತ್ತಾರೆ.
ಜಿಲ್ಲೆಗಳು
[ಬದಲಾಯಿಸಿ]ಕಲೋನ್ ಅನ್ನು 9 ಜಿಲ್ಲೆಗಳಾಗಿ (ಸ್ಟ್ಯಾಡ್ಟ್ ಬೆಝಿರ್ಕ್ ) ಮತ್ತು 86 ನಗರದ ಭಾಗಗಳಾಗಿ (ಸ್ಟ್ಯಾಡ್ಟ್ ಟೀಯ್ಲ್ ) ಉಪ-ವಿಭಜಿಸಲಾಗಿದೆ:
- ಆಲ್ ಸ್ಟ್ಯಾಡ್ಟ್-ನಾರ್ಡ್, ಆಲ್ ಸ್ಟ್ಯಾಡ್ಟ್-ಸುಡ್, ನ್ಯೂಸ್ಟ್ಯಾಡ್ಟ್-ನಾರ್ಡ್, ನ್ಯೂಸ್ಟ್ಯಾಡ್ಟ್-ಸುಡ್, ಡ್ಯೂಟ್ಝ್
- ರಾಡೆನ್ ಕಿರ್ಚೆನ್ (ಸ್ಟ್ಯಾಡ್ಟ್ ಬೆಝಿರ್ಕ್ 2)
- ಬಾಯೆಂಥಲ್, ಗಾಡೋರ್ಫ್, ಹ್ಯಾಹ್ನ್ ವಾಲ್ಡ್, ಇಮೆಂಡೋರ್ಫ್, ಮೇರೀನ್ಬರ್ಗ್, ಮೆಸ್ಕೆನಿಚ್, ರಾಡೆರ್ಬೆರ್ಗ್, ರಾಡೆರ್ಥಾಲ್, ರಾಡೆನ್ ಕಿರ್ಚೆನ್, ರಾಂಡೋರ್ಫ್, ಸುರ್ಥ್, ವೀಯ್ಬ್, ಝೋಲ್ ಸ್ಟಾಕ್
- ಲಿಂಡೆಂಥಾಲ್ (ಸ್ಟ್ಯಾಡ್ಟ್ ಬೆಝಿರ್ಕ್ 3)
- ಬ್ರಾನ್ಸ್ ಫೆಲ್ಡ್, ಜಂಕೆರ್ಸ್ ಡಾರ್ಫ್, ಕ್ಲೆಟ್ಟೆನ್ ಬರ್ಗ್, ಲಿಂಡೆಂಥಾಲ್, ಲೋವೆನಿಚ್, ಮುಂಗೆರ್ಸ್ ಡಾರ್ಫ್, ಸುಲ್ಝ್, ವೀಯ್ಡೆನ್, ವಿಡ್ಡೆರ್ಸ್ ಡಾರ್ಫ್
- ಯೆಹ್ ರೆನ್ ಫೆಲ್ಡ್ (ಸ್ಟ್ಯಾಡ್ಟ್ ಬೆಝಿರ್ಕ್ 4)
- ಬಿಕ್ಕೆನ್ಡಾರ್ಫ್, ಮೆಂಜೆನಿಚ್, ಎಹ್ರೆನ್ಫೆಲ್ಡ್, ನ್ಯೂಎಹ್ರೆನ್ಫೆಲ್ಡ್, ಓಸ್ಸೆನ್ಡಾರ್ಫ್, ವೋಗೆಲ್ಸಾಂಗ್
- ನಿಪ್ಪೆಸ್ (ಸ್ಟ್ಯಾಡ್ಟ್ ಬೆಝಿರ್ಕ್ 5)
- ಬಿಲ್ಡೆರ್ಸ್ಟಾಕ್ಚೆನ್, ಲಾಂಗೆರಿಚ್, ಮೌಯೆನ್ಹೆಲ್ಮ್, ನೀಹ್ಲ್, ನಿಪ್ಪೆಸ್, ರೀಹ್ಲ್,ವೀಡೆನ್ಪೆಸ್ಕ್
|
ಪ್ರಾದೇಶಿಕ ಭೂಗೋಳ
[ಬದಲಾಯಿಸಿ]ಹವಾಮಾನ/ವಾಯುಗುಣ
[ಬದಲಾಯಿಸಿ]ಫ್ರಾಂಕ್‌ಫರ್ಟ್ ಜರ್ಮನಿಯ ಬೆಚ್ಚಗಿನ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಹವೆಯು ಸಮಶೀತೋಷ್ಣ–ಸಮುದ್ರೋಪಾದಿಯ ವಾತಾವರಣದ್ದಾಗಿದ್ದು ಚಳಿಕಡಿಮೆಯಿರುವಂತಹ ಚಳಿಗಾಲ ಮತ್ತು ಬೆಚ್ಚನೆಯ ಬೇಸಿಗೆಗಳನ್ನು ಹೊಂದಿರುತ್ತದೆ. ಇದರ ಸರಾಸರಿ ಉಷ್ಣತೆಯು 10 °C (50 °F): 14.5 °C (58 °F) ದಿನದಲ್ಲಿ ಮತ್ತು 5.5 °C (42 °F) ರಾತ್ರಿಯಲ್ಲಿ.
Cologneದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | 5.2 (41.4) |
6.6 (43.9) |
10.5 (50.9) |
14.2 (57.6) |
19.0 (66.2) |
21.3 (70.3) |
23.7 (74.7) |
23.7 (74.7) |
19.6 (67.3) |
14.6 (58.3) |
9.0 (48.2) |
6.2 (43.2) |
14.5 (58.1) |
Daily mean °C (°F) | 2.3 (36.1) |
2.9 (37.2) |
6.1 (43) |
8.9 (48) |
13.4 (56.1) |
16.0 (60.8) |
18.3 (64.9) |
18.0 (64.4) |
14.6 (58.3) |
10.4 (50.7) |
5.8 (42.4) |
3.4 (38.1) |
10.0 (50) |
ಕಡಮೆ ಸರಾಸರಿ °C (°F) | −0.7 (30.7) |
−0.9 (30.4) |
1.7 (35.1) |
3.6 (38.5) |
7.7 (45.9) |
10.7 (51.3) |
12.8 (55) |
12.3 (54.1) |
9.6 (49.3) |
6.2 (43.2) |
2.5 (36.5) |
0.6 (33.1) |
5.5 (41.9) |
Average precipitation mm (inches) | 60.4 (2.378) |
46.6 (1.835) |
62.5 (2.461) |
50.5 (1.988) |
72.4 (2.85) |
87.6 (3.449) |
86.0 (3.386) |
65.3 (2.571) |
69.3 (2.728) |
61.7 (2.429) |
63.2 (2.488) |
70.7 (2.783) |
796.2 (31.346) |
Average precipitation days | 11.9 | 9.3 | 12.5 | 10.2 | 10.4 | 11.6 | 11.2 | 9.4 | 10.7 | 10.5 | 11.9 | 12.9 | 120.9 |
Source: World Meteorological Organization (UN)[೭] |
ಪ್ರವಾಹದಿಂದ ರಕ್ಷಣೆ
[ಬದಲಾಯಿಸಿ]ಕಲೋನ್ ರೈನ್ ನದಿಯಿಂದ ಆಗಾಗ್ಗೆ ಪ್ರವಾಹಪೀಡಿತವಾಗುತ್ತದೆ ಹಾಗೂ ಇದು ಯೂರೋಪ್ ನ ಬಹಳ ಪ್ರವಾಹ ಪೀಡಿತ ನಗರವೆಂದು ಪರಿಗಣಿಸಲಾಗಿದೆ.[೮] ನಗರದ ಒಂದು ಸಂಸ್ಥೆಯು (ಸ್ಟ್ಯಾಡ್ಟೆಂಟ್ವಾಸ್ಸೆರಂಗ್ಸ್ ಬೆರ್ಟ್ರೀಬ್ ಕಲೋನ್[೯]) ಸಮಗ್ರ ಪ್ರವಾಹ ಹತೋಟಿ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ; ಈ ನಿಯಂತ್ರಣ ಕ್ರಮದಲ್ಲಿ ಸರ್ವಕಾಲಿಕ ಮತ್ತು ಚಲಿತ ಪ್ರವಾಹ ಗೋಡೆಗಳಿರುತ್ತವೆ, ಪ್ರವಾಹದಿಂದ ಏರುವ ನೀರಿನಿಂದ ಜಖಂ ಆಗದಂತೆ ನದಿಯ ಹತ್ತಿರದ ಕಟ್ಟಡಗಳನ್ನು ರಕ್ಷಿಸುತ್ತದೆ, ಪರಿವೀಕ್ಷಣಾ ಮತ್ತು ಮುನ್ಸೂಚನಾ ಪದ್ಧತಿಗಳನ್ನು ಹೊಂದಿದೆ, ಪಂಪ್ ಮಾಡುವ ಕೇಂದ್ರಗಳಿವೆ ಮತ್ತು ಪ್ರವಾಹೋಪಾಯಗಳನ್ನು ಸೃಷ್ಟಿಸಲು ಅಥವಾ ರಕ್ಷಿಸಲು ಯೋಜನೆಗಳಿವೆ ಮತ್ತು ನದಿಯ ದಡಗಳನ್ನು ರಕ್ಷಿಸುವ ಯೋಜನೆಗಳೂ ಇವೆ.[೮][೧೦][೧೧] 1993ರ ಪ್ರವಾಹದಲ್ಲಿ ಅಪಾರ ಹಾನಿಯಾದ ನಂತರ ಈ ವ್ಯವಸ್ಥೆಯನ್ನು ಮರುರೂಪಿಸಲಾಯಿತು.[೮]
ಇತಿಹಾಸ
[ಬದಲಾಯಿಸಿ]ರೋಮನ್ ಕಲೋನ್
[ಬದಲಾಯಿಸಿ]ಕಲೋನ್ ನ ಈಗಿನ ಕೇಂದ್ರಸ್ಥಾನವಾದ ಒಪ್ಪಿಡಂ ಯೂಬಿಯೋರಂ ಎಂಬ ಮೈದಾನಪ್ರದೇಶದಲ್ಲಿ ಯುಬೈ ಎಂಬ ಜರ್ಮನಿಕ್ ಬುಡಕಟ್ಟು ಕ್ರಿಸ್ತಪೂರ್ವ 38ನೆಯ ಇಸವಿಯಲ್ಲಿ ಮೊಟ್ಟಮೊದಲ ವಸಾಹತನ್ನು ಸ್ಥಾಪಿಸಿತು. ಕಲೋನ್ ರೋಮನ್ ರ ನಗರವೆಂದು 50ನೆಯ ಇಸವಿಯಲ್ಲಿ ಗುರುತಿಸಲಾಯಿತು ಮತ್ತು ಆ ನಗರವನ್ನು ಕಲೋನಿಯಾ ಕ್ಲಾಡಿಯಾ ಅರಾಅಗ್ರಿಪ್ಪಿನೆನ್ಸಿಯಂ ಎಂದು ಕರೆಯಲಾಗುತ್ತಿತ್ತು. ಈಗ ಕಲೋನ್ ನಲ್ಲಿ ಸಾಕಷ್ಟು ರೋಮನ್ ಪಳಿಯುಳಿಕೆಗಳು ಕಾಣಸಿಗುತ್ತವೆ, ವಿಶೇಷತಃ ವಾರ್ಫ್ ಪ್ರದೇಶದಲ್ಲಿ; 2007ನೆಯ ಇಸವಿಯಲ್ಲಿ 1900ನೆಯ ಇಸವಿಯ ರೋಮನ್ ಹಡಗನ್ನು ಪತ್ತೆ ಹಚ್ಚಿದುದು ಇಲ್ಲಿನ ವಿಶೇಷಗಳಲ್ಲೊಂದು.[೧೨] 260ನೆಯ ಇಸವಿಯಿಂದ 271ನೆಯ ಇಸವಿಯವೆಗೆ ಕಲೋನ್ ಪಾಶ್ಚುಮಸ್, ಮಾರಿಯಸ್ ಮತ್ತು ವಿಕ್ಟರಿನಸ್ ರಾಜರ ಆಳ್ವಿಕೆಯ ಗ್ಯಾಲಿಕ್ ಚಕ್ರಾಧಿಪತ್ಯದ ರಾಜಧಾನಿಯಾಗಿತ್ತು . 310ರಲ್ಲಿ ಕಾಂಸ್ಟಂಟೈನ್ ರ ಆಳ್ವಿಕೆಯಲ್ಲಿ ಕಲೋನ್ ನ ರೈನ್ ನದಿಯ ಮೇಲೆ ಒಂದು ಸೇತುವೆಯನ್ನು ನಿರ್ಮಿಸಲಾಯಿತು.
313ರಲ್ಲಿ ಪಾದ್ರಿಯಾಗಿ ಆಯ್ಕೆಗೊಂಡ ಮ್ಯಾಟೆರ್ನಸ್ ಕಲೋನ್ ಕಂಡ ಮೊದಲ ಪಾದ್ರಿಯಾಗಿದ್ದರು. 459ರಲ್ಲಿ ಫ್ರ್ಯಾಂಕ್ಸ್ ಆಕ್ರಮಣ ಮಾಡುವವರೆಗೆ ಈ ನಗರವು ರೋಮನ್ ವಸಾಹತಿನ ರಾಜಧಾನಿಯಾಗಿತ್ತು. 785ರಲ್ಲಿ ಕಲೋನ್ ನಲ್ಲಿಆರ್ಕ್ ಬಿಷಪ್ ರಿಕ್ ನ ಪೀಠ ಸ್ಥಾಪಿತವಾಯಿತು.
ಮಧ್ಯಕಾಲೀನ ಯುಗ
[ಬದಲಾಯಿಸಿ]ಮಧ್ಯಕಾಲೀನ ಯುಗದಲ್ಲಿ ಪವಿತ್ರ ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಕಲೋನ್ ನ ಆರ್ಕ್ ಬಿಷಪ್ ಏಳು ಯುವರಾಜ-ಆಯ್ಕೆದಾರರಲ್ಲಿ ಒಬ್ಬರು ಹಾಗೂ ಮೂರು ಚರ್ಚ್ ಆಡಳಿತವರ್ಗ ಆಯ್ಕೆದಾರರಲ್ಲಿ ಒಬ್ಬರಾಗಿದ್ದರು. ಆರ್ಕ್ ಬಿಷಪ್ ಗಳು ಬೃಹತ್ತಾದ, ತಾತ್ಕಾಲಿಕವಾದ ರಾಜ್ಯಗಳ ಆಳ್ವಿಕೆ ನಡೆಸಿದ್ದರಾದರೂ 1288ರಲ್ಲಿ ಸಿಗ್ ಫ್ರೈಡ್ II ವಾನ್ ಚೆಸ್ಟರ್ಬರ್ಗ್ ವಾರಿಂಗೆನ್ ಕದನದಲ್ಲಿ ಪರಾಭವಗೊಂಡು ಬಾನ್ ಗೆ ಅಟ್ಟಲ್ಪಟ್ಟನು.
ರೈನ್ ನದಿಯ ದಂಡೆಯ ಮೇಲಿರುವ ಕಾರಣ ಕಲೋನ್ ಪೂರ್ವ ಮತ್ತು ಪಶ್ಚಿಮದ ಪ್ರಮುಖ ವ್ಯಾಪಾರಿ ಮಾರ್ಗಗಳು ಪರಸ್ಪರ ಸಂಧಿಸುವ ಜಾಗದಲ್ಲಿದ್ದಂತಾಗಿದ್ದುದು ಕಲೋನ್ ನ ಅಭಿವೃದ್ಧಿಯ ಮೂಲಕಾರಣವಾಯಿತು. ಕಲೋನ್ ಹ್ಯಾನ್ಸಿಯಾಟಿಕ್ ಲೀಗ್ ನ ಸದಸ್ಯ ನಗರಗಳಲ್ಲಿ ಒಂದಾಗಿತ್ತು ಮತ್ತು 1475ರಲ್ಲಿ ಅದು ಮುಕ್ತ ಸಾರ್ವಭೌಮಿಕ ನಗರವಾಯಿತು. ಕುತೂಹಲಕರವಾದ ಅಂಶವೆಂದರೆ ಶಿರಚ್ಛೇದ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ಮಾತ್ರ ಆರ್ಕ್ ಬಿಷಪ್ ಇತರರಿಗೆ ಬಿಟ್ಟುಕೊಡಲಿಲ್ಲ. ಆದ್ದರಿಂದ ಮುನಿಸಿಪಲ್ ಕೌನ್ಸಿಲ್ (ರಾಜಕೀಯವಾಗಿ ಆರ್ಕ್ ಬಿಷಪ್ ರ ಬದ್ಧ ವಿರೋಧಿಯಾಗಿದ್ದರೂ) ಅಪರಾಧಿಗಳನ್ನು ಶಿಕ್ಷಿಸುವ ವಿಷಯದಲ್ಲಿ ಅವರನ್ನು ಅವಲಂಬಿಸಲೇಬೇಕಾಗಿತ್ತು. ನೀಡುವ ಶಿಕ್ಷೆಗಳಲ್ಲಿ ಕಿರುಕುಳವೂ ಒಂದಾಗಿದ್ದು, ಆ ಶಿಕ್ಷೆಯನ್ನು ವಿಧಿಸಲು "ಗ್ರೀವ್" ಎಂದು ಕರೆಯಲ್ಪಡುತ್ತಿದ್ದ ಎಪಿಸ್ಕೋಪಲ್ ನ್ಯಾಯಾಧೀಶನಿಗೆ ಮಾತ್ರ ಅಧಿಕಾರವಿದ್ದಿತು. ಕಲೋನ್ ಅನ್ನು ಫ್ರ್ಯಾನ್ಸ್ ಆಕ್ರಮಿಸುವವರೆಗೆ ಈ ವಿಧವಾದ ಕಾನೂನು ವ್ಯವಸ್ಥೆ ಜಾರಿಯಲ್ಲಿತ್ತು.
ಆರ್ಥಿಕ ಹಾಗೂ ರಾಜಕೀಯ ವಿಶೇಷತೆಗಳಲ್ಲಷ್ಟೇ ಅಲ್ಲದೆ ಕಲೋನ್ ಮಧ್ಯಕಾಲೀನ ಯುಗದ ಮಹತ್ತರವಾದ ತೀರ್ಥಕ್ಷೇತ್ರವೂ ಆಯಿತು; ಕಲೋನ್ ನ ಆರ್ಕ್ ಬಿಷಪ್ ಡಾಸ್ಸೆಲ್ ನ ರೈನಾಲ್ಡ್ 1164ರಲ್ಲಿ (ವಾಸ್ತವವಾಗಿ ಅವನ್ನು ಮಿಲಾನ್ ನಿಂದ ಸೆರೆಹಿಡಿಯಲ್ಪಟ್ಟನಂತರ)ತ್ರೀ ವೈಸ್ ಮೆನ್ ನ ಸಂತಾವಶಿಷ್ಟಗಳನ್ನು ಕಲೋನ್ ನ ಕ್ಯಾಥೆಡ್ರಲ್ ಗೆ ಕೊಡಮಾಡಿದಾಗಿನಿಂದ ಅದು ಒಂದು ಪುಣ್ಯಕ್ಷೇತ್ರವಾಯಿತು. ಈ ಮೂರು ಅವಶಿಷ್ಟಗಳಲ್ಲದೆ ಕಲೋನ್ ಸಂತ ಉರ್ಸುಲಾ ಮತ್ತು ಆಲ್ಬರ್ಟಸ್ ಮ್ಯಾಗ್ನಸ್ರ ಸಂತಾವಶಿಷ್ಟಗಳನ್ನೂ ಸಂರಕ್ಷಿಸುತ್ತಿದೆ.
ಮಧ್ಯಕಾಲೀನ ಹಾಗೂ ಆಧುನಿಕ ಕಾಲದ ಮೊದಲ ಭಾಗಗಳಲ್ಲಿ ಕಲೋನ್ ನ ವಾಣಿಜ್ಯಪರ ಕಟ್ಟಡಗಳು ನಗರವು ಪ್ರಮುಖ ಬಂದರು ಮತ್ತು ರೈನ್ ನದಿಯಗುಂಟ ಸಾಗಾಣಿಕೆಯ ಪ್ರಮುಖ ಪಟ್ಟಣವಾದುದಕ್ಕೆ ಪೂರಕವಾಗಿ ಹಾಗೂ ಬಿಂಬಕವಾಗಿ ಇದ್ದವು. ಕುಶಲಕರ್ಮಗಳು ಸ್ವಯಂ-ಆಡಳಿತ ಹೊಂದಿದ್ದ ವ್ಯಾಪಾರಿ ಸಂಘಗಳಿಂದ ಹಮ್ಮಿಕೊಳ್ಳಲ್ಪಡುತ್ತಿದ್ದವು ಹಾಗೂ ಅವುಗಳಲ್ಲಿ ಕೆಲವು ಸ್ತ್ರೀಯರಿಗೇ ಮೀಸಲಾದಂತಹವು ಇದ್ದವು.
