ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ
ನಿಮ್ಮ iPhone ಅನ್ನು ನೀವು ಮೊದಲ ಬಾರಿಗೆ ಸೆಟಪ್ ಮಾಡಿದಾಗ ಕಾಣಿಸಿಕೊಳ್ಳುವ ಸ್ವಾಗತ ಸ್ಕ್ರೀನ್.

ಪ್ರಾರಂಭಿಸಿ

ನಿಮ್ಮ ಹೊಸ iPhone ಅನ್ನು ಬಳಸಲು ಪ್ರಾರಂಭಿಸುವ ಮೊದಲು ಕೆಲವು ಬೇಸಿಕ್ ಫೀಚರ್‌ಗಳನ್ನು ಸೆಟಪ್ ಮಾಡಿ.

ಬೇಸಿಕ್ಸ್ ಅನ್ನು ಸೆಟಪ್ ಮಾಡಿ

ಹಿನ್ನೆಲೆ ಚಿತ್ರವಾಗಿ ವೈಯಕ್ತಿಕ ಫೋಟೋವನ್ನು ಹೊಂದಿರುವ iPhone ಲಾಕ್ ಸ್ಕ್ರೀನ್.

ವೈಯಕ್ತೀಕರಿಸುವುದು

ನಿಮ್ಮ iPhone ನಿಮ್ಮ ವೈಯಕ್ತಿಕ ಶೈಲಿ ಮತ್ತು ಆದ್ಯತೆಗಳನ್ನು ತೋರಿಸಬಲ್ಲದು. ಲಾಕ್ ಸ್ಕ್ರೀನ್‌ನಲ್ಲಿ ನಿಮ್ಮ ನೆಚ್ಚಿನ ಫೋಟೋಗಳನ್ನು ತೋರಿಸಿ, ಹೋಮ್ ಸ್ಕ್ರೀನ್‌ಗೆ ವಿಜೆಟ್‌ಗಳನ್ನು ಸೇರಿಸಿ, ಹಾಗೂ ಪಠ್ಯದ ಗಾತ್ರ, ರಿಂಗ್‌ಟೋನ್‌ಗಳು ಮತ್ತು ಹೆಚ್ಚಿನವುಗಳನ್ನು ಸರಿಹೊಂದಿಸಿ.

ನಿಮ್ಮ iPhone ಅನ್ನು ನಿಮ್ಮದಾಗಿಸಿಕೊಳ್ಳಿ

ಕ್ಯಾಮರಾ ಸ್ಕ್ರೀನ್ ಫೋಟೋ ಮೋಡ್‌ನಲ್ಲಿದೆ. ಕ್ಯಾಮರಾ ಫ್ರೇಮ್‌ನಲ್ಲಿ, ವಸ್ತುವಿನ ಸೆಲ್ಫಿಯನ್ನು ತೆಗೆದುಕೊಳ್ಳುವ ದೃಶ್ಯ.

ನಿಮ್ಮ ಅತ್ಯುತ್ತಮ ಶಾಟ್ ಅನ್ನು ತೆಗೆದುಕೊಳ್ಳಿ

ನೀವು ಎಲ್ಲಿದ್ದರೂ ಆ ಕ್ಷಣವನ್ನು ಸೆರೆಹಿಡಿಯಲು ನಿಮ್ಮ iPhone ಅನ್ನು ಬಳಸಿ. ತ್ವರಿತವಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ ಮತ್ತು ನಿಮ್ಮ iPhoneನಲ್ಲಿನ ಇತರ ಕ್ಯಾಮರಾ ಫೀಚರ್‌ಗಳನ್ನು ಬಳಸಿ.

ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ

iPhoneನಲ್ಲಿ FaceTime ಕರೆ.