ಮುಕ್ತ ನಗರವಾದ ಕಲೋನ್ ಪವಿತ್ರ ರೋಮನ್ ಚಕ್ರಾಧಿಪತ್ಯದೊಳಗಿನ ಅರಸುಗಳಾಳಿದ ರಾಜ್ಯವಾಗಿದ್ದು ತನ್ನದೇ ಆದ ಹೊಣೆಯನ್ನು ಹೊಂದುವಂತಹ ಹಕ್ಕು (ಹಾಗೂ ಅಗತ್ಯತೆ) ಹೊಂದಿತ್ತು. ಕೆಂಪು ಸಮವಸ್ತ್ರ ಧರಿಸಿದ ಈ ಸೇನೆಯನ್ನು ರೋಟ್ ಫಂಕೆನ್ (ರೆಡ್ ಸ್ಪಾರ್ಕ್ಸ್) ಎಂದು ಕರೆಯುತ್ತಿದ್ದರು. ಈ ಸೈನಿಕರುಪವಿತ್ರ ರೋಂ ಚಕ್ರಾಧಿಪತ್ಯದ ಸೇನೆಯ ಅಂಗವಾಗಿದ್ದರು ("ರೀಚ್ಸ್ ಕಾಂಟಿಂಜೆಂಟ್") ಮತ್ತು 17ನೆಯ ಹಾಗೂ 18ನೆಯ ಶತಮಾನದ ಯುದ್ಧಗಳಲ್ಲಿ ಹೋರಾಡಿದರು, ಚಳುವಳಿನಿರತ ಫ್ರ್ಯಾನ್ಸ್ ವಿರುದ್ಧ ಹೋರಾಡಿದುದೂ ಆ ಕದನಗಳಲ್ಲಿ ಒಂದು; ಆ ಕದನದಲ್ಲಿ ಈ ಸಣ್ಣ ಸೇನೆಯು ಸಂಪೂರ್ಣವಾಗಿ ನಶಿಸುವ ಹಂತವನ್ನು ತಲುಪಿಬಿಟ್ಟಿತ್ತು. ಈ ದಂಡಿನ ಸಂಪ್ರದಾಯವನ್ನು ಕಲೋನ್ ನ ಅತ್ಯುತ್ಕೃಷ್ಟವಾದ ಮಹೋತ್ಸವ ಮಂಡಳಿಯಾದ ರೋಟ್ ಫಂಕೆನ್ ಒಂದು ಸೇನಾ ವಿನೋದದ (ಅಣಕದ) ಮಾದರಿಯಾಗಿ ಸಂರಕ್ಷಿಸಿಕೊಂಡುಬಂದಿದೆ.[೧೩]
ಈ ಮುಕ್ತ ನಗರವಾದ ಕಲೋನ್ ಅನ್ನು ಆರ್ಕ್ ಬಿಷಪ್ ನ ಆಡಳಿತದ ಕಲೋನ್ ಎಂದು ಎಣೆಸಬಾರದು; ಅದು ಪವಿತ್ರ ರೋಮನ್ ಚಕ್ರಾಧಿಪತ್ಯದ ಅಡಿಯಲ್ಲಿದ್ದ ಒಂದು ರಾಜ್ಯವಷ್ಟೆ. 16ನೆಯ ಶತಮಾನದ ಉತ್ತರಾರ್ಧದಿಂದ ಆರ್ಕ್ ಬಿಷಪ್ ಗಳನ್ನು ಬವಾರಿಯಾ ವಂಶದ ವಿಟ್ಟೆಲ್ಸ್ ಬಾಕ್ ನಿಂದ ಆಯ್ದುಕೊಳ್ಳಲಾಗುತ್ತಿತ್ತು. ಕಲೋನ್ ಮುಕ್ತವಾದ ನಗರವಾಗಿದ್ದುದರಿಂದ, ಸಾಮಾನ್ಯವಾಗಿ ಆರ್ಕ್ ಬಿಷಪ್ ಗಳನ್ನು ನಗರದಲ್ಲಿ ಪ್ರವೇಶಿಸಲು ಬಿಡುತ್ತಿರಲಿಲ್ಲ. ಆದ್ದರಿಂದ ಅವರು ಮೊದಲು ಬಾನ್ ನಲ್ಲಿ ಹಾಗೂ ನಂತರ ರೈನ್ ದಡದಲ್ಲಿನ ಬೃಹ್ಲ್ನಲ್ಲಿ ವಾಸಿಸಿದರು. ಪ್ರಭಾವಶಾಲಿ ಬಾಗೂ ಪ್ರಬಲ ಕುಟುಂಬದಿಂದ ಬಂದಂತಹ ಹಾಗೂ ಅವರ ಉತ್ತಮವಾದ ಆಯ್ಕೆದಾರರ ಅಂತಸ್ತಿನ ಬೆಂಬಲದಿಂದ, ಕಲೋನ್ ನ ಆರ್ಕ್ ಬಿಷಪ್ ಗಳು 17ನೆಯ ಮತ್ತು 18ನೆಯ ಶತಮಾನದಲ್ಲಿ ಕಲೋನ್ ನ ಮುಕ್ತತೆಯ ಅಂತಸ್ತನ್ನು ಪದೇ ಪದೇ ಪ್ರಶ್ನಿಸುವುದು ಮತ್ತು ಮುಕ್ತತೆಯನ್ನು ಕಳೆಯುವುದಾಗಿ ಹೆದರಿಸುವ ಕಾರ್ಯಗಳಲ್ಲಿ ತೊಡಗಿದರು; ತತ್ಪರಿಣಾಮವಾಗಿ ಉಂಟಾದ ಗೊಂದಲಗಳನ್ನು ರಾಯಭಾರಿಯ ಕಾರ್ಯರೀತ್ಯಾ ಮತ್ತು ಪ್ರಚಾರಗೊಳಿಸುವ ರೀತ್ಯಾ ಮತ್ತು ಪವಿತ್ರ ರೋಮನ್ ಚಕ್ರಾಧಿಪತ್ಯದ ಸರ್ವೋಚ್ಛ ನ್ಯಾಯಾಲಯಗಳ ಮೂಲಕ ಬಗೆಹರಿಸಲು ಯತ್ನಿಸಲಾಗುತ್ತಿತ್ತು.
19ನೆಯ ಮತ್ತು 20ನೆಯ ಶತಮಾನ
[ಬದಲಾಯಿಸಿ]ಫ್ರೆಂಚ್ ಆಳ್ವಿಕೆಯ ಅವಧಿಯಲ್ಲಿ ಕಲೋನ್ ಮುಕ್ತ ನಗರವೆಂಬ ಹಿರಿಮೆಯನ್ನು ಕಳೆದುಕೊಂಡಿತು. ಲ್ಯೂನೆವಿಲ್ಲೆಯ ಶಾಂತಿ ಒಪ್ಪಂದ (1801)ದ ಮೇರೆಗೆ ರೈನ್ ನದಿಯ ಎಡದಂಡೆಯ ಮೇಲಿನ ಎಲ್ಲಾ ಪವಿತ್ರವಾದ ರೋಮನ್ ಚಕ್ರಾಧಿಪತ್ಯಕ್ಕೆ ಸೇರಿದ ಪ್ರದೇಶಗಳನ್ನೂ ಅಧಿಕೃತವಾಗಿ ಫ್ರೆಂಚ್ ರಿಪಬ್ಲಿಕ್ ನ ಅಂಗವಾಗಿ ಸೇರಿಸಿಕೊಳ್ಳಲಾಯಿತು (1798ರಲ್ಲೇ ಫ್ರ್ಯಾನ್ಸ್ ಕಲೋನ್ ಅನ್ನು ಆಕ್ರಮಿಸಿತ್ತು). ಹೀಗಾಗಿ, ಈ ಪ್ರದೇಶವು ನಂತರದ ದಿನಗಳಲ್ಲಿ ನೆಪೋಲಿಯನ್ ರ ಚಕ್ರಾಧಿಪತ್ಯದ ಒಂದು ಭಾಗವಾಯಿತು. ಕಲೋನ್ ಫ್ರೆಂಚ್ ಡಿಪಾರ್ಟೆಮೆಂಟ್ ರೋಯೆರ್ ನ ಒಂದು ಭಾಗವಾಗಿತ್ತು(ಈ ಹೆಸರು ರೋಯರ್ ನದಿಯಿಂದ ಎರವಲಾಗಿದ್ದು, ಜರ್ಮನ್: ರರ್) ಮತ್ತುಆಚೆನ್ (Aix-la-ಚಾಪೆಲೆ) ಅದರ ರಾಜಧಾನಿಯಾಗಿತ್ತು. ಫ್ರೆಂಚರು ಸಾರ್ವಜನಿಕ ಜೀವನವನ್ನು ಆಧುನಿಕಗೊಳಿಸಿದರು; ಉದಾಹರಣೆಗೆ ನೆಪೋಲಿಯಾನಿಕ್ ಕೋಡ್ ಅನ್ನು ಪರಿಚಯಿಸಿ, ಹಳೆಯ ಶ್ರೇಷ್ಠರನ್ನು ಅಧಿಕಾರದಿಂದ ಇಳಿಸಿದರು. ಈ ನೆಪೋಲಿಯಾನಿಕ್ ಕೋಡ್ ರೈನ್ ನ ಎಡದಂಡೆಯ ಪ್ರಾಂತ್ಯಗಳಲ್ಲಿ 1900ರ ವರೆಗೆ ಉಪಯೋಗದಲ್ಲಿತ್ತು; ನಂತರ ಒಂದು ಒಟ್ಟುಗೂಡಿದ ನಾಗರಿಕ ಸಂಹಿತೆ(ದ ಬರ್ಗರ್ಲಿಚೆಸ್ ಜೆಸೆಟ್ಸ್ ಬುಕ್ ) ಯನ್ನು ಜರ್ಮನ್ ಎಂಪೈರ್ ನಲ್ಲಿ ಜಾರಿಗೊಳಿಸಲಾಯಿತು. 1815ರಲ್ಲಿ, ವಿಯೆನ್ನಾದ ಕಾಂಗ್ರೆಸ್ ನಲ್ಲಿ, ಕೊಲೋನ್ ಅನ್ನುಪ್ರಷ್ಯಾ ಸಂಸ್ಥಾನದ ಅಂಗವಾಗಿಸಲ್ಪಟ್ಟಿತು; ಮೊದಲಿಗೆ ಜ್ಯುಲಿ್-ಕ್ಲೀವ್ಸ್-ಬೆರ್ಗ್ ಪ್ರಾಂತ್ಯವನ್ನು ಹಾಗೂ ನಂತರ ರೈನ್ ಪ್ರಾಂತ್ಯವನ್ನು.
ರೋಮನ್ ಕ್ಯಾಥೋಲಿಕ್ ರೈನ್ ಲ್ಯಾಂಡ್ ಮತ್ತು ಹೆಚ್ಚಾಗಿಯೇ ಪ್ರೊಟೆಂಸ್ಟೆಂಟ್ ಗ ಕಡೆ ವಾಲಿದ ಪ್ರಷ್ಯನ್ ರಾಜ್ಯದ ನಡುವಿನ ಸರ್ವಕಾಲಿಕ ಆತಂಕಗಳು ಹೆಚ್ಚುತ್ತಲೇ ಸಾಗಿತು ಮತ್ತು ಕಲೋನ್ ಆ ಗಲಭೆಗಳ ಕೇಂದ್ರಬಿಂದುವಾಗಿರುತ್ತಿತ್ತು. 1837ರಲ್ಲಿ ಕಲೋನ್ ನ ಆರ್ಕ್ ಬಿಷಪ್ ಕ್ಲೆಮೆನ್ಸ್ ಆಗಸ್ಟ್ ವಾನ್ ಡ್ರೋಸ್ಟೆ-ವಿಷೆರಿಂಗ್ರನ್ನು ಪ್ರೊಟೆಸ್ಟೆಂಟ್ ಗಳು ಮತ್ತು ರೋಮನ್ ಕ್ಯಾಥೋಲಿಕ್ ಗಳ ನಡುವಿನ ಮದುವೆ (ಮಿಷಹೆನ್ ಸ್ಟ್ರೀಟ್ )ಗೆ ಸಂಬಂಧಿತವಾದ ಕಾನೂನಿನ ಪರಿಧಿಗೆ ಸಂಬಂಧಿತವಾದ ವಿವಾದದಲ್ಲಿ ಬಂಧಿಸಲಾಯಿತು ಮತ್ತು ಎರಡು ವರ್ಷಗಳ ಕಾಲ ಸೆರೆಯಲ್ಲಿಡಲಾಯಿತು. 1874ರಲ್ಲಿ ಕಲ್ಟರ್ ಕಾಂಪ್ಫ್ ನ ಅವಧಿಯಲ್ಲಿ, ಆರ್ಕ್ ಬಿಷಪ್ ಪಾಲ್ ಮೆಲ್ಚರ್ಸ್ ರು ನೆದರ್ಲ್ಯಾಂಡ್ಸ್ ನಲ್ಲಿ ಆಶ್ರಯ ಪಡೆಯುವ ಮುನ್ನವೇ ಬಂಧಿಸಲಾಯಿತು. ಈ ಜಗಳಗಳು ಕ್ಯಾಥೊಲಿಕ್ ಜನರನ್ನು ಬರ್ಲಿನ್ ನಿಂದ ವಿಮುಖರಾಗುವಂತೆ ಮಾಡಿದವು ಮತ್ತು ಪ್ರಬಲವಾದ ಪ್ರಷ್ಯನ್ ವಿರೋಧಿ ಭಾವನೆಗಳಿಗೆ ಎಡಮಾಡಿಕೊಟ್ಟಿತು; ಇದು ಎರಡನೆಯ ಜಾಗತಿಕ ಯುದ್ಧದ ನಂತರವೂ ಪ್ರಸ್ತುತವಾಗಿದ್ದಿತು ಎನ್ನುವುದು ಕಲೋನ್ ನ ಮಾಜಿ ಮೇಯರ್ ಕೊನ್ರಾಡ್ ಅಡೆನಾಯೆರ್ ಪಶ್ಚಿಮ ಜರ್ಮನಿಯ ಚಾಂಸೆಲರ್ ಆದಾಗಲೂ ಸುಸ್ಪಷ್ಟವಾಗಿತ್ತು.
19ನೆಯ ಮತ್ತು 20ನೆಯ ಶತಮಾನಗಳಲ್ಲಿ ಕಲೋನ್ ತನ್ನ ಸುತ್ತಮುತ್ತಲಿನ ಹಲವಾರು ಪಟ್ಟಣಗಳನ್ನು ತನ್ನ ಸುಪರ್ದಿಗೆ ತಂದುಕೊಂಡಿತು ಮತ್ತು ಮೊದಲನೆಯ ಮಹಾಯುದ್ಧದ ವೇಳೆಗೆ 700,000 ನಿವಾಸಿಗಳನ್ನು ಹೊಂದಿದ ನಗರವಾಗಿತ್ತು.
ಕೈಗಾರಿಕೋದ್ಯಮವು ನಗರವನ್ನು ಬದಲಾಯಿಸಿತು ಮತ್ತು ಅದರ ಬೆಳವಣಿಗೆಯನ್ನು ಕ್ಷಿಪ್ರವಾಗಿಸಿತು. ವಾಹನ ಮತ್ತು ಎಂಜಿನ್ ಗಳ ಉತ್ಪಾದನೆಯು ವಿಶೇಷವಾಗಿ ಯಶಸ್ವಿಯಾಯಿತು; ಆದರೆ ಬೃಹತ್ ಕೈಗಾರಿಕೆಗಳು ರರ್ ಪ್ರದೇಶಕ್ಕಿಂತಲೂ ಕಡಿಮೆ ಸರ್ವವ್ಯಾಪಿಯಾಗಿದ್ದವು. 1249ರಲ್ಲಿ ಆರಂಭಿಸಿದ, ಆದರೆ 1560ರ ಸುಮಾರಿಗೆ ಬಿಟ್ಟುಬಿಟ್ಟಿದ್ದ ಕ್ಯಾಥೆಡ್ರಲ್ ಅನ್ನು ಕಡೆಗೂ 1880ರಲ್ಲಿ ಪೂರ್ಣಗೊಳಿಸಲಾಯಿತು; ಇದು ಕೇವಲ ಪೂಜಾಸ್ಥಾನವಾಗಿರದೆ ನೂತನವಾಗಿ ಸ್ಥಾಪಿತವಾದ ಜರ್ಮನ್ ಸಂಸ್ಥಾನದ ಮತ್ತು ಮಧ್ಯಕಾಲೀನ ಯುಗದಿಂದ ಮುಂದುವರೆದ ಜರ್ಮನಿಯ ವಿಜಯೋತ್ಸವವನ್ನು ಸಾರುವಂತಹ ಜರ್ಮನಿಯ ರಾಷ್ಟ್ರೀಯ ಸ್ಮಾರಕವೂ ಆಯಿತು. ಈ ನಾಗರಿಕ ಬೆಳವಣಿಗೆಗೆ ಕೆಲವು ಸ್ಥಳಗಳು ನಗರದ ಪುರಾತನ ಸಂಸ್ಕೃತಿ ಬಿಂಬಿಸುವ ಕಟ್ಟಡಗಳನ್ನು ಕೆಡವಬೇಕಾಯಿತು(ಉದಾಹರಣೆಗೆ ನಗರದ ಗೋಡೆಗಳು ಅಥವಾ ಕ್ಯಾಥೆಡ್ರಲ್ ನ ಸುತ್ತಲಿನ ಪ್ರದೇಶ) ಮತ್ತು ಇವುಗಳ ಜಾಗದಲ್ಲಿ ಕೆಲವೊಮ್ಮೆ ಸಮಕಾಲೀನ ಕಟ್ಟಡಗಳು ತಲೆ ಎತ್ತಿದವು. ಇನ್ನೊಂದು ದಿಕ್ಕಿನಿಂದ ನೋಡಿದರೆ, ಕಲೋನ್ ಶಸ್ತ್ರಸಜ್ಜಿತವಾದ ಭದ್ರಕೋಟೆಯಾಗಿ ಮಾರ್ಪಾಡಾಯಿತು (ವೆರ್ಡಮ್ ಮತ್ತು ಲೈಗೆ)ಯಲ್ಲಿನ ಫ್ರೆಂಚ್ ಮತ್ತು ಬೆಲ್ಜಿಯಂನ ಕೋಟೆಗಳಿಗೆ ವಿರುದ್ಧವಾಗಿ ನಗರವನ್ನು ಸುತ್ತುವರಿದ ಎರಡು ಸುಭದ್ರಗೊಳಿಸಿದ ಪಟ್ಟಿಗಳಿದ್ದವು ಅದರ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ಜರ್ಮನಿಯ ಅತಿ ದೊಡ್ಡ ಕೋಟೆಯನ್ನು ಕಾಯುವ ಸೇನೆಯ ಬೇಡಿಕೆಗಳು ನಗರದ ಬೆಳವಣಿಗೆಗೆ ಅಡ್ಡಿಯಾದವು; ಕೋಟೆಳು, ಬಂಕರ್ ಗಳು ಮತ್ತು ವಿಶಾಲವಾದ ರಕ್ಷಣಾ ಹಳ್ಳಗಳು ನಗರದ ಎಲ್ಲೆಡೆಯೂ ಹರಡಿ ನಗರದ ವಿಸ್ತರಣೆಗೆ ಮುಳುವಾದವು; ಇದರಿಂದ ಜಗರದ ಒಳಭಾಗದಲ್ಲಿಯೇ ಕಟ್ಟಡಗಳ ಸಾಂದ್ರತೆ ಬಹಳ ಹೆಚ್ಚಿತು.
ಹಲವಾರು ಚಿಕ್ಕ ವಿಮಾನಗಳು ನಗರವನ್ನು ಗುರಿಯಿರಿಸಿಕೊಂಡು ಧಾಳಿ ಮಾಡಿದಂತಹ ಮೊದಲನೆಯ ಮಹಾಯುದ್ಧದ ನಂತರ ಕಲೋನ್ ಅನ್ನು ಬ್ರಿಟಿಷ್ ಆರ್ಮಿ ಆಫ್ ದ ರೈನ್ ಕದನವಿರಾಮದ ಒಪ್ಪಂದದ ಮೇರೆಗೆ 1926ರವರೆಗೆ ರಾಜ್ಯಭಾರ ಮಾಡಿತು ಹಾಗೂ ನಂತರ ವರ್ಸಾಲೆಸ್ ಶಾಂತಿ ಒಪ್ಪಂದದ ಮೇರೆಗೆ ರಾಜ್ಯವಾಳಿತು.[೧೪] ರೈನ್ ಲ್ಯಾಂಡ್ ನಲ್ಲಿನ ಕ್ರೌರ್ಯಭರಿತ ಫ್ರೆಂಚ್ ಆಕ್ರಮಣಕ್ಕೆ ವಿರುದ್ಧವಾದ ರೀತಿಯಲ್ಲಿ, ಸ್ಥಳೀಯರೊಡನೆ ಬ್ರಿಟಿಷರು ಹೆಚ್ಚು ಜಾಣ್ಮೆಯಿಂದ ನಡೆದುಕೊಂಡರು. ಕಲೋನ್ ನ ಮೇಯರ್ (ನಂತರ ಪಶ್ಚಿಮ ಜರ್ಮನಿಯ ಚಾನ್ಸೆಲರ್ ಆದವರು) ಕೊನ್ರಾಡ್ ಅಡೆನಾಯೆರ್ ಈ ವಿಧದ ನಡವಳಿಕೆಯ ರಾಜಕೀಯ ಪರಿಣಾಮಗಳನ್ನು ಕಂಡುಕೊಂಡರು; ಬ್ರಿಟಿಷರಿಗೆ ರೈನ್ ಲ್ಯಾಂಡ್ ನಲ್ಲಿ ಒಟ್ಟಾಗಿ ಖಾಯಂ ಅಗಿ ಆಡಳಿತ ನಡೆಸುವ ಫ್ರ್ಯಾನ್ಸ್ ನ ಯೋಚನೆಗಳು ರುಚಿಸಲಿಲ್ಲ. 1919ರಲ್ಲಿ ಯೂನಿವರ್ಸಿಟಿ ಆಫ್ ಕಲೋನ್ (ಫ್ರೆಂಚರು ಇದನ್ನು1798ರಲ್ಲಿ ಮುಚ್ಚಿಬಿಟ್ಟಿದ್ದರು) ಮರುಸ್ಥಾಪನೆಗೊಂಡಿತು. ಇದು 1918-19ರಲ್ಲಿ ಫ್ರೆಂಚರಿಗೆ ಸೇರಿಹೋಗಿದ್ದ ಜರ್ಮನಿಯ ಯೂನಿವರ್ಸಿಟಿ ಆಫ್ ಸ್ಟ್ರಾಸ್ಬೋರ್ಗ್ ನ ಬದಲಾಗಿ ಇರಲೆಂದು ಸ್ಥಾಪಿಸಲಾಯಿತು. ವೀಮಾರ್ ರಿಪಬ್ಲಿಕ್ ಅವಧಿ(1919–1933)ಯಲ್ಲಿ ಮೇಯರ್ ಅಡೆನಾಯೆರ್ ರ ಮಾರ್ಗದರ್ಶನದಲ್ಲಿ ಕಲೋನ್ ಚೆನ್ನಾಗಿ ಅಭಿವೃದ್ಧಿಯಾಯಿತು; ಸಾರ್ವಜನಿಕ ಆಡಳಿತ, ವಸತಿ, ಯೋಜನೆಗಳು ಮತ್ತು ಸಾಮಾಜಿಕ ವಿಷಯಗಳಲ್ಲಿ ವಿಶೇಷತಃ ಅಭಿವೃದ್ಧಿ ಕಂಡುಬಂದಿತು. ಬೃಹತ್ ಸಾರ್ವಜನಿಕ ಉದ್ಯಾನವನಗಳನ್ನು ನಿರ್ಮಿಸಲಾಯಿತು; ವಿಶೇಷತಃ ಎರಡು ಗ್ರುಂಗುರ್ಟೆಲ್ (ಹಸಿರು ಪಟ್ಟಿಗಳು), ಗಳನ್ನು ಹಿಂದಿನ ಕೋಟೆಗಳ ಭದ್ರಗೊಳಿಸಿದ ಪ್ರದೇಶಗಳಲ್ಲಿ ನಿರ್ಮಿಸಲಾಯಿತು; ತಮ್ಮ ಮೇಲೆ ಹೇರಲ್ಪಟ್ಟ ಶಾಂತಿ ಒಪ್ಪಂದದ ಮೇರೆಗೆ ರೈನ್ ಲ್ಯಾಂಡ್ ಅನ್ನು ಮಿಲಿಟರಿ ಮುಕ್ತಗೊಳಿಸುವ ಸಲುವಾಗಿ ಈ ಕೋಟೆಗಳನ್ನು ನಾಶಗೊಳಿಸಲೇಬೇಕಿತ್ತು(1933ರವರೆಗೆ ಈ ಯೋಜನೆಯು ಪೂರ್ಣಗೊಂಡಿರಲಿಲ್ಲ). ಹೊಸ ಸಾಮಾಜಿಕ ವಸತಿಯನ್ನು ಇತರ ಜರ್ಮನ್ ನಗರಗಳಿಗೆ ಮಾದರಿಯಾಗಿ ತೋರಿಸಲಾಯಿತು. ಕಲೋನ್ ಒಲಿಂಪಿಕ್ಸ್ ತನ್ನ ನೆಲದಲ್ಲಿ ನಡೆಸಲು ಇಚ್ಛಿಸಿ ಪೈಪೋಟಿಗಿಳಿದಾಗ ಮುಂಗೆರ್ಸ್ ಡಾರ್ಫ್ ನಲ್ಲಿ ಒಂದು ಆಧುನಿಕ ಕ್ರೀಡಾಂಗಣವನ್ನು ಕಟ್ಟಲಾಯಿತು. ಬ್ರಿಟಿಷ್ ಆಕ್ರಮಣವು ಮುಗಿಯುವ ವೇಳೆಗೆ ಜರ್ಮನ್ ನಾಗರಿಕ ವಿಮಾನ ಸೌಲಭ್ಯವನ್ನು ಮತ್ತೆ ಕಲೋನ್ ಮೇಲೆ ಮುಂದುವರೆಸಲು ಅನುಮತಿಸಲಾಯಿತು ಮತ್ತುಬಟ್ಝ್ ವೀಲೆರ್ಹಾಫ್ ವಿಮಾನ ನಿಲ್ದಾಣವು ಶೀಫ್ರದಲ್ಲಿಯೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸಾರಿಗೆಯ ಕೇಂದ್ರಸ್ಥಾನವಾಯಿತು ಹಾಗೂ ಬರ್ಲಿನ್-ಟೆಂಪೆಲ್ಹಾಫ್ ನಂತರದ ಎರಡನೆಯ ಸ್ಥಾನವನ್ನು ಪಡೆಯಿತು. 1939ರ ವೇಳೆಗೆ ಜನಸಂಖ್ಯೆಯು 772,221ಕ್ಕೆ ಏರಿತ್ತು. ಇತರೆ ನಗರಗಳಿಗೆ ಹೋಲಿಸಿದೆ ನಾಝಿಗಳಿಗೆ ಇಲ್ಲಿ ತೀರ್ಮಾನವಾದ ಬೆಂಬಲವು ದೊರಕಲಿಲ್ಲ; ಕಲೋನ್ ನಲ್ಲಿ NSDAPಗಾಗಿ ರೀಚ್ ಸ್ಟ್ಯಾಗ್ ಚುನಾವಣೆಗಳಲ್ಲಿ ಹಾಕಿದ ಮತಗಳ ಸಂಖ್ಯೆ ಯಾವಾಗಲೂ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದ್ದಿತು.[೧೫][೧೬]
2ನೇ ಜಾಗತಿಕ ಸಮರ
[ಬದಲಾಯಿಸಿ]ಎರಡನೆಯ ಮಹಾಯುದ್ಧದ ಕಾಲದಲ್ಲಿ ಮನ್ ಸ್ಟೆರ್ ನಲ್ ಸೇನಾ ಜಿಲ್ಲೆ(ವೆಹರ್ಕ್ರೀಸ್ )ಯಾದ VIಗೆ ಕಲೋನ್ ಸೇನಾಪ್ರದೇಶದ ಪ್ರಮುಖ ಶಿಬಿರಗಳನ್ನು ಹೊಂದಿದ ಪ್ರದೇಶ(ಮಿಲ್ಲಿಟರ್ಬೆರೀಚ್ಷಾಪ್ಟ್ ಕೊಮಾಂಡೋಕ್ವಾರ್ಟೀಯ್ರ್ ). ಕಲೀನ್ ಲೆಫ್ಟಿನೆಂಟ್-ಜನರಲ್ ಫ್ರೀಹೆರ್ ರೋಯ್ಡರ್ ವಾನ್ ಡಿಯರ್ಸ್ ಬರ್ಗ್ ರ ಅಧೀನದಲ್ಲಿದ್ದು, ಆ ದಂಡನಾಯಕರ ಕೈಕೆಳಗೆಬಾನ್, ಸೀಗ್ಬರ್ಗ್, ಆಛೆನ್, ಜ್ಯುಲಿಕ್, ಡ್ಯುರೆನ್, ಮತ್ತು ಮಾನ್ಸ್ಕೌ ಪ್ರದೇಶಗಳ ಸೇನೆಗಳೂ ಇದ್ದವು ಮತ್ತು ಅವುಗಳ ಚಟುವಟಿಕೆಯ ಜವಾಬ್ದಾರಿ ಈ ದಂಡನಾಯಕರದೇ ಆಗಿತ್ತು. ಕಲೋನ್ 211ನೆಯ ಸಿಪಾಯಿಗಳ ತುಕಡಿ ಮತ್ತು 26ನೆಯ ಶಸ್ತ್ರಾಸ್ತ್ರಗಳ ತುಕಡಿಗಳಿಗೆ ಆವಾಸಸ್ಥಾನವಾಗಿತ್ತು.
ಎರಡನೆಯ ಮಹಾಯುದ್ಧದಲ್ಲಿ ಕಲೋನ್ ಮೇಲೆ ಬಾಂಬ್ ಧಾಳಿ ನಡೆದ ಸಂದರ್ಭದಲ್ಲಿ, ಕಲೋನ್ ಪಶ್ಚಿಮದ ಮಿತ್ರರು ನಡೆಸಿದ 262 ವಾಯುಧಾಳಿಗಳಿಗೆ ತುತ್ತಾಯಿತು[೧೭]; ಈ ಧಾಳಿಗೆ ಸುಮಾರು 20,000 ನಾರಿಕರು ಬಲಿಯಾದರು ಮತ್ತು ಈ ಧಾಳಿಯು ನಗರದ ಕೇಂದ್ರಭಾಗವನ್ನು ಹೆಚ್ಚು ಕಡಿಮೆ ಸರ್ವನಾಶ ಮಾಡಿಬಿಟ್ಟಿತು. ಮೇ 31, 1942ರಂದು ಕಲೋನ್ "ಆಪರೇಷನ್ ಮಿಲೆನಿಯಂ"ನ ತಾಣವಾಗಿತ್ತು, ಇದು ಮೊಟ್ಟಮೊದಲ 1,000 ಬಾಂಬರ್ ಧಾಳಿ ಹಾಗೂ ಇದನ್ನು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಮಾಡಿದವರು ರಾಯಲ್ ಏರ್ಫೋರ್ಸ್. 1,046 ಭಾರವಾದ ಬಾಂಬರ್ ಗಳಿಂದ ತಮ್ಮ ಗುರಿಯತ್ತ 1,455 ಟನ್ ಗಳಷ್ಟು ಸ್ಫೋಟಕಗಳನ್ನು ತೂರುವುದರ ಮೂಲಕ ಆಕ್ರಮಣ ಮಾಡಿದರು. ಈ ಧಾಳಿಯು ಸುಮಾರು 75 ನಿಮಿಷಗಳು ನಡೆದು, 600 acres (243 ha) ಗಳ ವಿಸ್ತೀರ್ಣದ ಕಟ್ಟಡಗಳಿದ್ದ ಪ್ರದೇಶವನ್ನು ವಿನಾಶಗೊಳಿಸಿತು, 486 ನಾಗರಿಕರ ಬಲಿ ತೆಗೆದುಕೊಂಡಿತು ಮತ್ತು 59,000 ಜನರು ನಿರಾಶ್ರಿತರಾದರು. ಯುದ್ಧ ಮುಗಿಯುವ ವೇಳೆಗೆ ಕಲೋನ್ ನ ಜನಸಂಖ್ಯೆಯು 95%ನಷ್ಟು ಇಳಿದುಹೋಯಿತು. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಜನರನ್ನು ಸಮೂಹಗಟ್ಟಲೆ ಹಳ್ಳಿಗಾಡು ಪ್ರದೇಶಗಳತ್ತ ಕಳುಹಿಸಿ ನಗರವನ್ನು ತೆರವುಗೊಳಿಸಲಾಯಿತು. ಇದೇ ವಿದ್ಯಮಾನವು ಯುದ್ಧದ ಕಡೆಯ ಎರಡು ವರ್ಷಗಳಲ್ಲಿ ಜರ್ಮನಿಯ ಇತರ ನಗರಗಳನ್ನೂ ಉಂಟಾಯಿತು. 1945ರ ಕೊನೆಯ ವೇಳೆಗೆ, ಜನಸಂಖ್ಯೆಯು ಮತ್ತೆ 500,000 ಮುಟ್ಟಿತ್ತು.
ಅಷ್ಟು ಹೊತ್ತಿಗೆ, ಕಲೋನ್ ನ ಯುದ್ಧ-ಪೂರ್ವ ಯಹೂದಿಗಳ ಜನಸಂಖ್ಯೆಯಾದ 20,000 ಜನರನ್ನೂ ಊರಿನಿಂದ ಹೊರಗಟ್ಟಿದ್ದರು ಅಥವಾ ಜರ್ಮನ್ ದರ್ಬಾರಿಗೆ ಸಿಲುಕಿ ಸಾವನ್ನಪ್ಪಿದ್ದರು. ನಗರದ ಆರು ಯಹೂದಿ ಇಗರ್ಜಿಗಳನ್ನು ನಾಶಪಡಿಸಿದ್ದರು. ರೂನ್ ಸ್ಟ್ರೇನ್ ಮೇಲಿನ ಇಗರ್ಜಿಯು ಮತ್ತೆ 1959ರಲ್ಲಿ ನಿರ್ಮಾಣಗೊಂಡಿತು.[೧೮]
ಯುದ್ಧಾನಂತರದ ಕಲೋನ್
[ಬದಲಾಯಿಸಿ]ಕಲೋನ್ ಆ ಪ್ರದೇಶದಲ್ಲೇ ಅತಿ ದೊಡ್ಡ ನಗರವೆಂಬ ಖ್ಯಾತಿಗೊಳಗಾಗಿದ್ದರೂ, ಸಮೀಪದ ಡುಸೆಲ್ಡಾರ್ಫ್ ಅನ್ನು ಫೆಡೆರಲ್ ರಾಜ್ಯವಾದ ಉತ್ತರ ರೈನ್-ಪಶ್ಚಿಮಫಾಲಯಾದ ರಾಜಕೀಯ ರಾಜಧಾನಿಯಾಗಿ ಆರಿಸಲಾಯಿತು. ಬಾನ್ ಅನ್ನು ತಾತ್ಕಾಲಿಕ ರಾಜಧಾನಿ (ಪ್ರಾವಿಸೋರಿಷೆ ಬುಂಡೆಶೌಪ್ಟ್ ಸ್ಟ್ಯಾಡ್ಟ್ ) ಮತ್ತು ಫೆಡೆರಲ್ ರಿಪಬ್ಲಿಕ್ ಆಫ್ ಜರ್ಮನಿಯ ಸರ್ಕಾರದ ಪೀಠವಾಗಿ ಆರಿಸಿದ್ದರಿಂದ, ಕಲೋನ್ ಮಾಜಿಪಶ್ಚಿಮ ಜರ್ಮನಿಯ ಎರಡು ಪ್ರಮುಖ ರಾಜಕೀಯ ಕೇಂದ್ರಗಳ ಮಧ್ಯದಲ್ಲಿದ್ದ ಕಾರಣದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಹೊಂದಿತು. ನಗರದಲ್ಲಿ ಬೃಹತ್ ಸಂಖ್ಯೆಯಲ್ಲಿ ಫೆಡೆರಲ್ ಏಜೆನ್ಸೀಗಳು ಮತ್ತು ಸಂಸ್ಥೆಗಳು ತಲೆ ಎತ್ತಿದವು. 1990ರಲ್ಲಿ ಮರುಸೇರ್ಪಡೆಯಾದನಂತರ ಬರ್ಲಿನ್ ಜರ್ಮನಿಯ ಫೆಡೆರಲ್ ರಾಜಧಾನಿಯಾಯಿತು.
1945ರಲ್ಲಿ ವಾಸ್ತುಶಿಲ್ಪಿ ಮತ್ತು ನಗರ ವಿನ್ಯಾಸಚತುರ ರುಡಾಲ್ಫ್ ಸ್ಕ್ವಾರ್ಟ್ಝ್ ಕಲೋನ್ ಅನ್ನು "ಜಗತ್ತಿನ ಅತಿ ದೊಡ್ಡ ಕಟ್ಟಡಗಳ ಕಸದ ರಾಶಿ" ಎಂದು ಕರೆದರು. 1047ರಲ್ಲಿ ಸ್ಕ್ವಾರ್ಟ್ಝ್ ಮರುನಿರ್ಮಾಣದ ಮೂಲ ವಿನ್ಯಾಸವನ್ನು ರಚಿಸಿದರು; ತತ್ಸಂಬಂಧಿತವಾಗಿ ನಗರದ ಡೌನ್ ಟೌನ್ ಪ್ರದೇಶಗಳಲ್ಲಿ ಕೆಲವು ಹೊಸ ರಸ್ತೆಗಳನ್ನು ನಿರ್ಮಿಸಬೇಕಾಯಿತು, ಪ್ರಮುಖವಾಗಿ ನಾರ್ಡ್-ಸುಡ್-ಫಾಹೃಟ್ ("ಉತ್ತರ-ದಕ್ಷಿಣ ರಸ್ತೆ"). ಈ ಮೂಲವಿನ್ಯಾಸವು ಯುದ್ಧದ ಕೆಲವೇ ದಿನಗಳಲ್ಲೇ ವಾಹನ ದಟ್ಟಣೆಯು ಬಹಳವೇ ಹೆಚ್ಚಾಗಬಹುದೆಂಬ ಅಂಶವನ್ನು ಗಣನೆಗೆ ತೆಗೆದುಕೊಂಡಿತ್ತು. ನಾಝಿ ಆಡಳಿತದ ಕಾಲದಲ್ಲಿಯೇ ಹೊಸ ರಸ್ತೆಗಳ ಯೋಜನೆಯು ಕೊಂಚ ಮಟ್ಟಿಗೆ ರೂಪಿತವಾಗಿತ್ತು, ಆದರೆ ಹೆಚ್ಚಿನ ಹೊರವಲಯದ (ಡೌನ್ ಟೌನ್) ಪ್ರದೇಶಗಳು ಇನ್ನೂ ಅಭಿವೃದ್ಧಿಯಾಗಿರದ ಕಾಲದಲ್ಲಿ ಈ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವುದು ಸುಲಭವಾಯಿತು. ಸೇಂಟ್ ಗೆರಿಯಾನ್, ಗ್ರೇಟ್ ಸೇಂಟ್ ಮಾರ್ಟಿನ್, ಸೇಂಟ್ ಮಾರಿಯಾ ಐಎಂ ಕ್ಯಾಪಿಟೊಲ್ ಮತ್ತು ಸುಮಾರು ಒಂದು ಡಝನ್ ಇತರ ರೋಮನ್ಸ್ಕ್ ಚರ್ಚು ಗಳ ನೆಲಸಮಾಧಿಯು ಎರಡನೆಯ ಮಹಾಯುದ್ಧದ ಕಾಲದಲ್ಲಿ ಆದುದರಿಂದ ನಗರಕ್ಕೆ ಅಪಾರವಾದ ಸಾಂಸ್ಕೃತಿಕ ವಸ್ತುಗಳ ನಷ್ಟವಾಯಿತು. ಆ ಚರ್ಚುಗಳ ಮತ್ತು ಗರ್ಝೆನಿಚ್ ಸಭಾಂಗಣದಂತಹ ಇತರ ಸ್ಮಾರಕಗಳ ಮರುನಿರ್ಮಾಣಕ್ಕೆ ಅಂದಿನ ಪ್ರಮುಖ ವಾಸ್ತುಶಿಲ್ಪಿಗಳ ಹಾಗೂ ಕಲಾ ಇತಿಹಾಸತಜ್ಞರ ತೀವ್ರವಿರೋಧ ವ್ಯಕ್ತವಾಯಿತಾದರೂ, ಬಹುತೇಕ ವಿಷಯಗಳಲ್ಲಿ ನಾಗರಿಕರ ಹಿತಾಸಕ್ತಿಗೆ ಮನ್ನಣೆ ನೀಡಲಾಯಿತು. ಈ ಮರುನಿರ್ಮಾಣವು 1990ರ ದಶಕದವರೆಗೆ ಮುಂದುವರೆಯಿತು ಹಾಗೂ ರೋಮನ್ಸ್ಕ್ ಚರ್ಚ್ ಸೇಂಟ್ ಕುನಿಬರ್ಟ್ ಕಡೆಗೆ ಮರುನಿರ್ಮಿತವಾದ ಕಟ್ಟಡವಾಯಿತು.
ನಗರದ ಮರುನಿರ್ಮಾಣಕ್ಕೆ ಸ್ವಲ್ಪ ಸಮಯ ಹಿಡಿಯಿತು. 1959ರಲ್ಲಿ ನಗರದ ಜನಸಂಖ್ಯೆಯು ಯುದ್ಧದ ಮುಂಚಿನ ದಿನಗಳ ಸಂಖ್ಯೆಯನ್ನು ತಲುಪಿತು. ನಂತರ ಕ್ರಮೇಣ ಹೆಚ್ಚುತ್ತಾ ಬಂದು 1975ರಲ್ಲಿ ಒಂದು ಮಿಲಿಯನ್ ಗೂ ಹೆಚ್ಚಿನ ಸಂಖ್ಯೆಯನ್ನು ಸುಮಾರು ಒಂದು ವರ್ಷಕಾಲ ಹೊಂದಿತ್ತು. ನಂತರ ಅದು ಮಿಲಿಯನ್ ಮಟ್ಟಕ್ಕಿಂತಲೂ ಕಡಿಮೆಯೇ ಇದೆ.