ಕನೆಕ್ಟ್ ಆಗಿಯೇ ಇರಿ

iPhone ನಿಮಗೆ ಮುಖ್ಯವಾಗಿರುವ ಜನರನ್ನು ಸುಲಭವಾಗಿ ಸಂಪರ್ಕಿಸುವಂತೆ ಅನುವುಮಾಡಿಕೊಡುತ್ತದೆ. ಅವರನ್ನು ನಿಮ್ಮ ಸಂಪರ್ಕಗಳಿಗೆ ಸೇರಿಸುವುದರಿಂದ ನಿಮಗೆ ಎಲ್ಲೇ ಅವರ ಮಾಹಿತಿ ಬೇಕೆಂದರೂ ಲಭ್ಯವಿರುತ್ತದೆ—ನಂತರ ಪಠ್ಯ ಸಂದೇಶಗಳು, ಫೋನ್ ಕರೆಗಳು ಅಥವಾ FaceTime ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಿ.

ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಕುಟುಂಬ ಹಂಚಿಕೆ ಸ್ಕ್ರೀನ್. ಕುಟುಂಬದ ಐವರು ಸದಸ್ಯರನ್ನು ಪಟ್ಟಿ ಮಾಡಲಾಗಿದೆ. ಅವರ ಹೆಸರುಗಳ ಕೆಳಗೆ ಕುಟುಂಬ ಚೆಕ್‌ಲಿಸ್ಟ್ ಇದೆ ಹಾಗೂ ಅದರ ಕೆಳಗೆ ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಖರೀದಿ ಹಂಚಿಕೆ ಆಯ್ಕೆಗಳಿವೆ.

ಕುಟುಂಬದ ಎಲ್ಲರೂ

ಅರ್ಹ ಆ್ಯಪ್ ಖರೀದಿಗಳು, ನಿಮ್ಮ ಸ್ಥಳ ಮತ್ತು ಆರೋಗ್ಯದ ಡೇಟವನ್ನು ಹಂಚಿಕೊಳ್ಳಲು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಕುಟುಂಬ ಹಂಚಿಕೆಯನ್ನು ಬಳಸಬಹುದು. ನಿಮ್ಮ ಪಾಸ್‌ಕೋಡ್ ಅನ್ನು ನೀವು ಮರೆತಿದ್ದರೆ ನಿಮ್ಮ iPhoneನ ಆ್ಯಕ್ಸೆಸ್ ಅನ್ನು ಮರಳಿ ಪಡೆಯುವುದಕ್ಕೆ ನಿಮಗೆ ಸಹಾಯ ಮಾಡುವ ಕುಟುಂಬದ ಸದಸ್ಯರು ಅಥವಾ ನೀವು ವಿಶ್ವಾಸವಿಡುವ ಯಾರನ್ನಾದರೂ ಸಹ ಆಯ್ಕೆಮಾಡಬಹುದು.

ನಿಮ್ಮ ಕುಟುಂಬದೊಂದಿಗೆ ಫೀಚರ್‌ಗಳನ್ನು ಹಂಚಿಕೊಳ್ಳಿ

ಮನೆ ಆ್ಯಪ್‌ನಲ್ಲಿರುವ ನನ್ನ ಮನೆ ಎಂಬ ಸ್ಕ್ರೀನ್.

ನಿಮ್ಮ ದಿನವನ್ನು ಸರಳಗೊಳಿಸಿ

ನೀವು ಹೆಚ್ಚಾಗಿ ಹೋಗುವ ಸ್ಥಳಗಳಿಗೆ ನಿಮ್ಮನ್ನು ನಿರ್ದೇಶಿಸಲು, ನಿಮ್ಮ ಬೆಳಗಿನ ಕಾಫಿಗೆ ಪಾವತಿಸಲು, ಮುಖ್ಯವಾದ ಕೆಲಸಗಳನ್ನು ನಿಮಗೆ ನೆನಪಿಸಲು ಮತ್ತು ನೀವು ಮನೆಯಿಂದ ಹೊರಟಾಗ ಮುಂಬಾಗಿಲನ್ನು ಸ್ವಯಂಚಾಲಿತವಾಗಿ ಲಾಕ್ ಮಾಡಲು ಸಹ ನಿಮ್ಮ iPhoneನಲ್ಲಿನ ಆ್ಯಪ್‌ಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಿರಿ.