1980ರ ಹಾಗೂ 1990ರ ದಶಕಗಳಲ್ಲಿ ಕಲೋನ್ ನ ಆರ್ಥಿಕತೆಯು ಎರಡು ಪ್ರಮುಖ ಕಾರಣಗಳಿಂದ ವೃದ್ಧಿಯಾಯಿತು. ಮೊದಲಿಗೆ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾಧ್ಯಮ ಕಂಪನಿಗಳ ಸಂಖ್ಯೆ ಹೆಚ್ಚಿತು; ಇವೆಲ್ಲಕ್ಕೂ ಬೇಕಾದ ಸೌಲಭ್ಯಗಳನ್ನು ನವೀನವಾಗಿ ನಿರ್ಮಾಣವಾದ ಮೀಡಿಯಾ ಪಾರ್ಕ್ ನಲ್ಲಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದೆ; ಈ ಪಾರ್ಕ್ ಕಲೋನ್ ನ ಡೌನ್-ಟೌನ್ ಪ್ರದೇಶದಲ್ಲಿ ಪ್ರಮುಖವಾಗಿ ಗೋಚರಿಸುವ ಕೇಂದ್ರಬಿಂದುವನ್ನು ಸೃಷ್ಟಿಸಿದೆ ಮತ್ತು ಕಲೋನ್ ನ ಪ್ರಮುಖ ಗಗನಚುಂಬಿಗಳಲ್ಲಿ ಒಂದಾದ ಕೋಲ್ನ್ ಟುರ್ಮ್ ಅನ್ನೂ ಸಹ ಇಲ್ಲಿ ಹೊಂದಿದೆ. ಎರಡನೆಯದಾಗಿ, ವಿವಿಧ ರೀತಿಯ ವಾಹನ ದಟ್ಟಣೆಯನ್ನು ನಿಭಾಯಿಸುವ ಸರ್ವಕಾಲಿಕ ಅಭಿವೃದ್ಧಿಯ ಸೌಲಭ್ಯಗಳನ್ನು ಪಡೆದ ನಂತರ ಕಲೋನ್ ಇಡೀ ಮಧ್ಯ ಯೂರೋಪ್ ನಲ್ಲೇ ಬಹಳ ಸುಲಭವಾಗಿ ಗಮಿಸಬಲ್ಲ ಮೆಟ್ರೋಪಾಲಿಟನ್ ಪ್ರದೇಶವಾಗಿ ಬದಲಾಗಿದೆ.
ಕಲೋನ್ ವ್ಯಾಪಾರಿ ಜಾತ್ರೆಯ ಆರ್ಥಿಕ ಯಶಸ್ಸಿನ ಕಾರಣದಿಂದ, ನಗರವು ಈ ವ್ಯಾಪಾರಿ ಜಾತ್ರೆಯ ನಿವೇಶನವನ್ನು 2005ರಲ್ಲಿ ಮತ್ತಷ್ಟು ವಿಸ್ತಾರಗೊಳಿಸಿತು. ತತ್ಕಾಲದಲ್ಲೇ, 1920ರಲ್ಲಿ ನಿರ್ಮಿತವಾದ ಮೂಲ ಕಟ್ಟಡಗಳನ್ನು ಜರ್ಮನಿಯ ಬೃಹತ್ ಪ್ರಸರಣಕಾರರಾದ RTLಗೆ ತಮ್ಮ ನೂತನ ಕಾರ್ಪೊರೇಟ್ ಕೇಂದ್ರಕಚೇರಿಗಾಗಿ ಬಾಡಿಗೆಗೆ ನೀಡಲಾಗಿದೆ.
ಪಟ್ಟಣ/ನಗರದೃಶ್ಯ
[ಬದಲಾಯಿಸಿ]ಕಲೋನ್ ನ ಇನ್ನರ್ ಸ್ಟ್ಯಾಡ್ಟ್ ಎರಡನೆಯ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ನಾಶವಾಯಿತು. ನಗರದ ಮರುನಿರ್ಮಾಣ ಕಾರ್ಯವು 1950ರ ದಶಕದ ಶೈಲಿಯನ್ನೇ ಅನುಸರಿಸಿತು, ಹಳೆಯ ಬಡಾವಣೆಗಳನ್ನು ಹಾಗೆಯೇ ಗೌರವಯುತವಾಗಿ ಇರಿಸಿಕೊಂಡು, ರಸ್ತೆಗಳ ಹೆಸರುಗಳನ್ನೂ ಆಗಿನ ರೀತಿಗೆ ಹೊಂದುವಂತೆಯೇ ಇಡಲಾಯಿತು. ಹೀಗಾಗಿ, ಈಗಿನ ನಗರವು ಬಹಳ ವೈಶಿಷ್ಟ್ಯಪೂರ್ಣವಾಗಿದ್ದು ಸರಳ ಮಾಗೂ ಆಡಂಬರರಹಿತ ಯುದ್ಧಾನಂತರದ ಕಟ್ಟಡಗಳೊಡನೆ ಕೆಲವು ಯುದ್ಧದ ಮುಂಚಿನ ಕಟ್ಟಡಗಳು ಹಿತವಾಗಿ ಬೆರೆತಿವೆ; ಯುದ್ಧದ ಮುಂಚಿನ ಕಟ್ಟಡಗಳನ್ನು ಅವುಗಳ ಐತಿಹಾಸಿಕ ಪ್ರಾಮುಖ್ಯತೆಯ ಕಾರಣವಾಗಿ ಮರುನಿರ್ಮಾಣ ಮಾಡಲಾಯಿತು. "ವೀಡೆರೌಫ್ ಬಾಝೀಟ್" (ಮರುನಿರ್ಮಾಣ ಯುಗ)ದ ಕೆಲವು ಕಟ್ಟಡಗಳು, ಉದಾಹರಣೆಗೆ ವಿಲ್ಹೆಲ್ಮ್ ರಿಪ್ಹಾಹ್ನ್ ನ ಓಪ್ರಾ ಹೌಸ್, ಈಗ ಆಧುನಿಕ ವಾಸ್ತುಶಿಲ್ಪದ ಶ್ರೇಷ್ಠ ಕಟ್ಟಡಗಳೆಂದು ಪರಿಗಣಿಸಲಾಗಿವೆ.[ಸೂಕ್ತ ಉಲ್ಲೇಖನ ಬೇಕು]
ಆದಾಗ್ಯೂ,ಕಲೋನ್ ಓಪ್ರಾ ಹೌಸ್ ನ ಒಗ್ಗದ ಶೈಲಿ ಮತ್ತು ಇತರ ಆಧುನಿಕ ಕಟ್ಟಡಗಳ ವಿನ್ಯಾಸಗಳು ವಿವಾದಾತ್ಮಕವಾಗಿಯೇ ಉಳಿದಿವೆ.
ಮೈಲಿಗಲ್ಲುಗಳು
[ಬದಲಾಯಿಸಿ]ಚರ್ಚುಗಳು
- ಕಲೋನ್ ಕ್ಯಾಥೆಡ್ರಲ್ (ಜರ್ಮನ್: ಕಾಲ್ನರ್ ಡಾಂ ) ನಗರದ ಅತ್ಯಂತ ಪ್ರಸಿದ್ಧ ಸ್ಮಾರಕವಾಗಿ ಹಾಗೂ ಇಲ್ಲಿನ ನಿವಾಸಿಗಳು ಬಹಳವೇ ಗೌರವಿಸುವ ಸ್ಥಳವಾಗಿದೆ. ಇದು ಒಂದು ಗೋಥಿಕ್ ಶೈಲಿಯಲ್ಲಿ ನಿರ್ಮಿತವಾದ ಚರ್ಚ್, ನಿರ್ಮಾಣ ಆರಂಭವಾದುದು 1248ರಲ್ಲಿ ಮತ್ತು ಸಂಪೂರ್ಣವಾದುದು 1880ರಲ್ಲಿ. 1996ರಲ್ಲಿ ಇದನ್ನು ,ವಿಶ್ವ ಪರಂಪರೆಯ ತಾಣವಾಗಿ ಅಧಿಸೂಚಿಸಲಾಯಿತು; ಅದರಲ್ಲಿ ಮೂರು ರಾಜರ ಪ್ರತಿಮೆಗಳು ಸ್ಥಾಪಿತವಾಗಿದ್ದು, ಅವುಗಳಲ್ಲಿ (3}ಮೂರು ಮ್ಯಾಗಿಗಳ ಸಂತಾವಶಿಷ್ಟಗಳು ಇದೆಯೆಂದು ನಂಬಲಾಗಿದೆ ([೧೯] ಸಹ ನೋಡಿ ). ಕಲೋನ್ ನ ನಿವಾಸಿಗಳು ಕೆಲವೊಮ್ಮೆ ಕ್ಯಾಥೆಡ್ರಲ್ ಅನ್ನು "ನಿರಂತರ ನಿರ್ಮಿತವಾಗುತ್ತಿರುವ ನಿವೇಶನ" (ಡಾಯೆರ್ಬಾಸ್ಟೆಲೆ )ಎಂದು ಕರೆಯುತ್ತಾರೆ.
- ಹನ್ನೆರಡು ರೋಮನ್ಸ್ಕ್ ಚರ್ಚುಗಳು: ಈ ಕಟ್ಟಡಗಳು ಮಧ್ಯಕಾಲೀನ ಸ್ಯಾಕ್ರಲ್ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಗಳು. ಮೂಲತಃ ರೋಮನ್ ಚಾಪೆಲ್ ನ ಸ್ಮಶಾನವಾಗಿದ್ದ ಸೇಂಟ್ ಗೆರೆಯಾನ್ ನಮತಹ ಕೆಲವು ಚರ್ಚುಗಳ ತಮ್ಮ ಬೇರುಗಳನ್ನು ರೋಮನ್ ಕಾಲದವರೆಗೂ ಬೆಳೆಸಿಕೊಂಡಿವೆ. ಸೇಂಟ್ ಮಾರಿಯಾ ಲೈಸ್ಕರ್ಷೆನ್ ಹೊರತಾಗಿ ಈ ಎಲ್ಲಾ ಚರ್ಚುಗಳೂ ಎರಡನೆಯ ಮಹಾಯುದ್ಧದ ಕಾಲದಲ್ಲಿ ಬಹಳ ಜಖಂ ಆಗಿದ್ದವು. ಇವುಗಳ ಮರುನಿರ್ಮಾಣವು 1990ರ ದಶಕದಲ್ಲಿ ಪೂರ್ಣಗೊಂಡಿತು.
-
ಕಲೋನ್ ನ ಕ್ಯಾಥೆಡ್ರಲ್
-
ಶ್ರೇಷ್ಠವಾದ ಸೈಂಟ್ ಮಾರ್ಟಿನ್ ಚರ್ಚ್
-
ಸೈಂಟ್ ಸೆವೆರಿನ್ ಚರ್ಚ್
-
ಚರ್ಚ್ ಆಫ್ ದಿ ಅಸಂಪ್ಷನ್
-
ಹೋಲಿ ಟ್ರಿನಿಟಿ ಚರ್ಚ್
ಮಧ್ಯಕಾಲೀನ ಯುಗದ ಭವನಗಳು
ಕಲೋನ್ ನಗರ ಸಭಾಂಗಣವು (ಕೋಲ್ನರ್ ರಾಟ್ ಹಾವ್ಸ್ ), 12ನೆಯ ಶತಮಾನದಲ್ಲಿ ಸ್ಥಾಪಿತವಾಯಿತು; ಇದು ಜರ್ಮನಿಯ ಬಹಳ ಹಳೆಯನಗರ ಸಭಾಂಗಣವಾಗಿದ್ದು, ಇಂದಿಗೂ ಬಳಸಲ್ಪಡುತ್ತಿದೆ.[೨೦] ರೆನಾಯ್ಸಾನ್ಸ್ ಶೈಲಿಯ ಲೋಗ್ಗಿಯಾ ಮತ್ತು ಗೋಪುರಗಳನ್ನು 15ನೆಯ ಶತಮಾನದಲ್ಲಿ ಅಳವಡಿಸಲಾಯಿತು. ಇತರ ಪ್ರಮುಖ ಪಾರ್ಟಿಷಿಯನ್ ಭವನಗಳೆಂದರೆ ಗುರ್ಝೆನಿಚ್, ಹಾವ್ಸ್ ಸಾಲೆಕ್ ಮತ್ತು ಓವರ್ಸ್ಟಾಲ್ಝೆನ್ಹಾಸ್.
-
ಕಲೋನ್ ನಗರದ ಸಾರ್ವಜನಿಕ ಸಭಾಂಗಣ
-
ಗರ್ಝೆನಿಕ್
-
ಓವೆರ್ಸ್ತೊಲ್ಜೆನ್ಹೌಸ್
ಮಧ್ಯಕಾಲೀನ ಯುಗದ ನಗರಮಹಾದ್ವಾರಗಳು
ಹಿಂದೊಮ್ಮೆ ಇದ್ದು ಹನ್ನೆರಡು ನಗರ ಮಹಾದ್ವಾರಗಳ ಪೈಕಿ ಈಗ ಎಬರ್ಟ್ ಪ್ಲಾಟ್ಝ್ ನಲ್ಲಿರುವ ಈಗಲ್ ಸ್ಟೀನ್ಟೋರ್ಬರ್ಗ್, ರುಡಾಲ್ಫ್ ಪ್ಲಾಟ್ಝ್ ನಲ್ಲಿರುವ ಹಾಹೆಂಟೋರ್ ಮತ್ತು ಕ್ಲಾಡ್ ವಿಗ್ ಪ್ಲಾಟ್ಝ್ ನಲ್ಲಿರುವ ಸೆವೆರಿನ್ ಸ್ಟೋರ್ಬರ್ಗ ಮಾತ್ರ ಇಂದಿಗೂ ದೃಢವಾಗಿ ನಿಂತಿವೆ.
-
ಇಗೆಲ್ಸ್ತಇನ್ತೊರ್
-
ಹಹ್ನೆನ್ತೊರ್
-
ಸೇವೆರಿನ್ಸ್ತೋರ್
ರಸ್ತೆಗಳು
- ಕಲೋನ್ ರಿಂಗ್ ಬೂಲ್ ವಾರ್ಡ್ ಗಳು (ಹೋಹೆನ್ಝೋಲ್ಲೆರ್ನ್ರಿಂಗ್ , ಕೈಸರ್-ವಿಲ್ಹೆಲ್ಮ್-ರಿಂಗ್ , ಹ್ಯಾನ್ಸರಿಂಗ್ )ಗಳಂತಹವು, ಅವುಗಳ ಮಧ್ಯಕಾಲೀನ ನಗರ ಮಹಾದ್ವಾರಗಳೊಂದಿಗೆ (ರುಡಾಲ್ಫ್ ಪ್ಲ್ಯಾಟ್ಝ್ )ನ ಹಾಹೆಂಟೋರ್ನರ್ಗ್ ಗಳಂತಹವು) ನಿಶಾಜೀವನಕ್ಕೂ ಖ್ಯಾತಿ ಪಡೆದಿವೆ.
- ಹೋಹೆ ಸ್ಟ್ರಾಬ್(ಅರ್ಥಾತ್: ಹೆದ್ದಾರಿ ) ಇದು ಪ್ರಮುಖ ವ್ಯಾಪಾರಿ ಮಳಿಗೆಗಳನ್ನು ಹೊಂದಿರುವ ಪ್ರದೇಶವಾಗಿದೆ ಮತ್ತು ಕ್ಯಾಥೆಡ್ರಲ್ ನ ಸರಿಸುಮಾರು ದಕ್ಷಿಣದ ಭಾಗದಲ್ಲಿ ವಿಸ್ತೃತವಾಗಿ ಬೆಳೆದಿದೆ. ಈ ಬೀದಿಯಲ್ಲಿ ಹಲವಾರು ಉಡುಗೊರೆಗಳ ಅಂಗಡಿಗಳು, ವಸ್ತ್ರಭಂಡಾರಗಳು, ದಿಢೀರ್ ಆಹಾರ ಸೇವನಾ ಸ್ಥಳಗಳು ಮತ್ತು ವಿದ್ಯುನ್ಮಾನ ಸರಕುಗಳ ವ್ಯಾಪಾರದ ಅಂಗಡಿಗಳು ಇವೆ.
- ಸ್ಕಿಲ್ಡೆರ್ಗಸ್ಸೆ - ಹೋಹೆ ಸ್ಟ್ರಾಸ್ಸೆ ಯ ವ್ಯಾಪಾರಿಪ್ರದೇಶವನ್ನು ಪಶ್ಚಿಮದತ್ತ ವಿಸ್ತರಿಸುತ್ತದೆ ಮತ್ತು ಈ ವಿಸ್ತರಣೆಯು ನ್ಯೂಮಾರ್ಕ್ಟ್ ನಲ್ಲಿ ಕೊನೆಗೊಳ್ಳುತ್ತದೆ.
- ಎಹ್ರೆನ್ ಸ್ಟ್ರೇಬ್ - ಅಪೋಸ್ಟೆಲ್ನ್ ಸ್ಟ್ರಾಸ್ಸೆ , ಎಹ್ರೆನ್ ಸ್ಟ್ರಾಸ್ಸೆ , ಮತ್ತು ರುಡಾಲ್ಫ್ ಪ್ಲಾಟ್ಝ್ ಸುತ್ತಲಿನ ಮಾರುಕಟ್ಟೆಯ ಪ್ರದೇಶ, ಇದು ಕೊಂಚ ತಲೆತಿರುಕ ಹಾಗೂ ಆಧುನಿಕ ಶೈಲಿಯತ್ತ ವಾಲಿದೆ.
ಕ್ರೀಡೆಗಳ ಸ್ಥಳಗಳು
- Rರೀನ್ ಎನರ್ಜಿ ಸ್ಟೇಡಿಯನ್, ಇದು ಕಲೋನ್ ನ ಪ್ರಮುಖ ಕ್ರೀಡಾಂಗಣ, ಪ್ರಮುಖವಾಗಿ ಇದನ್ನುಸಾಕರ್ ಪಂದ್ಯಗಳಿಗಾಗಿ ಬಳಸುತ್ತಾರೆ, ಆಸನಗಳು - ರಾಷ್ಟ್ರೀಯ ಕ್ರೀಡೆಗಳಿಗಾದರೆ 50,997 ಆಗಂತುಕರಿಗೆ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗಾದರೆ 46,134 ಆಸನಗಳು, ಸ್ಥಳೀಯ ಮೊದಲನೆ ದರ್ಜೆಯ ಸಾಕರ್ ತಂಡ (ಬಂಡೆಸ್ಲಿಗ) ತಂಡದ ತವರು, 1. FC ಕೋಲ್ನ್.
- ಲಾಂಕ್ಸೆಸ್ ಅರೀನಾ (ಮೊದಲ ಹೆಸರು ಕೋಲ್ನರೀನಾ ), ಒಂದು ವಿವಿಧೋದ್ದೇಶ ಕಾರ್ಯಕ್ರಮಗಳ ಸಭಾಂಗಣ, ಸ್ಥಳೀಯ ಐಸ್ ಹಾಕಿ ತಂಡವಾದ ದ ಕೋಲ್ನರ್ ಹೇಯಿಯ ತವರು (ಅರ್ಥಾತ್: ಕಲೋನ್ ಷಾರ್ಕ್ಸ್ ).
ಸೇತುವೆಗಳು
[ಬದಲಾಯಿಸಿ]ರೈನ್ ನದಿಗೆ ಅಡ್ಡಲಾಗಿ ಕಲೋನ್ ನಲ್ಲಿ ಹಲವಾರು ಸೇತುವೆಗಳಿವೆ. ಅವುಗಳೆಂದರೆ (ದಕ್ಷಿಣದಿಂದ ಉತ್ತರಕ್ಕೆ): ಕಲೋನ್ ರಾಡೆನ್ ಕಿರ್ಚೆನ್ ಸೇತುವೆ, ದಕ್ಷಿಣ ರೈಲ್ವೇ ಸೇತುವೆ, ಸೆವೆರಿನ್ ಸೇತುವೆ, ಡ್ಯೂಟ್ಝ್ ಸೇತುವೆ, ಹೋಹೆನ್ಝಾಲ್ಲೆರ್ನ್ ಸೇತುವೆ, ಮೃಗಾಲಯ ಸೇತುವೆ (ಝೋಬ್ರುಕ್ಕೆ ) ಮತ್ತು ಕಲೋನ್ ಮುಲ್ಹೀಮ್ ಸೇತುವೆ. ವಿಶೇಷತಃ ಕಬ್ಬಿಣದ ಟೈಡ್ ಆರ್ಚ್ ಹೋಹೆನ್ಝೋಲ್ಲೆರ್ನ್ ಸೇತುವೆಯು (ಹೋಹೆನ್ಝೋಲ್ಲೆರ್ನ್ ಬ್ರೂಕೆ ) ನದಿದಂಡೆಯ ಗುಂಟ ಇರುವ ಪ್ರಮುಖ ಮೈಲಿಗಲ್ಲಾಗಿದೆ. ರೈನ್ ನದಿಗೆ ಅಡ್ಡಲಾಗಿ ನದಿ ದಾಟಲು ಮಾಡಿರುವ ವಿಶಿಷ್ಟ ವ್ಯವಸ್ಥೆಯೆಂದರೆ ಕಲೋನ್ ಕೇಬಲ್ ಕಾರ್ (ಜರ್ಮನ್: ಕೋಲ್ನರ್ ಸೀಲ್ಬಾಹ್ನ್ ), ಇದು ನೀಹ್ಲ್ ನ ಕಲೋನ್ ಝೂಅಲಾಜಿಕಲ್ ಗಾರ್ಡನ್ ಮತ್ತು ಡ್ಯೂಟ್ಝ್ ನ ರೀನ್ಪಾರ್ಕ್ ಗಳ ನಡುವಿನ ಸೇತುವಾಗಿ ರೀನ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಒಂದು ಕೇಬಲ್ ಮಾರ್ಗ.
ಗಗನಚುಂಬಿ ಕಟ್ಟಡಗಳು
[ಬದಲಾಯಿಸಿ]ಕಲೋನ್ ನ ಅತಿ ಎತ್ತರವಾದ ಕಟ್ಟಡವೆಂದರೆ 266 m (873 ft)*ನಲ್ಲಿರುವ ಕಲೋನಿಯಸ್ ಟೆಲಿಕಮ್ಯುನಿಕೇಷನ್ ಟವರ್ . ಇಲ್ಲಿನ ಪರಿವೀಕ್ಷಣಾ ವೇದಿಕೆಯು 1992ರಿಂದ ಮುಚ್ಚಲ್ಪಟ್ಟಿದೆ. ಕಲೋನ್ ನ ಗಗಗನಚುಂಬಿ ಕಟ್ಟಡಗಳಲ್ಲಿ ಆಯ್ದ ಕೆಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಇತರ ಎತ್ತರದ ಕಟ್ಟಡಗಳ ಪೈಕಿ ಹಾನ್ಸಾಹೋಕ್ಹಾಸ್ ಎಂಬ, ಜೇಕಬ್ ಕೊಯೆರ್ಫರ್ ವಿನ್ಯಾಸಗೊಳಿಸಿದ ಹಾಗೂ 1925ರಲ್ಲಿ ಸಂಪೂರ್ಣಗೊಂಡ ಕಟ್ಟಡವೂ ಒಂದು. ಒಂದು ಕಾಲದಲ್ಲಿ ಅದು ಯೂರೋಪ್ ನ ಅತಿ ಎತ್ತರದ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರೀನಾಹಾಫೆನ್ ಮತ್ತು ಮೆಸ್ಸೆರ್ಟಂ ಕೋಲ್ನ್ ಗಳಲ್ಲಿರುವ ಕ್ರಾನ್ಹಾಸ್ ಕಟ್ಟಡಗಳು ಸಹ ಪ್ರಸಿದ್ಧ ಗಗನಚುಂಬಿಗಳು(ಇಂಗ್ಲಿಷ್: ಟ್ರೇಡ್ ಫೇರ್ ಟವರ್ ).
ಗಗನಚುಂಬಿ | ಚಿತ್ರಗಳು | ಎತ್ತರ ಮೀಟರ್ ನಲ್ಲಿ | ಮಹಡಿಗಳ ಸಂಖ್ಯೆ | ವರ್ಷ | ವಿಳಾಸ | ಟಿಪ್ಪಣಿಗಳು | |
---|---|---|---|---|---|---|---|
ಕಾಲ್ನ್ ಟರ್ಮ್ | 148,5 | 43 | 2001 | ಮೀಡಿಯಾಪಾರ್ಕ್ 8, ಬ್ಯೂಸ್ಟ್ಯಾಡ್ಟ್-ನಾರ್ಡ್ | (ಅಕ್ಷರಶಃ: ಕಲೋನ್ ಗೋಪುರ ), ಕಲೋನ್ ನ ಎರಡನೆಯ ಅತಿ ಎತ್ತರದ ಗೋಪುರವಾದ ಇದರ ಎತ್ತರ 165.48 metres (542.91 ft), ಇದಕ್ಕಿಂತಲೂ ಎತ್ತರವಿರುವುದು ಕಲೋನಿಯಸ್ ಟೆಲಿಕಮ್ಯುನಿಕೇಷನ್ ಟವರ್ ಮಾತ್ರ | ||
ಕಲೋನಿಯಾ-ಹಾಕ್ಹಾಸ್ | 147 | 45 | 1973 | ಆನ್ ಡೆರ್ ಸ್ಕಾನ್ಝ್ 2, ರೀಹ್ಲ್ | 1973ರಿಂದ 1976ರವರೆಗೆ ಜರ್ಮನಿಯ ಅತಿ ಎತ್ತರವಾದ ಕಟ್ಟಡ. ಇಂದಿಗೂ ಇದು ದೇಶದ ಅತಿ ಎತ್ತರದ ವಸತಿ ಕಟ್ಟಡ. | ||
ರೀನ್ ಟವರ್ | 138 | 34 | 1980 | ರಾಡೆರ್ಬರ್ಗ್ಗರ್ಟೆಲ್, ಮೇರೀಯೆನ್ಬರ್ಗ್ | ಡ್ಯೂಟ್ಷೆ ವೆಲ್ಲೆಯ ಮಾಜಿ ಕೇಂದ್ರಕಚೇರಿ, 2007ರಿಂದ ನವೀನಗೊಳಿಸಲ್ಪಡುತ್ತಿದ್ದು ಈಗಿನ ಇದರ ಹೆಸರು ರೀನ್ ಟವರ್ ಕಲೋನ್-ಮೇರೀಯೆನ್ಬರ್ಗ್ | ||
ಯೂನಿ-ಸೆಂಟರ್[೨೧] | 133 | 45 | 1973 | ಲಕ್ಸೆಂಬರ್ಗರ್ ಸ್ಟ್ರೇಬ್, ಸಲ್ಝ್ | ಹೊಂದಿಸಿ=ಎಡಕ್ಕೆ | ||
TÜV ರೀನ್ ಲ್ಯಾಂಡ್ | 112 | 22 | 1974 | ಆಮ್ ಗ್ರಾಯೆನ್ ಸ್ಟೀಯ್ನ್, ಪೋಲ್ | ಹೊಂದಿಸಿ=ಎಡಕ್ಕೆ | ||
ಕಲೋನ್ ಟ್ರೈಯಾಂಗಲ್ | 103 | 29 | 2006 | ಆಟೋಪ್ಲ್ಯಾಟ್ಝ್ 1, ಡ್ಯೂಟ್ಝ್ | ಕ್ಯಾಥೆಡ್ರಲ್ ನ ಎದುರಿಗಿದ್ದು 103 m (338 ft) ಎತ್ತರದ ಮಂಚಿಗೆಯನ್ನು ಹೊಂದಿದೆ - ಇದು ಕ್ಯಾಥೆಡ್ರಲ್ ಗೆ ವ್ಯತಿರಿಕ್ತವಾಗಿದ್ದು ಒಂದು ಎಲಿವೇಟರನ್ನು ಹೊಂದಿದೆ ಮತ್ತು ರೈನ್ ಮೇಲಿನ ಕ್ಯಾಥೆಡ್ರಲ್ ನ ದೃಶ್ಯವನ್ನು ಕಾಣಲು ಅನುಕೂಲಕರವಾಗಿದೆ; ಯೂರೋಪಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA)ಯ ಪ್ರಧಾನಕಚೇರಿ. | ||
ಹರ್ಕ್ಯುಲಸ್-ಹಾಕ್ಹಾಸ್ | 102 | 31 | 1969 | ಗ್ರ್ಯಾಷ್ಟ್ ಸ್ಟ್ರೇಬ್ 1, ಎಹ್ರೆನ್ ಫೆಲ್ಡ್ | ಹೊಂದಿಸಿ=ಎಡಕ್ಕೆ |
ಸಂಸ್ಕೃತಿ
[ಬದಲಾಯಿಸಿ]ಕಲೋನ್ ನಲ್ಲಿ ಹಲವಾರು ವಸ್ತುಸಂಗ್ರಹಾಲಯಗಳು ಇವೆ. ಪ್ರಖ್ಯಾತ ರೋಮನ್-ಜರ್ಮನಿಕ ಸಂಗ್ರಹಾಲಯ ನಗರದ ಹಿಂದಿನ ಕಾಲದ ಕಲೆ ಮತ್ತು ಶಿಲ್ಪಕಲೆಗಳ ಸಂಗ್ರಹವಿದೆ; ಮ್ಯೂಸಿಯಂ ಲ್ಯುಡ್ವಿಗ್ ನಲ್ಲಿನವ್ಯ ಕಲೆಯ ಪ್ರಮುಖವಾದ ಸಂಗ್ರಹಗಳಿವೆ; ಇಲ್ಲಿರುವ ಪಿಕಾಸೋ ಸಂಗ್ರಹಗಳಿಗೆ ಕೇವಲ ಬಾರ್ಸಿಲೋನಾ ಮತ್ತು ಪ್ಯಾರಿಸ್ ಗಳ ಸಂಗ್ರಹಗಳು ಮಾತ್ರ ಸಾಟಿ. ಸ್ಕ್ನಟ್ಜೆನ್ ಮ್ಯೂಸಿಯಂ ಆಫ್ ರಿಲೀಜಿಯಸ್ ಆರ್ಟ್ ಸೇಂಟ್ ಸೆಸಿಲಿಯಾದಲ್ಲಿ ಸ್ಥಾಪಿತವಾಗಿದ್ದು, ಇದು ಕಲೋನ್ ನ ಹನ್ನೆರಡು ರೋಮನ್ಸ್ಕ್ ಚರ್ಚ್ ಗಳಲ್ಲಿ ಒಂದಾಗಿದೆ. ಹಲವಾರು ಆರ್ಕೇಸ್ಟ್ರಾಗಳು ಈ ನಗರದಲ್ಲಿ ಚಟುವಟಿಕೆಯಿಂದಿದ್ದು, ಅವುಗಳಲ್ಲಿ ಗರ್ಝೆನಿಚ್ ಆರ್ಕೇಸ್ಟ್ರಾ ಮತ್ತು WDR ಸಿಂಫೋನಿ ಆರ್ಕೇಸ್ಟ್ರಾ ಕಲೋನ್ ಗಳೆರಡೂ ಕಲೋನ್ ಫಿಲ್ಹಾರ್ಮೋನಿಕ್ ಆರ್ಕೇಸ್ಟ್ರಾ ಭವನದಲ್ಲಿವೆ.[೨೨] ಇತರ ಆರ್ಕೇಸ್ಟ್ರಾಗಳೆಂದರೆ ಮ್ಯೂಸಿಕಾ ಆಂಟಿಕಾ ಕೋಲ್ನ್, ಹಾಗೂ WDR ರಂಡ್ ಫಂಕ್ ಕಾರ್ ಕೋಲ್ನ್ ಸೇರಿದಂತೆ ಹಲವಾರು ಗಾಯನವೃಂದಗಳು. 1950ರ ದಶಕದಲ್ಲಿ ಮತ್ತು ಮತ್ತೆ 1990ರ ನಂತರದ ದಿನಗಳಲ್ಲಿ ಕಲೋನ್ ಎಲೆಕ್ಟ್ರಾನಿಕ್ ಮ್ಯೂಸಿಕ್ (ವಿದ್ಯುನ್ಮಾನ ಸಂಗೀತ)ನ ಪ್ರಮುಖ ಕೇಂದ್ರವೂ ಆಗಿದ್ದಿತು(ಸ್ಟುಡಿಯೋ ಫರ್ ಎಲಕ್ಟ್ರಾನಿಸ್ಕೆ ಮ್ಯುಸಿಕ್, ಕಾರ್ಲ್ಹೀನ್ ಸ್ಟಾಕ್ ಹೌಸೆನ್). ಸಾರ್ವಜನಿಕ ರೇಡಿಯೋ ಮತ್ತು ಟಿವಿ ಕೇಂದ್ರಗಳು WDR 1970ರ ದಶಕದಲ್ಲಿ ಕ್ರಾಟ್ ರಾಕ್ ನಂತಹ ಸಂಗೀತ ಕ್ರಾಂತಿಯನ್ನು ಪ್ರಚಾರ ಮಾಡುವಲ್ಲಿ ಹಾಗೂ ಜನಪ್ರಿಯಗೊಳಿಸುವಲ್ಲಿ ಭಾಗಿಯಾಗಿದ್ದವು; ಪ್ರಭಾವಶಾಲಿಯಾದ ಕ್ಯಾನ್ ಇಲ್ಲಿಯೇ 1968ರಲ್ಲಿ ರಚಿತವಾಯಿತು. ರಾತ್ರಿಜೀವನಕ್ಕೆಂದೇ ಹಲವಾರು ಕೇಂದ್ರಗಳು ಇಲ್ಲಿವೆ, ಅವುಗಳ ಪೈಕಿ ಕ್ವಾರ್ಟಿಯರ್ ಲಟಾಂಗ್ (ಝುಲ್ಪಿಕರ್ ಸ್ಟ್ರೇಬ್ ಸುತ್ತಮುತ್ತಲಿನ ವಿದ್ಯಾರ್ಥಿಗಳ ನಿವಾಸಗಳು) ಮತ್ತು ನೈಟ್ ಕ್ಲಬ್-ಭರಿತವಾದ ಫ್ರೀಸೆನ್ ಪ್ಲಾಟ್ಝ್ ಮತ್ತು ರುಡೋಲ್ಫ್ ಪ್ಲಾಟ್ಝ್ ನ ಸುತ್ತಮುತ್ತಲಿನ ಪ್ರದೇಶಗಳು ಪ್ರಮುಖವಾದವು.
ಬೃಹತ್ ವಾರ್ಷಿಕ ಸಾಹಿತ್ಯ ಹಬ್ಬವಾದ Lit.ಕಲೋನ್ ನಲ್ಲಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಲೇಖಕರು ಭಾಗವಹಿಸುತ್ತಾರೆ. ಈ ಹಬ್ಬಕ್ಕೆ ಸಂಬಂಧಿತವಾದ ಪ್ರಮುಖ ಸಾಹಿತ್ಯ ದಿಗ್ಗಜವೆಂದರೆ ಸಾಹಿತ್ಯಕ್ಷೇತ್ರದ ನೊಬೆಲ್ ಪಾರಿತೋಷಕ ಪಡೆದಿರುವ ಲೇಖಕ ಹೀನ್ರಿಚ್ ಬಾಲ್.
ಕಲೋನ್ ಕಾಲ್ಷ್ ಎಂಬ ಹೆಸರಿನ ಬೀರ್ ಗೂ ಸಹ ಪ್ರಸಿದ್ಧವಾಗಿದೆ. ಕಾಲ್ಷ್ ಎಂಬುದು ಒಂದು ಸ್ಥಳೀಯ ಆಡುಭಾಷೆಯ ಹೆಸರೂ ಹೌದು. ಆದ್ದರಿಂದ ಕುಡಿಯಲು ಸಾಧ್ಯವಾಗುವ ಏಕೈಕ ಭಾಷೆಯೆಂದರೆ ಕಾಲ್ಷ್ ಒಂದೇ ಎಂಬ ಹಾಸ್ಯದ ಮಾತೂ ಸಹ ಚಾಲ್ತಿಯಲ್ಲಿದೆ.
ಕಲೋನ್ ಯೂ ಡಿ ಕಲೋನ್ (ಕೋಲ್ನಿಷ್ಕ್ ವಾಸ್ಸರ್ ) ಗೂ ಸಹ ಹೆಸರುವಾಸಿಯಾಗಿದೆ. 18ನೆಯ ಶತಮಾನದ ಆರಂಭದಲ್ಲಿ ಇಟಲಿಯ ಅನಿವಾಸಿ ಜೊಹಾನ್ ಮಾರಿಯಾ ಫರೀನಾ ಒಂದು ಹೊಸ ಸುಗಂಧವನ್ನು ತಯಾರಿಸಿದರು ಮತ್ತು ಅದಕ್ಕೆ ತಮ್ಮ ತಾಯ್ನಾಡಾದ ಕಲೋನ್ ನ ಹೆಸರನ್ನೇ ಇಟ್ಟರು. ಅದೇ ಯೂ ಡಿ ಕಲೋನ್ (ಕಲೋನ್ ನ ಜಲ ). 18ನೆಯ ಶತಮಾನದುದ್ದಕ್ಕೂ ಈ ಸುಗಂಧವು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಾ ಸಾಗಿತು. ಕಾಲಕ್ರಮೇಣ ಕಲೋನ್ ವ್ಯಾಪಾರಿ ವಿಲ್ಹೆಲ್ಮ್ ಮುಲ್ಹೆನ್ಸ್ ಆ ದಿನಗಳಲ್ಲಿ ಯೂ ಡಿ ಕಲೋನ್ ಎಂದಾಕ್ಷಣ ಜನಜನಿತವಾಗಿದ್ದಂತಹ ಫರೀನಾ ಹೆಸರನ್ನು ಕರಾರಿನ ಮೇಲೆ ಪಡೆದರು ಮತ್ತು ಕಲೋನ್ ನ ಗ್ಲಾಕೆಂಗಸ್ಸೆಯಲ್ಲಿ ಒಂದು ಸಣ್ಣ ಕಾರ್ಖಾನೆಯನ್ನು ಆರಂಭಿಸಿದರು. ನಂತರದ ವರ್ಷಗಳಲ್ಲಿ ನ್ಯಾಯಾಲಯದ ಕದನಗಳ ಒತ್ತಡಕ್ಕೆ ಮಣಿದು, ಅವರ ಮೊಮ್ಮಗನಾದ ಫರ್ಡಿನಾಂಡ್ ಮುಲ್ಹೆನ್ಸ್ ತನ್ನ ಸಂಸ್ಥೆ ಮತ್ತು ಉತ್ಪಾದಿತ ವಸ್ತುಗಳೆರಡಕ್ಕೂ ಒಂದು ಹೊಸ ಹೆಸರನ್ನು ಆರಿಸಿಕೊಂಡರು. ಅದು ಫ್ರ್ಯಾನ್ಸ್ ನವರು ರೈನ್ ಲ್ಯಾಂಡ್ ಅನ್ನು 19ನೆಯ ಶತಮಾನದ ಆದಿಯಲ್ಲಿ ಆಕ್ರಮಿಸಿದ್ದಾಗ ಗ್ಲಾಕೆಂಗಸ್ಸೆಯಲ್ಲಿನ ಕಾರ್ಖಾನೆಗೆ ನೀಡಿದಂತಹ ಗೃಹಸಂಖ್ಯೆಯಾದ 4711 ಎಂಬುದಾಗಿತ್ತು. 1994ರಲ್ಲಿ, ಮುಲ್ಹೆನ್ಸ್ ಕುಟುಂಬವು ತಮ್ಮ ಕಂಪನಿಯನ್ನು ಜರ್ಮನಿಯ ವೆಲ್ಲಾ ಕಾರ್ಪೊರೇಷನ್ ಗೆ ಮಾರಿತು. 2003ರಲ್ಲಿ ಪ್ರಾಕ್ಟರ್ & ಗ್ಯಾಂಬಲ್ ವೆಲ್ಲಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಈಗ ಮೂಲ ಯೂ ಡಿ ಕಲೋನ್ ಅನ್ನು ಎರಡೂ ಫರೀನಾ ಕುಟುಂಬಗಳು ಇಂದಿಗೂ ತಯಾರಿಸುತ್ತಿವೆ- (1709ರಿಂದ ಫರೀನಾ ಗೆಗೆಂಬರ್), ಇವರದು ಈಗಿನದು ಎಂಟನೆಯ ತಲೆಮಾರು; ಮತ್ತು ಮಾರೆರ್ ಮತ್ತು ವಿರ್ಟ್ಝ್- ಇವರು 4711 ಬ್ರ್ಯಾಂಡ್ ಅನ್ನು 2006ರಲ್ಲಿ ಖರೀದಿಸಿದರು.
ಮಹೋತ್ಸವ
[ಬದಲಾಯಿಸಿ]ಕಲೋನ್ ಕಾರ್ನಿವಾಲ್(ಮಹೋತ್ಸವ) ಯೂರೋಪ್ ನ ಬೃಹತ್ ಬೀದಿಯ ಉತ್ಸವಗಳಲ್ಲಿ ಒಂದಾಗಿದೆ. ಕಲೋನ್ ನಲ್ಲಿ ಈ ಮಹೋತ್ಸವ ಕಾಲವು ನವೆಂಬರ್ ಹನ್ನೊಂದರ ಬೆಳಗ್ಗೆ ಹನ್ನೊಂದು ಗಂಟೆ, ಹನ್ನೊಂದು ನಿಮಿಷಕ್ಕೆ ನೂತನ ಮಹೋತ್ಸವ ಕಾಲ ಆರಂಭವಾಯಿತೆಂಬ ಘೋಷಣೆಯೊಂದಿವೆ ಆರಂಭವಾಗುತ್ತದೆ ಮತ್ತು ಬೂದಿ ಬುಧವಾರದವರೆಗೆ ಮುಂದುವರೆಯುತ್ತದೆ. ಆದರೆ "ಟೊಲ್ಲೆ ಟಾಗೆ" (ಶ್ರೇಷ್ಠ ದಿನಗಳು) ಎಂದು ಕರೆಸಿಕೊಳ್ಳುವಂತಹವು ವೀಬೆರ್ ಫಾಸ್ಟ್ ನಾಕ್ಟ್ (ಮಹಿಳೆಯರ ಮಹೋತ್ಸವ) ಅಥವಾ, ವಾಡಕೆಯ ಮಾತಿನಂತೆ, ವೀವರ್ಫಾಸ್ಟೆಲೊವೆಂಡ್ (ಬೂದಿಬುಧವಾರಕ್ಕೆ ಮುಂಚಿನ ಗುರುವಾರ)ದ ವರೆಗೂ ಆರಂಭವಾಗುವುದಿಲ್ಲ; ಆ ಗುರುವಾರವೇ ಬೀದಿಯ ಮಹೋತ್ಸವದ ಆರಂಭ. ಲಕ್ಷಾಂತರ ಪ್ರವಾಸಿಗಳು ಈ ಸಮಯದಲ್ಲಿ ಕಲೋನ್ ಗೆ ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ ಬೂದಿಬುಧವಾರದ ಮುಂಚಿನ ಗುರುವಾರದಂದು ಸುಮಾರು ಒಂದು ಮಿಲಿಯನ್ ಜನರು ಬೀದಿಬೀದಿಗಳಲ್ಲಿ ಮಹೋತ್ಸವವನ್ನು ಆಚರಿಸುತ್ತಿರುತ್ತಾರೆ.[೨೩]
ವಸ್ತುಸಂಗ್ರಹಾಲಯಗಳು
[ಬದಲಾಯಿಸಿ]- ಫರೀನಾ ಫ್ರ್ಯಾಗ್ರೆನ್ಸ್ ಮ್ಯೂಸಿಯಂ, ಯೂ ಡಿ ಕಲೋನ್ ರ ಜನ್ಮಸ್ಥಾನ.