ನಿಮ್ಮ ದೈನಂದಿನ ದಿನಚರಿಗಳಿಗಾಗಿ iPhone ಬಳಸುವುದು

ಬ್ಯಾಟರಿ ಬಳಕೆಯನ್ನು ಮತ್ತು ಬ್ಯಾಟರಿ 90% ಚಾರ್ಜ್ ಆಗಿದೆ ಎಂಬುದನ್ನು ತೋರಿಸುತ್ತಿರುವ iPhone ಸ್ಕ್ರೀನ್.

ತಜ್ಞ ಸಲಹೆಗಳು

ನಿಮ್ಮ iPhone ಮತ್ತು ನೀವು ಅದರಲ್ಲಿಡುವ ಮಾಹಿತಿಯನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿ ಇರಿಸಲು Apple ಬೆಂಬಲ ಸಲಹೆಗಾರರು ನೀಡಿರುವ ಈ ಸಲಹೆಗಳನ್ನು ಪರಿಶೀಲಿಸಿ.

Apple ಬೆಂಬಲದಿಂದ ತಜ್ಞರ ಸಲಹೆ

iPhone Duo ಮೂರು ಸ್ಥಾನಗಳಲ್ಲಿ: ಭಾಗಶಃ ಮಡಚಿದ್ದು ಸಮಯವನ್ನು ತೋರಿಸುತ್ತಿದೆ, ಕ್ಯಾಮರಾದಲ್ಲಿ ತೆರೆದಿದೆ ಮತ್ತು ಭಾಗಶಃ ಮಡಚಿದ್ದು ವೀಡಿಯೊವನ್ನು ಪ್ಲೇ ಮಾಡುತ್ತಿದೆ.

iPhone Duo ಬಗ್ಗೆ ತಿಳಿದುಕೊಳ್ಳುವುದು

iPhone Duo ತೆರೆದಾಗ ಅತಿ ದೊಡ್ಡ iPhone ಡಿಸ್‌ಪ್ಲೇ ಕಾಣಿಸುತ್ತದೆ ಮತ್ತು iPhone ಅನ್ನು ಬಳಸಲು ಹೊಸ ಮಾರ್ಗಗಳನ್ನು ಪರಿಚಯಿಸುತ್ತದೆ. ನೀವು iPhone Duo ತೆರೆದಾಗ, ಮುಚ್ಚಿದಾಗ ಮತ್ತು ಭಾಗಶಃ ಮಡಚಿದಾಗ iOS ಅದಕ್ಕೆ ಹೊಂದಿಕೊಳ್ಳುತ್ತದೆ, ಇದರಿಂದ ನೀವು ಹೆಚ್ಚು ತಲ್ಲೀನರಾಗಿ ಬಳಸಬಹುದು.

iPhone Duoದಲ್ಲಿ ಹೊಸತೇನಿದೆ ಎಂಬುದನ್ನು ತಿಳಿದುಕೊಳ್ಳಿ

iPhone ಬಳಕೆದಾರರ ಮಾರ್ಗದರ್ಶಿಯನ್ನು ಓದಲು, ಪುಟದ ಮೇಲ್ಭಾಗದಲ್ಲಿರುವ ಪರಿವಿಡಿಯನ್ನು ಕ್ಲಿಕ್ ಮಾಡಿ ಅಥವಾ ಹುಡುಕಾಟ ಫೀಲ್ಡ್‌ನಲ್ಲಿ ಒಂದು ಪದ ಅಥವಾ ಫ್ರೇಸ್ ಅನ್ನು ನಮೂದಿಸಿ.

ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.