- ರೋಮಿಸ್ಕ್-ಜರ್ಮೆನಿಸ್ಕಸ್ ಮ್ಯೂಸಿಯಂ (ಆಂಗ್ಲ: ರೋಮನ್-ಜರ್ಮನಿಕ್ ಮ್ಯೂಸಿಯಂ) ಪುರಾತನ ರೋಮನ್ ಮತ್ತು ಜರ್ಮನಿಕ್ ಸಂಸ್ಕೃತಿ ಬಿಂಬಿಸುವ ವಸ್ತುಗಳನ್ನು ಹೊಂದಿದೆ.
- ವಾಲ್ರಾಫ್-ರಿಷಾರ್ಟ್ಝ್ ಮ್ಯೂಸಿಯಂ13ನೆಯ ಶತಮಾನದಿಂದ 20ಶತಮಾನದ ಆದಿಯವರೆಗಿನ ಯೂರೋಪಿಯನ್ ಪೇಯ್ನ್ ಟಿಂಗ್ (ಚಿತ್ರಕಲೆ)ಗಳನ್ನು ಹೊಂದಿದೆ.
- ಮ್ಯೂಸಿಯಂ ಲ್ಯುಡ್ವಿಗ್ ನವೀನ ಕಲೆಗೆ.
- ಮ್ಯೂಸಿಯಂ ಸ್ಖ್ನಟ್ಜೆನ್ ಮಧ್ಯಕಾಲೀನ ಕಲೆಗೆ.
- ಕೊಲಂಬಾ ಕನ್ಸ್ಟ್ ಮ್ಯೂಸಿಯಂ ಡೆಸ್ಎರ್ಝ್ ಬಿಸ್ಟ್ ಮಸ್ ಕಲೋನ್ (ಆರ್ಕ್ ಬಿಷೋಪ್ರಿಕ್ ಆಫ್ ಕಲೋನ್ ನ ಕಲಾ ಸಂಗ್ರಹಾಲಯ),
ಮಧ್ಯಕಾಲೀನ ಅವಶೇಷಗಳ ಸುತ್ತಲೂ ಕಟ್ಟಿದ ಕಲಾ ಸಂಗ್ರಹಾಲಯ, ಸಂಪೂರ್ಣಗೊಂಡದ್ದು 2007ರಲ್ಲಿ.
- ಎಲ್-ಡಿ-ಹೌಸ್ ಮುಂಚಿನ ಸ್ಥಳೀಯ ಗೆಸ್ಟಪೊ ವಸ್ತುಸಂಗ್ರಹಾಲಯವು ಕಲೋಜ್ಞೆಯಲ್ಲಿನ ನಾಜಿ ಆಡಳಿತಾವಧಿಯ ಮ್ಯೂಸಿಯಮ್ ನ ಆಶ್ರಯತಾಣವಾಗಿದೆ, ಅದರಲ್ಲಿ ವಿಶೇಷವಾಗಿ ರಾಜಕೀಯ ಹಾಗೂ ಅಲ್ಪಸಂಖ್ಯಾತರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ ವಿಧಾನದಬಗ್ಗೆ ಒಂದು ದೃಷ್ಟಿಕೋನವನ್ನು ತೋರಿಸಲಾಗಿದೆ.
- ಜರ್ಮನ್ ಕ್ರೀಡೆ ಮತ್ತು ಒಲಂಪಿಕ್ ವಸ್ತುಸಂಗ್ರಹಾಲಯ, ದರಲ್ಲಿ ಹಿದಿನದಿಂದಿನ ಇಲ್ಲಿಯವರೆಗೂ ಕ್ರೀಡೆಗಳ ಬಗ್ಗೆ ವಿಶೇಷ ಪ್ರದರ್ಶನವನ್ನು ತೋರಿಸಲಾಗಿದೆ
- ಛಾಕಲೇಟ್ ಮ್ಯೂಸಿಯಮ್, ಅಧಿಕೃತವಾಗಿ ಇಮ್ನೋಫ್-ಛೊಕಲೇಡ್ ಮ್ಯೂಸಿಯಮ್ ಎಂದೂ ಕರೆಯುತ್ತಾರೆ.
- ಜಾವಾ ಮ್ಯೂಸಿಯಂ - ಫೋರಂ ಫಾರ್ ಇಂಟರ್ನೆಟ್ ಟೆಕ್ನಾಲಜಿ ಇನ್ ಕಾಂಟೆಂಪೊರರಿ ಆರ್ಟ್ Archived 2010-11-22 ವೇಬ್ಯಾಕ್ ಮೆಷಿನ್ ನಲ್ಲಿ. - ಅಂತರ್ಜಾಲತಾಣಗಳಲ್ಲಿ ದೊರೆಯುವ ಕಲೆಗಳ ಸಂಗ್ರಹ, (ನ್ಯೂಮೀಡಿಯಾ ಆರ್ಟ್ ಪ್ರಾಜೆಕ್ಟ್ ನೆಟ್ ವರ್ಕ್) ನ ಕಾರ್ಪೊರೇಟ್ ಭಾಗ:ಕಲೋನ್ - ಕಲೆ ಮತ್ತು ಹೊಸ ಮಾಧ್ಯಮದ ಪ್ರಯೋಗರಂಗ.
- ಫ್ಲೋರಾ ಉಂಡ್ ಬೊಟಾನಿಷೆರ್ ಗಾರ್ಟೆನ್ ಕೋಲ್ನ್, ನಗರದ ಔಪಚಾರಿಕವಾದ ಉದ್ಯಾನವನ ಮತ್ತು ಪ್ರಮುಖ ಸಸ್ಯವಿಜ್ಞಾನ ತೋಟ
- ಫೋರ್ಸ್ಟ್ ಬೊಟಾನಿಷೆರ್ ಗಾರ್ಟೆನ್ ಕೋಲ್ನ್, an ವೃಕ್ಷವಾಟ ಮತ್ತು ಅರಣ್ಯದ ಸಸ್ಯವಿಜ್ಞಾನ ತೋಟ
ಸಂಗೀತ ಜಾತ್ರೆಗಳು ಮತ್ತು ಹಬ್ಬಗಳು
[ಬದಲಾಯಿಸಿ]ಜಗತ್ಪರಸಿದ್ಧವಾದ ರಿಂಗ್ ಫೆಸ್ಟ್ ಈ ನಗರದಲ್ಲೇ ನಡೆಯುತ್ತಿದದಿತು ಮತ್ತು ಈಗ C/o ಪಾಪ್ ಹಬ್ಬವೂ ಖ್ಯಾತವಾಗಿದೆ.[೨೪]
ಆರ್ಥಿಕ ಸ್ಥಿತಿ
[ಬದಲಾಯಿಸಿ]ರೈನ್-ರರ್ ಮೆಟ್ರೋಪಾಲಿಟನ್ ಪ್ರದೇಶದ ಅತಿ ದೊಡ್ಡ ನಗರವಾದ ಕಲೋನ್ ಬೃಹತ್ ಮಾರುಕಟ್ಟೆಯ ವ್ಯವಸ್ಥೆಯಿಂದ ಲಾಭ ಪಡೆದಿದೆ.[೨೫] ಡಸೆಲ್ಡಾರ್ಫ್ ನೊಡನೆ ಸ್ಥಳದ ವಿಷಯವಾಗಿ ಪೈಪೋಟಿಗಿಳಿದಿರುವ ಈ ಕಲೋನ್ ನಗರದ ಆರ್ಥಿಕತೆಯು ಪ್ರಧಾನವಾಗಿ ವಿಮೆ ಮತ್ತು ಮಾಧ್ಯಮ ಉದ್ಯಮಗಳನ್ನು ಅವಲಂಬಿಸಿದೆ;[೨೬] ಕಲೋನ್ ಒಂದು ಪ್ರಮುಖ ಸಾಂಸ್ಕೃತಿಕ ಮತ್ತು ಸಂಶೋಧನಾ ಕೇಂದ್ರವೂ ಆಗಿದೆ ಹಾಗೂ ಹಲವಾರು ಕಾರ್ಪೊರೇಟ್ ಕೇಂದ್ರಕಚೇರಿಗಳು ಇಲ್ಲಿ ಸ್ಥಾಪಿತವಾಗಿವೆ.
ಕಲೋನ್ ನಲ್ಲಿ ತಳವೂರಿರುವ ಬೃಹತ್ ಕಂಪನಿಗಳ ಪೈಕಿ ವೆಸ್ಟ್ ಡ್ಯೂಟ್ಷೆರ್ ರಂಡ್ ಫಂಕ್, ಡ್ಯೂಟ್ಷ್ ಲ್ಯಾಂಡ್ ರೇಡಿಯೋ, RTL ಟೆಲಿವಿಷನ್ ಮತ್ತು ಉಪವಿಭಾಗಗಳು, ಬ್ರೈನ್ ಪೂಲ್ ಮತ್ತು ಪ್ರಕಾಶನ ಸಂಸ್ಥೆಗಳಾದ J. P. ಬಾಕೆಮ್, ತಾಷ್ಕೆನ್, ಟ್ಯಾಂಡೆಮ್ ವೆರ್ಲಾಗ್ ಮತ್ತು ಎಂ. ಡ್ಯುಮಾಂಟ್ ಸ್ಕಾಸ್ಬೆರ್ಗ್ ಗಳು ಪ್ರಮುಖವಾದವು. ಹಲವು ಮಾಧ್ಯಮದ ಗುಂಪುಗಳು,ಕಲೆ ಮತ್ತು ಸಂವಹನ ಸಂಸ್ಥೆಗಳು, TV ನಿರ್ಮಾಪಕ ಸ್ಟುಡಿಯೋಗಳು, ಮತ್ತು ರಾಜ್ಯದ ಏಜೆನ್ಸಿಗಳು ಭಾಗಶಃ ಖಾಸಗಿ ಮತ್ತು ಸರ್ಕಾರಿ ಹಣಕಾಸು ಹೂಡಿಕೆಯಲ್ಲಿ ಕಾರ್ಯವೆಸಗುವ ಸಾಂಸ್ಕೃತಿಕ ಸಂಸ್ಥೆಗಳು ಇಲ್ಲಿವೆ. ಕಲೋನ್ ನಲ್ಲಿ ತಳವೂರಿರುವ ವಿಮಾ ಸಂಸ್ಥೆಗಳೆಂದರೆ ಸೆಂಟ್ರಲ್, DEVK, DKV, ಜನರಲಿ ಡ್ಯೂಟ್ಷ್ ಲ್ಯಾಂಡ್, ಗಾಟ್ಹಾಯೆರ್, HDI ಜೆರ್ಲಿಂಗ್ ಮತ್ತು AXA ಇನ್ಷುರೆನ್ಸ್ ಹಾಗೂಝುರಿ್ ಫಿನಾನ್ಷಿಯಲ್ ಸರ್ವೀಸಸ್ನ ರಾಷ್ಟ್ರೀಯ ಕೇಂದ್ರಕಚೇರಿಗಳು.
ಜರ್ಮನಿಯ ಪತಾಕೆ ಹಾರಿಸುವ ಲುಫ್ತಾನ್ಸಾ, ಮತ್ತು ಲುಫ್ತಾನ್ಸಾ ಸಿಟಿಲೈನ್ ತಮ್ಮ ಮುಖ್ಯ ಕೇಂದ್ರಕಚೇರಿಗಳನ್ನು ಕಲೋನ್ ನಲ್ಲಿ ಹೊಂದಿವೆ.[೨೭] ಕಲೋನ್ ನ ಅತಿ ಹೆಚ್ಚು ಉದ್ಯೋಗದಾಯಕ ಸಂಸ್ಥೆಯಾದ ಫೋರ್ಡ್ ಯೂರೋಪ್, wತನ್ನ ಯೂರೋಪಿಯನ್ ಕೇಂದ್ರಕಚೇರಿಗಳನ್ನು ಮತ್ತು ಒಂದು ಕಾರ್ಖಾನೆಯಾದ (ಫೋರ್ಡ್-ವೆರ್ಕೆ AG)ಯನ್ನು ನೀಹ್ಲ್ ನಲ್ಲಿ ಹೊಂದಿದೆ.[೨೮] ಟೊಯೋಟಾ ಮೋಟಾರ್ ಸ್ಪೋರ್ಟ್ GmbH (TMG), ಎಂಬ ಟೊಯೋಟಾದ ಅಧಿಕೃತ ಮೋಟಾರ್ ಸ್ಪೋರ್ಟ್ಸ್ ತಂಡವು, ಟೊಯೋಟಾ ರಾಲಿ ಕಾರ್ ಗಳ ಹೊಣೆಹೊತ್ತ ಕಂಪನಿ, ಹಾಗೂ ತದನಂತರ ಫಾರ್ಮಲಾ ಒನ್ ಕಾರ್ ಗಳ ಜವಾಬ್ದಾರಿ ಹೊತ್ತ ಕಂಪನಿಯಾಗಿದ್ದು ಅದರ ಕೇಂದ್ರಕಚೇರಿ ಹಾಗೂ ವರ್ಕ್ ಷಾಪ್ ಗಳನ್ನು ಕಲೋನ್ ನಲ್ಲಿ ಹೊಂದಿದೆ. ಕಲೋನ್ ನಲ್ಲಿ ತಳವೂರಿರುವ ಇತರ ಬೃಹತ್ ಕಂಪನಿಗಳೆಂದರೆ REWE ಗ್ರೂಪ್, TÜV ರೀನ್ ಲ್ಯಾಂಡ್, ಡ್ಯೂಟ್ಝ್ AG ಮತ್ತು ಹಲವಾರುಕಾಲ್ಷ್ ಬ್ರೂಯರಿಗಳು. ಇಲ್ಲಿನ ಮೂರು ಬೃಹತ್ ಬ್ರೂಯರಿಗಳೆಂದರೆ ರೀಸ್ಡಾರ್ಫ್, ಗ್ಯಾಫೆಲ್ ಮತ್ತು ಫ್ರಹ್.
ಬ್ರೂಯರಿ | ಸ್ಥಾಪನೆ | ವಾರ್ಷಿಕ ಉತ್ಪಾದನೆ ಹೆಕ್ಟಾಲೀಟರ್ ಗಳಲ್ಲಿ |
---|---|---|
ಹೀನ್ರಿಚ್ ರೀಸ್ಡಾರ್ಫ್ | 1894 | 650.000 |
ಗಾಫ್ಫೆಲ್ ಬೆಕರ್ & ಕಂ | 1908 | 500.000 |
ಕಲ್ನರ್ ಹಫ್ ಬ್ರೌ ಫ್ರಹ್ | 1904 | 440.000 |
ಐತಿಹಾಸಿಕವಾಗಿ ಕಲೋನ್ ಯಾವಾಗಲೂ ಪ್ರಮುಖ ವಾಣಿಜ್ಯಕೇಂದ್ರವಾಗಿದ್ದು, ಇಲ್ಲಿ ಐದು ರೈನ್ ಬಂದರುಗಳು ಹಾಗೂ ಜರ್ಮನಿಯ ಅತಿ ದೊಡ್ಡ ಹಾಗೂ ಯೂರೋಪ್ ನಲ್ಲೇ ಬೃಹತ್ ಒಳಬಂದರುಗಳಲ್ಲಿ ಒಂದಾದ ಒಳಬಂದರು ಇರುವುದು ವಾಣಿಜ್ಯವೃದ್ಧಿಗೆ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಕಲೋನ್ ಟ್ರೇಡ್ ಫೇರ್ (ಕೋಯೆಲ್ನ್ ಮೆಸ್ಸೆ )ಯೂರೋಪ್ ನ ಪ್ರಮುಖ ವ್ಯಾಪಾರ ಜಾತ್ರೆಯ ಸ್ಥಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿ 50[೨೯] ಕ್ಕೂ ಹೆಚ್ಚು ವ್ಯಾಪಾರ ಜಾತ್ರೆಗಳು ಮತ್ತು ಇತರ ಬೃಹತ್ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ಜರುಗುತ್ತವೆ. ಕಲೋನ್ ನ ಅತಿ ಹೆಚ್ಚು ಪ್ರಸಾರವಿರುವ ದೈನಿಕ ಕೋಲ್ನರ್ ಸ್ಟ್ರ್ಯಾಡ್ಟ್-ಆನ್ಝೀಜರ್.
ಸಾರಿಗೆ
[ಬದಲಾಯಿಸಿ]ರಸ್ತೆ ಸಾರಿಗೆ
[ಬದಲಾಯಿಸಿ]ರಸ್ತೆ ನಿರ್ಮಾಣವು ಮೇಯರ್ ಕೊನ್ರಾಡ್ ಅಡೆನಾಯೆರ್ ರ ಆಳ್ವಿಕೆಯ ಅವಧಿಯಾದ 1920ರಲ್ಲಿ ದಶಕದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದ್ದಿತು. ಮೊದಲ ನಿಯಮಿತ ಜರ್ಮನ್ ಮಾರ್ಗವು 1929ರಲ್ಲಿ ಕಲೋನ್ ಮತ್ತು ಬಾನ್ ಗಳ ನಡುವೆ ನಿರ್ಮಿತವಾಯಿತು. ಅದೇ ಇಂದಿನ ಬುಂಡೆಸೌತೋಬಾಹ್ನ್ 555. 1965ರಲ್ಲಿ ಕಲೋನ್ ಹೆದ್ದಾರಿಗಳಿಂದ ಆವೃತವಾದ ಮೊದಲ ಜರ್ಮನ್ ನಗರವಾಯಿತು. ಸುಮಾರು ಇದೇ ಸಮಯದಲ್ಲಿ ಡೌನ್ ಟೌನ್ ಬೈಪಾಸ್ ಫ್ರೀವೇ (ಹೊರವಲಯದ ಬಳಸು ಮುಕ್ತಮಾರ್ಗ)ಆದ ಸ್ಟ್ಯಾಡ್ಟ್ ಆಟೋಬಾನ್ ಯೋಜನೆ ಹಾಕಿಕೊಳ್ಳಲಾಯಿತು, ಆದರೆ ಪರಿಸರವಾದಿಗಳ ವಿರೋಧಕ್ಕೆ ಮಣಿದು, ಭಾಗಶಃ ಕಾರ್ಯಗತಗೊಳಿಸಲಾಯಿತು. ಹೀಗೆ ಪೂರ್ಣಗೊಂಡ ಭಾಗವು ಬುಂಡೆಸ್ಟ್ರೇಬ್ ("ಫೆಡೆರಲ್ ರಸ್ತೆ") B 55a ಎಂದು ಕರೆಯಲ್ಪಟ್ಟಿತು ಹಾಗೂ ಇದು ಝೂಬ್ರುಕ್ ("ಮೃಗಾಲಯ ಸೇತುವೆ")ನಲ್ಲಿ ಆರಂಭವಾಗಿ A 4 ಮತ್ತು A 3ಗಳನ್ನು ಕಲೋನ್ ಪೂರ್ವ ಇಂಟರ್ಚೇಂಜ್ ನಲ್ಲಿ ಸಂಧಿಸುತ್ತದೆ. ಆದರೂ ಇದನ್ನು ಬಹುತೇಕ ಸ್ಥಳೀಯರುಸ್ಟ್ಯಾಡ್ಟ್ ಆಟೋಬಾಹ್ನ್ ಎಂದೇ ಕರೆಯುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಎಲ್ಲಾ ವಿಧದಲ್ಲೂ ಸಂಪೂರ್ಣಗೊಂಡದ್ದು ನಾರ್ಡ್-ಸುಡ್-ಫಾಹೃಟ್ ("ಉತ್ತರ-ದಕ್ಷಿಣ-ರಸ್ತೆ"); ಇದು ಒಂದು ನೂತನ ನಾಲ್ಕು/ಆರು ರಸ್ತೆಗಳಿರುವ ಡೌನ್ ಟೌನ್ ಮಾರ್ಗವಾಗಿದ್ದು ಫ್ರಿಟ್ಝ್ ಸ್ಕೂಮ್ಯಾಕರ್ ನಂತಹ ಯೋಜನಾಕಾರರು ಈ ವಿಧಿವಿಧಾನಗಳನ್ನು 1920ರ ದಶಕದಲ್ಲಿಯೇ ಮುಂದೆ ಬರುವುದಾಗಿ ನಿರೀಕ್ಷಿಸಿದ್ದರು. ಎಬೆರ್ಟ್ ಪ್ಲಾಟ್ಝ್ ನ ದಕ್ಷಿಣದಲ್ಲಿರುವ ಈ ಮಾರ್ಗದ ಕಡೆಯ ಭಾಗವನ್ನು 1972ರಲ್ಲಿ ಸಂಪೂರ್ಣಗೊಳಿಸಲಾಯಿತು.
2005ರಲ್ಲಿ, ಎಂಟು-ರಸ್ತೆಗಳನ್ನೊಳಗೊಂಡ ಉತ್ತರ ರೈನ್-ಪಶ್ಚಿಮಫಾಲಿಯಾಹೆದ್ದಾರಿಯ ಮೊದಲ ಭಾಗವನ್ನು ಬುಂಡೆಸ್ಟಾಟೋಬಾಹ್ನ್ 3 ಎಂಬ, ಕಲೋನ್ ಬೆಲ್ಟ್ ವೇಯ ಪೂರ್ವಭಾಗದ ಇಂಟರ್ಚೆಂಜ್ ಕಲೋನ್ ಪೂರ್ವ ಮತ್ತು ಹ್ಯೂಮಾರ್ ಗಳ ನಡುವಿನ ಭಾಗದಲ್ಲಿ ವಾಹನಸಂಚಾರಕ್ಕೆಂದು ಅನುವು ಮಾಡಿಕೊಡಲಾಯಿತು.
ಸೈಕ್ಲಿಂಗ್
[ಬದಲಾಯಿಸಿ]ಬಹುತೇಕ ಜರ್ಮನ್ ನಗರಗಳಂತೆಯೇ, ಕಲೋನ್ ನ ವಾಹನಸಂಚಾರ ವಿನ್ಯಾಸವು ಬೈಸಿಕಲ್-ಸ್ನೇಹಿಯಾಗಿದೆ. ಇಲ್ಲಿ ಒಂದು ವಿಸ್ತೃತವಾದ ಸೈಕಲ್ ವ್ಯೂಹರಚನೆಯಿದ್ದು, ರಸ್ತೆಯ ತುದಿಯ ಸೈಕಲ್ ಹಾದಿಗಳು ಸೈಕಲ್ ಗೆ ಮಹತ್ವವೀವ ರಸ್ತೆಕೂಟಗಳಿಗೆ ತಳುಕುಹಾಕಲ್ಪಟ್ಟಿವೆ. ನಗರ ಕೇಂದ್ರದಲ್ಲಿರುವ ಕೆಲವು ಕಿರಿದಾದ ಏಕ-ಮುಖ ರಸ್ತೆಗಳಲ್ಲಿ ಸೈಕ್ಲಿಸ್ಟ್ ಗಳು ಎರಡೂ ಕಡೆಗಳಿಂದ ಸೈಕಲ್ ಪ್ರಯಾಣ ಮಾಡಲು ವಿಶೇಷವಾದ ಅನುಮತಿ ನೀಡಲಾಗಿದೆ.
ರೇಲ್ವೇ ಸಾರಿಗೆ
[ಬದಲಾಯಿಸಿ]ಕಲೋನ್ ರೈಲ್ವೇ ಸೇವೆಗಳು ಡ್ಯೂಟ್ಷೆ ಬಾನ್ ಇಂಟರ್ಸಿಟಿ ಮತ್ತು ICE-ಟ್ರೈನ್ ಗಳೊಡನೆ ಇದ್ದು ಕೋಲ್ನ್ ಹಾಫ್ಟ್ ಬಾನ್ಹಾಫ್ (ಕಲೋನ್ ಕೇಂದ್ರ ನಿಲ್ದಾಣ), ಕೋಲ್ನ್ ಮೆಸ್ಸೆ/ಡ್ಯೂಟ್ಷ್ ಮತ್ತು ಕಲೋನ್/ಬಾನ್ ವಿಮಾನನಿಲ್ದಾಣ ಗಳಲ್ಲಿ ನಿಲುಗಡೆಗಳಿವೆ. ICE ಮತ್ತು ಥಾಲಿಸ್ ತೀವ್ರವೇಗದ ರೈಲುಗಳು ಕಲೋನ್ ಅನ್ನು ಆಂಸ್ಟರ್ಡ್ಯಾಂ, ಬ್ರುಸೆಲ್ಸ್ (1ಗಂಟೆ47ನಿಮಿಷಗಳಲ್ಲಿ, 6 ನಿರ್ಗಮನಗಳು/ಪ್ರತಿದಿನ) ಮತ್ತು ಪ್ಯಾರಿಸ್( 3ಗಂಟೆ14ನಿಮಿಷಗಳಲ್ಲಿ, 6 ನಿರ್ಗಮನಗಳು/ದಿನಕ್ಕೆ) ಗೆ ತಳುಕುಹಾಕಿವೆ. ಫ್ರಾಂಕ್ ಫರ್ಟ್ ಆಮ್ ಮೇಯ್ನ್ ಮತ್ತು ಬರ್ಲಿನ್ ಸೇರಿದಂತೆ ಇತರ ಜರ್ಮನ್ ನಗರಗಳಿಗೂ ICE ರೈಲುಗಳ ಸೇವೆ ಲಭ್ಯವಿದೆ.
ಕೋಲ್ನರ್ ವೆರ್ಕೆಹೃಸ್ಬೆರ್ಟ್ರೀನ್ (KVB)[೩೦] ಆಧಿಪತ್ಯದ 0}ಕಲೋನ್ ಸಿಟಿ ರೈಲ್ವೆಯು ಒಂದು ವಿಸ್ತೃತ (3}ಹಗುರ ರೈಲು ವ್ಯವಸ್ಥೆಯಾಗಿದ್ದು ಇದು ಭಾಗಶಃ ಭೂಮಿಯ ಕೆಳಭಾಗದಲ್ಲಿದೆ (ಇದನ್ನುU-ಬಾನ್ಎಂದು ಕರೆಯುತ್ತಾರೆ) ಮತ್ತು ಕಲೋನ್ ಹಾಗೂ ಅಕ್ಕಪಕ್ಕದ ಹಲವಾರು ನಗರಗಳಿಗೆ ಸೇವೆ ಸಲ್ಲಿಸುತ್ತದೆ. ಹತ್ತಿರದ ಬಾನ್ ನಗರ ರೈಲ್ವೇ ಮತ್ತು ಡ್ಯೂಟ್ಷ್ ಬಾನ್ ರೈಲುಗಳೆರಡರಿಂದಲೂ ಸಂಪರ್ಕಿಸಬಹುದಾಗಿದೆ ಮತ್ತು ಆಗಾಗ್ಗೆ ಮೋಜಿಗಾಗಿ ರೈನ್ ಮೇಲಿನ ದೋಣಿಪ್ರಯಾಣದಿಂದಲೂ ತಲುಪಬಹುದಾಗಿದೆ. ಡ್ಯುಸೆಲ್ಡಾರ್ಫ್ ಗೂ ಸಹ S-ಬಾನ್ ರೂಲುಗಳಲ್ಲಿ ಹೋಗಬಹುದು; ಇದನ್ನು ನಡೆಸುತ್ತಿರುವವರು ಡ್ಯೂಟ್ಷೆ ಬಾನ್.
ನಗರ ಮತ್ತು ಸುತ್ತಮುತ್ತಲಿನ ಜಾಗಗಳಿಗೆ ಸಾಕಷ್ಟು ಬಸ್ ಗಳ ಸೌಕರ್ಯವೂ ಇದೆ ಹಾಗೂ ಯೂರೋಲೈನ್ಸ್ ಕೋಚ್(ಬಂಡಿ)ಗಳಲ್ಲಿ ಬ್ರುಸೆಲ್ಸ್ ಮೂಲಕ ಲಂಡನ್ ಅನ್ನೂ ತಲುಪಬಹುದಾಗಿದೆ.
ಜಲ ಸಾರಿಗೆ
[ಬದಲಾಯಿಸಿ]ಹಾಫೆನ್ ಉಂಡ್ ಗುಟೆರ್ವೆರ್ಕೆಹರ್ ಕೋಲ್ನ್ (ಕಲೋನ್ ಬಂದರುಗಳು ಮತ್ತು ರೈಲುಮಾರ್ಗಗಳು) (HGK) ಒಳಭೂವಲಯ ಬಂದರುಗಳನ್ನು ನಡೆಸುವಂತಹ ಜರ್ಮನಿಯ ಬೃಹತ್ ಸಂಸ್ಥೆಗಳಲ್ಲಿ ಒಂದಾಗಿದೆ.[೩೧] ಇಲ್ಲಿನ ಬಂದರುಗಳಲ್ಲಿ ಕೆಲವೆಂದರೆ ಕೋಲ್ನ್-ಡ್ಯೂಟ್ಝ್, ಕೋಲ್ನ್-ಗೊಡೋರ್ಫ್ ಮತ್ತು ಕೋಲ್ನ್-ನೀಹ್ಲ್ I ಮತ್ತು II. ಕೋಲ್ನ್-ಡ್ಯುಸೆಲ್ಡಾರ್ಫರ್ ಇಡೀ ರೈನ್ ನದಿಯ ಉದ್ದಕ್ಕೂ ರೈನ್ ನದಿ ಪ್ರವಾಸಕ್ಕೆ ಅನುಕೂಲಕರವಾದುದಾಗಿದೆ.
ವಾಯು ಸಾರಿಗೆ
[ಬದಲಾಯಿಸಿ]ಕಲೋನ್ ನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹೆಸರು ಕಲೋನ್/ಬಾನ್ ವಿಮಾನನಿಲ್ದಾಣ (CGN). ಇದನ್ನು ಕೊನಾರ್ಡ್ ಅಡೆನ್ಯುಯರ್ ವಿಮಾನ ನಿಲ್ದಾಣವೆಂದೂ ಕರೆಯುತ್ತಾರೆ, ಜರ್ನನಿಯ ಯುದ್ಧಾನಂತರದ ಮೊತ್ತಮೊದಲ ಛಾನ್ಸೆಲ್ಲೆರ್ ಆದ ಕೋನಾರ್ಡ್ ಅಡೆನ್ಯೂರ್ ಅವರ ಜ್ಞಾಪಕಾರ್ಥಕವಾಗಿ, ಅವರು ಈ ನಗರದಲ್ಲೇ ಜನಿಸಿದ್ದರು ಹಾಗೂ ಕಲೋಜ್ಞೆ ನಗರದ ಮೇಯರ್ ಆಗಿದ್ದರು 1917 ರಿಂದ 1933 ರರವರೆಗೆ. ಈ ವಿಮಾನ ನಿಲ್ದಾಣವನ್ನು ಪಕ್ಕದ ನಗರವಾದ ಬಾನ್ ನಗರದ ಸಹಯೋಗದಿಂದ ನಡೆಸಲಾಗುತ್ತದೆ. ಕಲೋಜ್ಞೆ ನಗರವು ಯುರೋಪಿನ್ ವಾಯುಯಾನ ಸುರಕ್ಷಾ ಎಜೆನ್ಸಿ (EASA)ಯ ಕೇಂದ್ರಕಾರ್ಯಸ್ಥಾನವಾಗಿದೆ.
ಶಿಕ್ಷಣ
[ಬದಲಾಯಿಸಿ]ಕಲೋನ್ ನಗರವು ಅನೇಕ ವಿಶ್ವವಿದ್ಯಾಲಯಗಲೂ ಹಾಗೂ ಕಾಲೇಜುಗಳ ನೆಲೆವೀಡಾಗಿದೆ.[೩೨][೩೩] ಅದರ ಅತ್ಯಂತ ಹಳೆಯ ವಿಶ್ವವಿದ್ಯಾಲಯ, ಕಲೋನ್ ವಿಶ್ವವಿದ್ಯಾಲಯ (ಮೂಲತಃ 1388 ರಲ್ಲಿ ಸ್ಥಾಪಿಸಲ್ಪಟ1್ಟಿದ್ದು), ಜರ್ಮನಿಯಲ್ಲೇ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ,ದಿ ಕಲೋನ್ ಪ್ರಾಯೋಗಾತ್ಮಕ ವಿಜ್ಞಾನದ ವಿಶ್ವವಿದ್ಯಾಲಯ ಅತಿ ಮದೊಡ್ಡ ಪ್ರಾಯೋಗಾತ್ಮಕ ವಿಜ್ಞಾನದ ವಿಶ್ವವಿದ್ಯಾಲಯವಾಗಿದೆ ಸಂಗೀತ ಹಾಗೂ ನೃತ್ಯಕ್ಕೆಂದು ಇರುವ ದಿ ಕೊಲೋಜ್ಞೆ ವಿಶ್ವವಿದ್ಯಾಠಲಯ ಇ[೩೪] ಡೀ ಯುರೋಪ್ ಖಂಡದಲ್ಲೇ ಅತಿದೊಡ್ಡ ಕಾಂನ್ಸರ್ವೇಟರಿ ಎಂದು ಹೆಸರು ಮಾಡಿದೆ.[೩೪]
ಹೊಂದಿಸಿ=ಮೇಲಕ್ಕೆ |
|
ಹೊಂದಿಸಿ=ಮೇಲಕ್ಕೆ | ಹಿಂದಿನ ಕಾಲೇಜುಗಳ ಪೈಕಿ ಇವುಗಳಿವೆ:
ಮ್ಯಾಕ್ಸ್ ಪ್ಲ್ಯಾಂಕ್ ಇಂಸ್ಟಿಟ್ಯೂಟ್ ಫಾರ್ ನ್ಯೂರಲಾಜಿಕಲ್ ರಿಸರ್ಚ್ ಮ್ಯಾಕ್ಸ್-ಪ್ಲ್ಯಾಂಕ್-ಇಂಸ್ಟಿಟುಟ್ ಫರ್ ನ್ಯೂರಲಾಜಿಸ್ಕೆ ಫಾರ್ಸ್ಕಂಗ್ );
ಮ್ಯಾಕ್ಸ್-ಪ್ಲ್ಯಾಂಕ್-ಇಂಸ್ಟಿಟುಟ್ ಫರ್ ಝುಕ್ಟಂಗ್ಸ್ ಫಾರ್ಸ್ಕಂಗ್ |
ಕ್ರೀಡೆ
[ಬದಲಾಯಿಸಿ]2006ರ FIFA ವಿಶ್ವಕಪ್ ಪಂದ್ಯ ನಡೆದ ಕ್ರೀಡಾಂಗಣ, ರೀನ್ ಎನರ್ಜಿ ಸ್ಟೇಡಿಯನ್, ನಗರದ ಫುಟ್ಬಾಲ್ ತಂಡವಾದ "1. FC ಕೋಲ್ನ್" ಎಂಬ, ಬುಂಡೆಸ್ಲಿಗಾದೊಡನೆ ಸೆಣಸುವ ತಂಡಕ್ಕೆ ಅತಿಥೇಯವಾಗಿದೆ. 2004ರಿಂದ 2007ರವರೆಗೆ ಇದು ಅಮೆರಿಕನ್ ಫುಟ್ಬಾಲ್ ಕಲೋನ್ ಸೆಂಚುರಿಯನ್ಸ್ ರಿಗೆ ಅತಿಥೇಯವಾಗಿದ್ದಿತು; ಅದು ಈಗ ರದ್ದತಿಯಾಗಿರುವ NFL ಯೂರೋಪಾದಲ್ಲಿ 2007ರಲ್ಲಿ ಭಾಗವಹಿಸಿತ್ತು.
ಈ ನಗರವು ಐಸ್ ಹಾಕಿ ತಂಡವಾದ ಕೋಲ್ನರ್ ಹೈಯೆ (ಕಲೋನ್ ಷಾರ್ಕ್ಸ್) ಗಳ ವಾಸಸ್ಥಾನವಾಗಿದೆ; ಈ ತಂಡವು ಜರ್ಮನಿಯ ಅತ್ಯುಚ್ಛವಾದ ಹಾಕಿ ಲೀಗ್ ಆದDELನಲ್ಲಿ ತನ್ನ ಹೆಸರನ್ನು ಛಾಪಿಸಿದೆ. ಈ ತಂಡವು ಬೇರೂರಿರುವುದುಲಾಂಕ್ಸೆಸ್ ಅರೀನಾದಲ್ಲಿ.
1897ರಿಂದ ಪ್ರತಿವರ್ಷವೂ ಕಲೋನ್-ವೀಡೆನ್ ಪೆಷ್ಕ್ ರೇಸ್ ಕೋರ್ಸ್ನಲ್ಲಿ ಹಲವಾರು ಕುದುರೆ ರೇಸ್ ಗಳನ್ನು ಏರ್ಪಡಿಸಲಾಗುತ್ತಿದೆ; ವಾರ್ಷಿಕ ಕಲೋನ್ ಮ್ಯಾರಥಾನ್ 1997ರಲ್ಲಿ ಪ್ರಾರಂಭಿಸಲ್ಪಟ್ಟಿತು.. 2002ರಿಂದ 2009ರವರೆಗೆ ಪ್ಯಾನೋಸಾನಿಕ್ ಟೊಯೋಟಾ ರೇಸಿಂಗ್ ಫಾರ್ಮಲಾ ಒನ್ ತಂಡವು ಮಾರ್ಸ್ ಡಾರ್ಫ್ ಹೊರವಲಯದ ಟೊಯೋಟಾ ಮೋಟಾರ್ ಸ್ಪೋರ್ಟ್ GmbH ಸೌಲಭ್ಯ ತಾಣದಲ್ಲಿ ತಳವೂರಿತ್ತು.
ಅವಳಿ ಪಟ್ಟಣಗಳು — ಸಹ ನಗರಗಳು
[ಬದಲಾಯಿಸಿ]ಕಲೋನ್ ನಗರವನ್ನು ಈ ಕೆಳಗಿನ ನಗರಗಳ ಜೋತೆ ಅವಳಿ ನಗರವನ್ನಾಗಿ ಸೇರಿಸಲಾಗಿದೆ[೩೫]
ಹೊಂದಿಸಿ="ಮೇಲೆ" |
|
|
|
ಕಲೋನ್ ನಗರದಲ್ಲಿ ಜನಿಸಿದವರು
[ಬದಲಾಯಿಸಿ]ಅನೇಕ ಪ್ರಸಿದ್ಧ ವ್ಯಕ್ತಿಗಳು, ಅವರ ಬೇರುಗಳು ಕೊಲೋಜ್ಞೆ ನಗರದಲ್ಲಿ ಆಳವಾಗಿ ಬಿಟ್ಟುಕೊಂಡಿವೆ.
- ಅಡೆನ್ಯೂಯರ್ ಕೊನಾರ್ಡ್ (5 ಜನವರಿ 1876 - 19 ಏಪ್ರಿಲ್ 1967), ರಾಜನೀತಿಜ್ಞ, ಕೊಲೋನ್ ಮಹಾನಗರಾಧ್ಯಕ್ಷ(1917–1933, 1945) ಹಾಗೂ ಪಶ್ಚಿಮ ಜರ್ಮನಿ ಸಂಯುಕ್ತ ಸ್ವತಂತ್ರ ರಾಜ್ಯಗಳ ಮೊದಲ ಪ್ರಧಾನಾಧಿಕಾರಿ
- ಅಗ್ರಿಪ್ಪ ಹೀನ್ರಿಚ್ ಕಾರ್ನೆಲಿಯಸ್ (1486–1535), ರಸ ಸಿದ್ಧಾಂತಿ, ನಿಗೂಢ ಶಾಸ್ತ್ರಜ್ಞ, ಹಾಗೂ ರಹಸ್ಯ ತತ್ವಗಳ ಮೂರು ಪುಸ್ತಕಗಳ ಲೇಖಕ
- ರಿಯ ಅಗ್ರಿಪ್ಪನ (6 ನವೆಂಬರ್ 15 - 19 ನೇ ಮಾರ್ಚ್ ಮತ್ತು 23 ಮಾರ್ಚ್ 59 ರ ನಡುವೆ), ರೋಮನ್ ಮಹಾರಾಣೀ(ಚಕ್ರವರ್ತಿ ಕ್ಲಾಡಿಯುಸ್ ನ ಪತ್ನಿ) ಹಾಗೂ ನೀರೋ ಮಹಾರಾಜನ ತಾಯಿ}
- ಬಿರ್ನೆಬೌಮ್ ಹೆಯಿನ್ರಿಚ್ (1403–1473) ಒಬ್ಬಕ್ಯಾಥೋಲಿಕ್ ಸನ್ಯಾಸಿನಿ
- ಬ್ಲುಮ್ ರಾಬರ್ಟ್ (10 ನವೆಂಬರ್ 1807 - 9 ನವೆಂಬರ್ 1848),ರಾಜಕೀಯ ಚತುರ ಹಾಗೂ ಜರ್ಮನಿಯಲ್ಲಿ 19 ನೇ ಶತಮಾನದ ಗಣರಾಜ್ಯ ಚಳುವಳಿಯ ಹುತಾತ್ಮ.
- ಹೋಲ್ಲ್ ಹೆಯಿನ್ರಿಚ್ (21 ಡಿಸೆಂಬರ್ 1917 - 16 ಜುಲೈ 1985),1972 ರಲ್ಲಿ ಸಾಹಿತ್ಯಕ್ಕೆ ನೋಬೆಲ್ ಪಾರಿತೋಷಕದ ವಿಜಯಶಾಲಿ ಹಾಗೂ ಲೇಖಕ.
- ಬ್ರುಕ್ ಮ್ಯಾಕ್ಸ್ (6 ಜನೆವರಿ 1838 - 2 ಅಕ್ಟೋಬರ್ 1920) ಸಂಗೀತ ಸಂಯೋಜಕ
- ಕಲತ್ರವ ಅಲೆಕ್ಸ್ (ಜನನ 14 ಜೂನ್ 1973), ಸ್ಫಾನಿಶ್ ವೃತ್ತಿಪರ ಟೆನ್ನಿಸ್ ಆಟಗಾರ
- ಡೊನ್ನೆರ್ಸ್ಮಾರಕ್, ಫ್ಲೋರಿಯನ್ ಹೆನ್ಕೆಲ್ ವಾನ್ (ಜನನ 2 ಮೇ 1973), ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ಚಿತ್ರಕಥಾ ರಚನಕಾರ.
- ಅರ್ನೆಸ್ಟ್ ಮ್ಯಾಕ್ಸ್ (2ಏಪ್ರಿಲ್ l 1891 - 1 ಏಪ್ರಿಲ್ 1976), ಕಲಾಕಾರ
- ಗೊಸೋವ್, ಏಂಜೆಲಾ (5 ನವೆಂಬರ್ 1974) ಸ್ವೀಡಿಶ್ ಮೆಲಾಡಿಕ್ ಡೆತ್ ಮೆಟಲ್ ಬ್ಯಾಂಡ್ ಆದ ಆರ್ಚ್ ಎನೆಮಿ ತಂಡದ ಪ್ರಮುಖ ಹಾಡುಗಾರ್ತಿ
- ಹೈಡೆಮ್ಯಾನ್, ಬ್ರಿಟ್ಟೆ (ಜನನ 22 ದೆಸೆಂಬರ್ 1982), ಎಪೀ ಕತ್ತಿವರಸೆಗಾರ ಹಾಗೂಒಲಂಪಿಕ್ ಪದಕ ವಿಜೇತ
- ಹೆರ್ರ್, ಟ್ರುಡೆ (4 Mಮೇ 1927 - 16 ಮಾರ್ಚ್ 1991), ನಟಿ ಹಾಗೂ ಹಾಡುಗಾರ್ತಿ
- ಕೀಯರ್, ಯುಡೊ (ಜನನ 14 ಅಕ್ಟೋಬರ್ 1944), ನಟ
- ಜುಟ್ಟ ಕ್ರೈನಸ್ಕ್ಮಿಡ್ತ್ (ಜನನ ಆಗಸ್ಟ್ 29, 1962), ಆಫ್ರೋಡ್ ಸ್ವಯಂಚಾಲಿತ ಕಾರು ಓಡಿಸುವ ಸ್ಫರ್ಧಾಳು
- ಕ್ಲೆಂಪೆರೆರ್, ವೆರ್ನರ್ (22 ಮಾರ್ಚ್ 1920 - 6 ಡಿಸೆಂಬರ್ 2000), ಎಮ್ಮಿ ಪ್ರಶಸ್ತಿ ಗೆದ್ದ ಪ್ರಖ್ಯಾತ ಹಾಸ್ಯ ನಟ
- ಕ್ರೆಕೆಲ್, ಹಿಲ್ಡೆಗಾರ್ಡ್ (ಜನನ 2 ಜೂನ್ 1952), ನಟಿ
- ಕ್ರೆಕೆಲ್, ಲೋಟ್ಟಿ (ಜನನ 23 ಆಗಸ್ಟ್ 1941), ನಟಿ ಹಾಗೂ ಹಾಡುಗಾರ್ತಿ
- ಕ್ರುಪ್ಪ್, ಯುವೆ (ಜನನ 24 ಜೂನ್ 1965), ವೃತ್ತಿಪರ(iೈಸ್) ಹಾಕಿ ಆಟಗಾರ್ತಿ
- ಕುನ್ಹ, ಹೈಂಜ್ (18 ಫೆಬ್ರವರಿ 1912 - 12 ಮಾರ್ಚ್ 1992), ಮಂತ್ರಿ-ಅಧ್ಯಕ್ಷ of ಉತ್ತರ ರೈನ್-ಪಶ್ಚಿಮಫಾಲಿಯಾ (1966–1978)
- ಲೌಟೆರ್ ಬಕ್, ಹೈನರ್ (ಜನನ 10 ಏಪ್ರಿಲ್ 1953), ನಟ
- ಲೈಬರ್ಟ್, ಒಟ್ಟಮರ್ (ಜನನ 1 ಫೆಬ್ರುವರಿ 1961), ಸಂಗೀತಗಾರ್ತಿ
- ಮಿಲ್ಲೊವಿಟ್ಷ, ಮೇರಿಲೊಸಿ (ಜನನ 23 ನವೆಂಬರ್ 1955), ಅಭಿನೇತ್ರಿ
- ಮಿಲ್ಲೊಂವಿಟ್ಷ್, ಪೀಟರ್ (ಜನನ 1 ಫೆಬ್ರುವರಿ 1949), ನಟ, ನಾಟಕ ರಚನಾಕಾರ ಹಾಗೂ ನಾಟಕರಂಗ ನಿರ್ದೇಶಕ
- ಮಿಲ್ಲೊಂವಿಟ್ಷ್, ವಿಲ್ಲಿ (8 ಜನೆವರಿ 1909 - 20 ಸೆಪ್ಟೆಂಬರ್ 1999), ನಟ, ನಾಟಕ ಕರ್ತೃ ಹಾಗೂ ರಂಗಭೂಮಿ ನಿರ್ದೇಶಕ.
- ನೈಡೆಕೆನ್, ವುಲ್ಫ್ ಯಾಂಗ್ (ಜನನ 30 ಮಾರ್ಚ್ 1951), ಹಾಡುಗಾರ, ಸಂಗೀತ ಸಂಯೋಜಕ, ಕಲೆಗಾರ ಹಾಗೂ BAP ತಂಡದ ಮುಖಂಡ ವಾದ್ಯಗಾರ.
- ನೈಹಾಫ್, ಥಿಯೊಡೊರ್ ವೊನ್ (25 ಆಗಸ್ಟ್ 1694 - 11 ಡಿಸೆಂಬರ್ 1756), ಸಂಕ್ಷಿಪ್ತವಾಗಿ ಕೊರ್ಸಿಕೊದ ರಾಜ ಥಿಯೊಡೊರ್
- ಆಫೆನ್ಬ್ಯಾಕ್, ಜಾಕ್ವೆಸ್ (20 ಜೂನ್ 1819 - 5 ಅಕ್ಟೊಬರ್ 1880), ಸಂಗೀತ ಸಂಯೋಜಕ
- ಓಸ್ಟಮ್ಯಾನ್, ವಿಲ್ ಹೆಲ್ಮ್ (1 ಅಕ್ಟೊಬರ್ 1876 - 6 ಆಗುಸ್ಟ್ 1936) ಸಂಗೀತ ರಚನಾಕಾರ
- ಪೆಟ್ರಾಸ್, ಇಕಿಮ್ (ಜನನ 27 ಆಗುಸ್ಟ್ 1992), ಹಾಡುಗಾರ್ತಿ8
- ಪ್ರೌಸ್ನಿಟ್ಜ್, ಫ್ರೆಡ್ರಿಕ್ ವಿಲಿಯಮ್ (26 ಆಗಸ್ಟ್ 1920 - 12 ನವೆಂಬರ್ 2004), ಅಮೇರಿಕಾದ ಸಂಗೀತ ನಿರ್ವಾಹಕ ಹಾಗೂ ಅಧ್ಯಾಪಕ
- ಪಫ್ಫ್ಜೆನ್, ಕ್ರಿಸ್ಟಾ ಉರುಫ್ ನಿಕೊ (16 ಅಕ್ಟೊಬರ್ 1938 - 18 ಜುಲೈ 1988), ರೂಪದರ್ಶಿ, ಅಭಿನೇತ್ರಿ, ಹಾಡುಗಾರ್ತಿ ಮತ್ತು ಹಾಡುರಚನಾಗಾರ್ತಿ (ಸಹ ನೋಡಿರಿ ವೆಲ್ವೆಟ್ ಅಂಡರ್ಗ್ರೌಂಡ್) ಹಾಗೂ ವಾರ್ ಹೋಲ್ ಪ್ರಖ್ಯಾತ ನಟಿ
- ರುಟ್ಜರ್ಸ್, ಜುರ್ಜೆನ್ (ಜನನ 26 ಜೂನ್ 1951), ಮಂತ್ರಿ-ಅಧ್ಯಕ್ಷ ುತ್ತರ ರೈನ್-ವೆಸ್ಟ್ಫಾಲಿಯಾ 2005-2010
- ಸ್ಟೌಕ್ ಹೌಸೆನ್, ಮಾರ್ಕಸ್ (ಜನನ 2 ಮೇ 1957), ಸಂಗೀತಗಾರ ಹಾಗೂ ನಿರ್ವಾಹಕ
- ಟ್ರಿಪ್ಸ್, ವಿಲ್ಫ್ಗಯಾಂಗ್ ಗ್ರಾಫ್ ಬೆರ್ಘೆ ವೊಂನ್, ಫಾರ್ಮುಲಾ ಒನ್ ಕಾರು ಚಲನಾ ರೇಸಿಂಗ್ ಚಾಂಪಿಯನ್
- ವೊಂಡೆಲ್, ಜೂಸ್ಟ್ ವಾನ್ ಡೆನ್ (17 ನವೆಂಬರ್ 1587 - 5 ಫೆಬ್ರುವರಿ 1679), ಡಚ್ ಕವಿ ಹಾಗೂ ನಾಟಕ ರಚನಾಕಾರ
- ವೈಮಾರ್, ರಾಬರ್ಟ್ (ಜನನ 13 ಮೇ 1932), ಕಾನೂನು ಶಾಸ್ತ್ರಜ್ಞ ಹಾಗೂ ಮಾನಸಿಕ ರೋಗಗಳ ತಜ್ಞ
ಇದನ್ನು ನೋಡಿ
[ಬದಲಾಯಿಸಿ]- ಸ್ಟಾಡ್ವರ್ಕೆ ಕೋಲ್ನ್, ಪುರಸಭಾ ನಾಗರೀಕ ಮೂಲಭೂತ ಸೌಲಭ್ಯಗಳ ಕಂಪನಿ, ರೈಲ್ವೆ, ಬಂದರು, ಇತರೆ ನಾಗರೀಕ ಸೌಲಭ್ಯಗಳನ್ನು ಕಾರ್ಯಗತಗೊಳಿಸುವ ಕಂಪನಿ.
ಉಲ್ಲೇಖಗಳು
[ಬದಲಾಯಿಸಿ]- ↑ "Amtliche Bevölkerungszahlen". Landesbetrieb Information und Technik NRW (in German). 31 July 2013.
{{cite web}}
: CS1 maint: unrecognized language (link) - ↑ "Cologne Comedy Festival website". Koeln-comedy.de. 2007-10-21. Archived from the original on 2011-07-19. Retrieved 2009-07-24.
- ↑ Information und Technik NRW;. "Bevölkerung im Regierungsbezirk Köln". Archived from the original on 2016-05-31. Retrieved 2010-09-29.
{{cite web}}
: CS1 maint: extra punctuation (link) CS1 maint: multiple names: authors list (link) - ↑ "2007 - Einwohnerdaten im Überblick - Zahlen + Statistik - Bevölkerung - Stadt Köln". Web.archive.org. 2008-01-28. Archived from the original on 2008-01-28. Retrieved 2009-07-24.
- ↑ "WDR Article of 15.08.2007". Wdr.de. Retrieved 2009-07-24.
- ↑ "City of Cologne -> Figures Statistics Population (german)". Web.archive.org. 2008-02-08. Archived from the original on 2008-02-08. Retrieved 2009-07-24.
- ↑ "Weather Information for Cologne".
- ↑ ೮.೦ ೮.೧ ೮.೨ "Flood Forecasting and Flood Defence in Cologne" (PDF). Mitigation of Climate Induced Natural Hazards (MITCH). Archived from the original (PDF) on 2009-03-24. Retrieved 2009-03-20.
{{cite web}}
: Unknown parameter|coauthors=
ignored (|author=
suggested) (help) - ↑ "Stadtentwässerungsbetriebe Köln : Flood Management". Steb-koeln.de. Retrieved 2009-07-07.
- ↑ "Flood Defence Scheme City of Cologne" (PDF). Archived from the original (PDF) on 2009-03-24. Retrieved 2009-03-20.
- ↑ "Aqua Barrier Fights Cologne Flood". GEODESIGN AB. Archived from the original on 2010-08-13. Retrieved 2009-03-20.
- ↑ "C.Michael Hogan, ''Cologne Wharf'', The Megalithic Portal, editor Andy Burnham, 2007". Megalithic.co.uk. Retrieved 2009-07-24.
- ↑ "Rote Funken - Kölsche Funke rut-wieß vun 1823 e.V. - Rote Funken Koeln". Rote-funken.de. Retrieved 2009-05-05.
- ↑ ಕೊಲೋನ್ ಎವಾಕ್ಯುಯೇಟೆಡ್ Archived 2008-05-24 ವೇಬ್ಯಾಕ್ ಮೆಷಿನ್ ನಲ್ಲಿ., ಟೈಂ ಪತ್ರಿಕೆ , ಫೆಬ್ರವರಿ 15, 1926
- ↑ "Weimarer Wahlen". Web.archive.org. 2008-02-11. Archived from the original on 2008-02-11. Retrieved 2009-07-24.
- ↑ "Voting results 1919-1933 Cologne-Aachen". Wahlen-in-deutschland.de. Retrieved 2010-08-08.
- ↑ koelnarchitektur (2003-07-15). "on the reconstruction of Cologne". Koelnarchitektur.de. Retrieved 2009-07-24.
- ↑ "Synagogen-Gemeinde Köln". Sgk.de. 1931-06-26. Retrieved 2010-08-08.
- ↑ "Offizielle Webseite des Kölner Doms | Bedeutende Werke". Koelner-dom.de. Archived from the original on 2009-07-03. Retrieved 2009-05-05.
- ↑ "Strategic Management Society - Cologne Conference - Cologne Information". Cologne.strategicmanagement.net. 2008-10-14. Archived from the original on 2011-07-24. Retrieved 2010-07-26.
- ↑ "Homepage of the Uni-Center". Unicenterkoeln.de. Archived from the original on 2010-03-27. Retrieved 2010-08-08.
- ↑ "Kölner Philharmonie". Web.archive.org. 2007-12-11. Archived from the original on 2007-12-11. Retrieved 2010-08-08.
{{cite web}}
: CS1 maint: bot: original URL status unknown (link) - ↑ "Carnival - Cologne`s "fifth season" - Cologne Sights & Events - Stadt Köln". Web.archive.org. 2008-01-26. Archived from the original on 2008-01-25. Retrieved 2009-07-24.
- ↑ "C/o Pop Official Website". Archived from the original on 2010-12-13. Retrieved 2010-09-29.
- ↑ ಸ್ಠಾಡಟ್ - ಕಾಲೋನ್ ಕಾಲೋನ್ನ ವಾಣಿಜ್ಯದ ಮಾರ್ಗ' ದರ್ಶಿ(German)(English)
- ↑ ಬ್ರಿಟಾನಿಕ ವಿಶ್ವಕೋಶದ ಅನ್ ಲೈನ್ ನಲ್ಲಿ ಕಾಲೋನ್
- ↑ "Directory: World Airlines". Flight International. 2007-04-03. p. 107.
- ↑ "(German)[[ವರ್ಗ:Articles with German-language external links]] Über Ford - Standorte". Ford Germany. Retrieved 2009-06-20.
{{cite web}}
: URL–wikilink conflict (help) - ↑ "koeln.de/economy". Koeln.de. Archived from the original on 2010-08-01. Retrieved 2010-08-08.
- ↑ "Kölner Verkehrsbetriebe (KVB)". Kvb-koeln.de. Retrieved 2009-07-24.
- ↑ "Häfen und Güterverkehr Köln AG". Hgk.de. Archived from the original on 2011-07-19. Retrieved 2010-08-08.
- ↑ "Hochschulen - Wissensdurst KĂśln - Das KĂślner Wissenschaftsportal". Wissensdurst-koeln.de. Retrieved 2010-07-26.
- ↑ http://wissensdurst-koeln.de/wp-content/uploads/2010/04/flyer-spitzenforschung.pdf
- ↑ ೩೪.೦ ೩೪.೧ "goethe.de". goethe.de. Retrieved 2010-08-08.
- ↑ "Partnerstädte". Archived from the original on 2014-03-26. Retrieved 2009-06-22.
- ↑ "Lile Facts & Figures". Mairie-Lille.fr. Archived from the original on 2009-02-10. Retrieved 2007-12-17.
- ↑ "Kyoto City Web / Data Box / Sister Cities". www.city.kyoto.jp. Retrieved 2010-01-14.
- ↑ "Barcelona internacional - Ciutats agermanades" (in Spanish). © 2006-2009 Ajuntament de Barcelona. Archived from the original on 2012-11-27. Retrieved 2009-07-13.
{{cite web}}
: External link in
(help)CS1 maint: unrecognized language (link)|publisher=
- ↑ "Sister Cities". Beijing Municipal Government. Archived from the original on 2010-01-17. Retrieved 2008-09-23.
- ↑ "Twinning Cities". City of Thessaloniki. Archived from the original on 2009-03-31. Retrieved 2009-07-07.
- ↑ "::Bethlehem Municipality::". www.bethlehem-city.org. Archived from the original on 2014-07-13. Retrieved 2009-10-10.
ಹೊರಗಿನ ಕೊಂಡಿಗಳು
[ಬದಲಾಯಿಸಿ]Find more about ಕಲೋನ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಕೊಲೋನಿಪೇಡಿಯಾ, ಕಲೋನ್ ನಗರದ ಜಾಲತಾಣದ ಪುಟಗಳು
- (German)ಕಾಲೋನ್ವಿಕಿ, ಕಲೋನ್ ನಗರದ ಜಾಲತಾಣದ ಪುಟಗಳು
- ಕಲೋನ್ ನಗರ, ಕಲೋನ್ ನಗರದ ಅಧಿಕೃತ ಪೇಜ್
- ವಿಕಿಟ್ರಾವೆಲ್ ನಲ್ಲಿ ಕಲೋನ್ ಪ್ರವಾಸ ಕೈಪಿಡಿ (ಆಂಗ್ಲ)
Düsseldorf, Wuppertal, Essen, Dortmund | ||||
Aachen | Siegen | |||
Cologne | ||||
Bonn | Koblenz |
- CS1 maint: unrecognized language
- CS1 maint: extra punctuation
- CS1 maint: multiple names: authors list
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: bot: original URL status unknown
- Articles with German-language external links
- CS1 errors: URL–wikilink conflict
- CS1 errors: external links
- Pages with unresolved properties
- Articles with hatnote templates targeting a nonexistent page
- Pages using gadget WikiMiniAtlas
- Cities in North Rhine-Westphalia
- Lang and lang-xx template errors
- Articles with unsourced statements from May 2010
- Articles with invalid date parameter in template
- Convert invalid options
- ಕಲೋನ್
- ರೈನ್ ನದಿಪಾತ್ರದ ಮೇಲೆ ಜುನಸಾಂದ್ರತೆಯ ಸ್ಥಳಗಳು.
- ಕ್ಯಾಥೋಲಿಕ್ ಜನಾಂಗದ ತೀರ್ಥಯಾತ್ರಾ ತಾಣಗಳು
- ಹಗುರವಾದ ರೈಲ್ ವ್ಯವಸ್ಥೆಗಳ ಸಹಿತ ಜರ್ಮನ್ ನಗರಗಳು
- ಉತ್ತರ ಜರ್ಮನಿ ಹಾಗೂ ಅದರ ಸುತ್ತಮುತ್ತಲಿನ ಜನರು ಹನ್ಸಿಯಾಟಿಕ್ ಸಂಘದ ಸದಸ್ಯರು.
- ಜರ್ಮನಿಯಲ್ಲಿ ರೋಮನ್ನರ ಸೈನ್ಯದಳ ಜಾಗಗಳು
- ಹಬ್ಬ ಆಚರಿಸುವ ನಗರಗಳು ಮತ್ತು ಪಟ್ಟಣಗಳು
- ರೋಮನ್ ವಸಾಹತುಗಳು
- ಜರ್ಮನಿಯಲ್ಲಿರುವ ರೋಮನ್ ಪಟ್ಟಣಗಳು ಮತ್ತು ನಗರಗಳು
- ಸಾಮ್ರಾಜ್ಯಶಾಹಿ ಮುಕ್ತ ನಗರಗಳು.
- ಜರ್ಮನಿಯಲ್ಲಿರುವ ತುರ್ಕಿ ಪಂಗಡಗಳು
- ಜರ್ಮನಿ